download (1)

ಕಾರ್ಕಳ: ಪತ್ನಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪತಿಯನ್ನು ಉಡುಪಿ ಡಿಸಿಐಬಿ ತಂಡ ಭಟ್ಕಳ ರೈಲ್ವೆ ನಿಲ್ದಾಣದ ಬಳಿ ಬಂಧಿಸುವಲ್ಲಿ ಬುಧವಾರ ಯಶಸ್ವಿಯಾಗಿದೆ.

ಬಂಧಿತನನ್ನು ಸಂತ್ರಸ್ತೆ ಮಹಿಳೆಯ ಪತಿ ಸಂತೋಷ್ ಎಂದು ಗುರುತಿಸಲಾಗಿದ್ದು, ಆರೋಪಿಯನ್ನು ಅಜೆಕಾರು ಪೊಲೀಸರ ವಶಕ್ಕೆ  ಒಪ್ಪಿಸಿದ್ದಾರೆ.

 ಏನಿದು ಪ್ರಕರಣ: ಜ. 27 ರಂದು ಕಾರ್ಕಳದ ಕುಕ್ಕುದಡೆ ನಿವಾಸಿ ಸಂತೋಷ್ ಪತ್ನಿ ಅನುಶ್ರೀ (23) ಅವರು ತೆಳ್ಳಾರು, ಬಾಲಾಜೆ ಹೆರ್ಮುಡೆಯಲ್ಲಿರುವ ತನ್ನ ತವರು ಮನೆಗೆ ತೆರಳುತ್ತಿದ್ದ  ವೇಳೆ, ಪತಿ ಸಂತೋಷ್ ಅಡ್ಡಗಟ್ಟಿ ಕತ್ತಿಯಿಂದ ಕೈ ಕಾಲುಗಳಿಗೆ ಕಡಿದು ಪರಾರಿಯಾಗಿದ್ದನು. ಈ ಬಗ್ಗೆ ಆತನ ವಿರುದ್ಧ  ದೂರು ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಡಿಸಿಐಬಿ ತಂಡ ಬಂಧಿಸಿದೆ.

 

By Suddi9

Leave a Reply

Your email address will not be published. Required fields are marked *