ಬಂಟ್ವಾಳ: ನವೋದಯ ಯುವಕ ಸಂಘ (ರಿ). ಮೈರಾನ್ ಪಾದೆ , ಕಾಮಾಜೆ ಇದರ 28ನೇ ವಾರ್ಷಿಕೋತ್ಸವ ಮತ್ತು ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಮೈರಾನ್‍ಪಾದೆ ನವೋದಯ ರಂಗಮಂದಿರದಲ್ಲಿ ನಡೆಯಿತು.DSC_0584

ಕಾರ್ಯಕ್ರಮದಲ್ಲಿ ಬೆಂಗಳೂರು ವಕೀಲರಾದ ಲಕ್ಮೀಶ, ರೋಟರಿ ಅಧ್ಯಕ್ಷ ಸಂಜೀವ ಪೂಜಾರಿ ಗಾಣದಪಡ್ಪು, ಕಾಮಾಜೆ ಕಾಲೇಜಿನ ಪ್ರಾಂಶುಪಾಲ ಗಿರೀಶ್ ಭಟ್ ಅಜಕ್ಕಳ, ಪುರಸಭಾ ಸದಸ್ಯ ಭಾಸ್ಕರ್ ಟೈಲರ್ ಕಾಮಾಜೆ, ಸಂಘದ ಅಧ್ಯಕ್ಷ ಚರಣ್ ರಾಜ್ ಕಾಮಾಜೆ, ಉಪಾಧ್ಯಕ್ಷ ಯಾದವ ಮೈರಾನ್‍ಪಾದೆ ಕಾರ್ಯದರ್ಶಿ ಪುರುಷೋತ್ತಮ ಮೈರಾನ್‍ಪಾದೆ, ಕೋಶಾಧಿಕಾರಿ ಶಶಿಧರ ಕಾಮಾಜೆ ಉಪಸ್ಥಿತರಿದ್ದರು.

ಈ ಕಾರ್ಯಕ್ರಮದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿನಿ ಕು| ತೃಪ್ತಿ ಕಾಮಾಜೆ ಮತ್ತು ಮಾಜಿ ಸೈನಿಕ ದಿನೇಶ್ ಬಿ.ಆರ್ಮಿ ನೆಟ್ಲ ಅವರನ್ನು ಸನ್ಮಾನಿಸಲಾಯಿತು. ಶ್ರವಣ್ ಮೈರಾನ್‍ಪಾದೆ ಸ್ವಾಗತಿಸಿ ಬಾಲಕೃಷ್ಣ ಕಾಮಾಜೆ ವಂದಿಸಿದರು. ತಿಲಕ್ ಕಾಮಾಜೆ ವರದಿ ವಾಚಿಸಿದರು.

By Suddi9

Leave a Reply

Your email address will not be published. Required fields are marked *