hqdefault

ಬಿಡದಿ: ಬೆಂಗಳೂರು ನಗರದ ಹೊರವಲಯ ಬಿಡದಿಯಲ್ಲಿರುವ ಇನ್ನೋವೇಟಿವ್ ಫಿಲ್ಮಿ ಸಿಟಿಯಲ್ಲಿ ಭಾರಿ ಅಗ್ನಿ ಅವಘಡ ಸಂಭವಿದ್ದ ಪರಿಣಾಮ ಅವರಣದಲ್ಲಿಯೇ ಇದ್ದ ಬಿಗ್ ಬಾಸ್ ಮನೆ ಬೆಂಕಿಗಾಹುತಿಯಾಗಿದೆ.

ಇನ್ನೋವೇಟಿವ್ ಫಿಲ್ಮ್ ಸಿಟಿಯ ಆವರಣದಲ್ಲಿರುವ ಮೇಣದ ಮ್ಯೂಸಿಯಂನಲ್ಲಿ ಮೊದಲಿಗೆ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ಕಾಣಿಸಿಕೊಂಡಿದ್ದು, ಕ್ರಮೇಣ ಇದಕ್ಕೆ ಹೊಂದಿಕೊಂಡಿರುವ ಕನ್ನಡದ ರಿಯಾಲಿಟಿ ಶೋ ನಡೆಸುವ ಬಿಗ್ ಬಾಸ್ ಮನೆಗೂ ಬೆಂಕಿ ಆವರಿಸಿದೆ.

ಸುದ್ದಿತಿಳಿದು ಸ್ಥಳಕ್ಕಾಗಮಿಸಿದ  ಸ್ಥಳಕ್ಕೆ10ಕ್ಕೂ ಹೆಚ್ಚು ಅಗ್ನಿ ಶಾಮಕ ದಳದ ವಾಹನಗಳೂ ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ದು, ಬೆಂಕಿ ಅವಘಡಕ್ಕೆ ಮೇಲ್ನೋಟಕ್ಕೆ ಶಾರ್ಟ್ ಸರ್ಕ್ಯೂಟ್ ಕಾರಣ ಎಂದು ತಿಳಿದು ಬಂದಿದೆ.

ಇನ್ನು ಈ ಅವಘಡದಿಂದ ಕೋಟ್ಯಾಂತರ ರೂ. ನಷ್ಟ ಸಂಭವಿಸಿದೆ ಎನ್ನಲಾಗಿದೆ.

By Suddi9

Leave a Reply

Your email address will not be published. Required fields are marked *