ಬಂಟ್ವಾಳ: ಪುದು ಗ್ರಾಮ ಪಂಚಾಯತ್ ಗೆ ಫೆ.18 ರಂದು ನಡೆಯುವ ಚುನಾವಣೆಯಲ್ಲಿ 28 ರಿಂದ 30 ಸ್ಥಾನಗಳಲ್ಲಿ ಕಾಂಗ್ರೆಸ್ ಬೆಂಬಲಿತರು ಗೆಲುವು ಸಾಧಿಸುವ ಮೂಲಕ ಆಡಳಿತದ ಚುಕ್ಕಾಣಿ ಹಿಡಿಯಲಿದೆ ಎಂದು ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕಾಜವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಶನಿವಾರ ಬಿ.ಸಿ.ರೋಡ್ ಪ್ರೆಸ್ ಕ್ಲಬ್ ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಸಚಿವ ಯು.ಟಿ.ಖಾದರ್ ಅವರು ಪುದು ಪಂಚಾಯತ್ ವ್ಯಾಪ್ತಿಯಲ್ಲಿ ಮಾಡಿರುವ ಅಭಿವೃದ್ದಿ ಕಾರ್ಯಗಳೇ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಗೆಲುವಿಗೆ ಶ್ರೀರಕ್ಷೆಯಾಗಲಿದೆ ಎಂದರು.
ಈ ಹಿಂದೆ 32 ಸದಸ್ಯ ಬಲವನ್ನು ಹೊಂದಿದ ಪುದು ಪಂಚಾಯತ್ ಈ ಬಾರಿ 2 ಸ್ಥಾನವನ್ನು ಹೆಚ್ಚಿಸಿ ಕೊಂಡಿದ್ದು, ಸದಸ್ಯರ ಸಂಖ್ಯೆ 34 ಕ್ಕೆ ಏರಿದೆ,ಎಲ್ಲಾ ಸ್ಥಾನಗಳಿಗೂ ಸಮರ್ಥ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿದ್ದು,ಮತದಾರರು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳನ್ನು ಗೆಲ್ಲಿಸಲಿದ್ದಾರೆಎಂದು ವಿಶ್ವಾಸ ವ್ಯಕ್ತಪಡಿಸಿದರು.
*ಆರೋಪಿಸುವುದೇ ಕೆಲಸ*:
ವಾಡ್೯ಗಳ ವಿಂಗಡಣೆಯಲ್ಲಿ ಯಾವುದೇ ಗೊಂದಲವಿಲ್ಲ,ಈ ಕುರಿತು ತಹಶೀಲ್ದಾರರಿಗೆ ಸಮರ್ಪಕವಾದ ವಿವರಣೆ ನೀಡಲಾಗಿದ್ದು,ಗೊಂದಲ ನಿವಾರಣೆಯಾಗಿದೆ.ಎಸ್ .ಡಿ.ಪಿ.ಐ.ಗೆ ಆರೋಪ ಮಾಡುವುದೇ ಕೆಲಸವಾಗಿದೆ ಎಂದು ಮಾಜಿ ಜಿಪಂ ಸದಸ್ಯ ಉಮ್ಮರ್ ಫಾರೂಕ್ ಆರೋಪಿಸಿದ್ದಾರೆ. ಇಲ್ಲಿ ಎಸ್ ಡಿ ಪಿ ಐ ಮತ್ತು ಬಿಜೆಪಿ ಒಳ ಒಪ್ಪಂದವನ್ನು ಮಾಡಿಕೊಂಡಿದೆ ಎಂದ ಅವರು,ಸಚಿವ ಯು.ಟಿ.ಖಾದರ್ ಅವರು ಅಭಿವೃದ್ದಿ ಕಾರ್ಯದ ಮೂಲಕ ಮಾದರಿ ಪಂಚಾಯತ್ ಯನ್ನಾಗಿ ರೂಪಿಸಿದ್ದಾರೆ, ಸೂಕ್ತ ಸರಕಾರಿ ಜಮೀನಿನ ಲಭ್ಯತೆ ಇಲ್ಲದಿರುವುದರಿಂದ ಸುಸಜ್ಜಿತ ಮೀನು ಮಾರ್ಕೆಟ್ ನಿರ್ಮಾಣಕ್ಕೆ ಸಾಧ್ಯವಾಗಿಲ್ಲ ಎಂದು ತಿಳಿಸಿದರು.
ಇದೇವೇಳೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದರು.ಸುದ್ದಿಗೋಷ್ಟಿಯ
