SRINAGR

ಶ್ರೀನಗರ:  ವೈದ್ಯಕೀಯ ತಪಾಸಣೆಗಾಗಿ  ಕರೆತಂದಿದ್ದ ಪಾಕಿಸ್ತಾನದ ಕೈದಿಯನ್ನು ಬಿಡುಗಡೆಗೆ  ಉಗ್ರರು ಆಸ್ಪತ್ರೆ ಮೇಲೆ ದಾಳಿ ನಡೆಸಿದ್ದಾರೆ.

ಇಲ್ಲಿನ ಶ್ರೀಮಹಾರಾಜ್ ಹರಿ ಸಿಂಗ್(ಎಸ್‌ಎಂಎಚ್‌ಎಸ್) ಸರಕಾರಿ ಆಸ್ಪತ್ರೆ ಯಲ್ಲಿ ಪೊಲೀಸ್ ಬೆಂಗಾವಲಿನಲ್ಲಿ  ಕೈದಿಯನ್ನು ಕರೆ ತರಲಾಗುತ್ತಿತ್ತು. ಈ ವೇಳೆ ದಾಳಿ ನಡೆಸಿದ ಉಗ್ರರು ಕೈದಿ ಪರಾರಿಯಾಗಲು ನೆರವಾಗಿದ್ದಾರೆ.  ಪೊಲೀಸರು ಹಾಗೂ ಉಗ್ರರ  ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಪೊಲೀಸರು ಗಾಯಗೊಂಡಿದ್ದು, ಒರ್ವ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಪರಾರಿಯಾದ ಪಾಕಿಸ್ತಾನದ ಕೈದಿಯನ್ನು   ನವೀದ್‌ ಎಂದು ತಿಳಿದುಬಂದಿದೆ.  ದಾಳಿಯ ಬಳಿಕ ಉಗ್ರರು ಕೂಡ ಸ್ಥಳದಿಂದ ಪರಾರಿಯಾಗಿದ್ದು ಅವರ ಪತ್ತೆಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಘಟನೆಯ ಬಳಿಕ ಆಸ್ಪತ್ರೆಯ ಸುತ್ತ ಭದ್ರತಾ ಪಡೆಗಳು ಸುತ್ತುವರಿದಿವೆ.

By Suddi9

Leave a Reply

Your email address will not be published. Required fields are marked *