ಬಂಟ್ವಾಳ : ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಪೂಂಜೆರೆಕೋಡಿ ಬೈಪಾಸ್ ಬಿ.ಸಿ.ರೋಡ್ ನ ಶಿವಜ್ಯೋತಿ ಭವನದಲ್ಲಿ 82ನೇ ಶಿವಜಯಂತಿ ಆಚರಣೆ ಜರಗಿತು.ಪುರಸಭಾ ಸದಸ್ಯರಾದ ಭಾಸ್ಕರ್ ಟೈಲರ್ ಧ್ವಜಾರೋಹಣ ನೆರವೇರಿಸಿ ಶಿವನ ಜಾಗರಣೆಯಲ್ಲಿ ಎಲ್ಲರೂ ಭಕ್ತಿಯಿಂದ ಭಾಗವಹಿಸಬೇಕೆಂದು ನುಡಿದರು.KAR_6336

ಜಗತ್ತಿನ ಎಲ್ಲೆಡೆ ಅಶಾಂತಿ ಸೃಷ್ಟಿಯಾಗುತ್ತಿದ್ದು ವಿಶ್ವದೆಲ್ಲೆಡೆ ಶಾಂತಿಯ ವಾತಾವರಣ ನೆಲೆಸಬೇಕೆಂದು ಮಂಜುನಾಥ ಕಲ್ಯಾಣ ಮಂಟಪದ ಪ್ರಬಂಧಕ ವಿಶಾಲ್ ಹೆಗ್ಡೆ ನುಡಿದರು.ಶ್ರದ್ಧೆ ಮತ್ತು ಭಕ್ತಿಯಿಂದ ಪ್ರಾರ್ಥನೆ ಸಲ್ಲಿಸಿದರೆ ನಮಗೆ ದೇವರ ರಕ್ಷಣೆ ಹೆಚ್ಚುತ್ತಾ ಹೋಗುತ್ತದೆ. ಭಗವಂತನ ಸಂಪರ್ಕಕ್ಕೆ ಆತ್ಮ ಹಾಗೂ ದೇಹಗಳು ಸಾಧನ ಎಂದು ಉದ್ಯಮಿ ಐತಪ್ಪ ಆಳ್ವ ಹೇಳಿದರು.

ಬಿ.ಸಿ.ರೋಡ್ ಶಾಖೆಯ ಸಂಚಾಲಕಿ ಬ್ರಹ್ಮಕುಮಾರಿ ಸಾವಿತ್ರಿ ಯವರು ಸ್ವಾಗತಿಸಿದರು. ಸೇವಾಕೇಂದ್ರದ ಸಂಯೋಜಕ ಬ್ರಹ್ಮಕುಮಾರ ಗಣಪತಿ ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಪಾಣೆಮಂಗಳೂರು ಮೆಟ್ರಿಕ್ ವಿದ್ಯಾರ್ಥಿ ನಿಲಯದ ಮಕ್ಕಳಿಂದ ಸಾಂಸ್ಕøತಿ ಕಾರ್ಯಕ್ರಮಗಳು ಜರಗಿದವು.

By Suddi9

Leave a Reply

Your email address will not be published. Required fields are marked *