triple-talaq-sc-22-1503370486

ಕಲಬುರಗಿ: ಆಲ್ ಇಂಡಿಯಾ ಮುಸ್ಲಿಂ ಪರ್ಸ್ ನಲ್ ಲಾ ಬೋರ್ಡ್‌ ನಿರ್ದೇಶನದಂತೆ ತಹಪುಜ- ಎ- ಶರಿಯರ್, ಶರಿಯತ್ ಅನ್ನು ರಕ್ಷಿಸಿ ಅಭಿಯಾನದ ಅಡಿಯಲ್ಲಿ ತ್ರಿವಳಿ ತಲಾಕ್ ಮಸೂದೆ ವಿರೋಧಿಸಿ ಫೆ. 8 ರಂದು ಬೆಳಗ್ಗೆ 11ಕ್ಕೆ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಹುವುದು ಎಂದು ಅತಿಯಾ ಸುಲ್ತಾನ ತಿಳಿಸಿದ್ದಾರೆ.

ಮಂಗಳವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಭಾರತದಂತಹ ಸರ್ವ ಧರ್ಮ ಸಹಿಷ್ಣು ರಾಷ್ಟ್ರದಲ್ಲಿ ಕೇಂದ್ರ ಸರ್ಕಾರ ಮುಸ್ಲಿಂ ಧರ್ಮವನ್ನು ಗುರಿಯಾಗಿಸಿಕೊಂಡು ಧಾರ್ಮಿಕವಾಗಿ ಹಲ್ಲೆ ನಡೆಸಿರುವುದು ಆತಂಕದ ವಿಷಯ ಎಂದರು.

ಮುಸ್ಲಿಂ ಧರ್ಮವು ಮಹಿಳೆಯರಿಗೆ ನೀಡುವ ಹಕ್ಕು ಸ್ವಾತಂತ್ರ್ಯ ಪ್ರಪಂಚದ ಬೇರೆ ಯಾವ ಧರ್ಮವೂ ನೀಡಿಲ್ಲ. ಮಸೂದೆ ವಾಪಸ್ ಗೆ ಕೇಂದ್ರ ಸರ್ಕಾರ ಸೂಕ್ತ ಕ್ರಮ ಕೈ ಗೊಳ್ಳಬೇಕು. ಇಲ್ಲದಿದ್ದಲ್ಲಿ ಮಹಿಳೆಯರು ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಡಾ. ರಬಿಯಾ ಖಾನೂಮ್, ಶಮಾ ಸುಲ್ತಾನಾ, ಆಲಿಯಾ ಶಿರಿನ್, ಡಾ. ಅನೀಸ್ ಇದ್ದರು

 

By Suddi9

Leave a Reply

Your email address will not be published. Required fields are marked *