ಬಂಟ್ವಾಳ: ತೋಟಗಾರಿಕೆ ಇಲಾಖೆ ಬಂಟ್ವಾಳ, ಜಿ.ಪಂ.ಮಂಗಳೂರು ಹಾಗೂ ಪುರಸಭೆ ಬಂಟ್ವಾಳ ಇವರ ಸಹಯೋಗ ದೊಂದಿಗೆ ,2017_18 ನೇ ಸಾಲಿನಲ್ಲಿ ಕೈತೋಟ ಮತ್ತು ತಾರಸಿ ತೋಟಗಳ ಅಭಿವೃದ್ಧಿ ಗಾಗಿ ಉತ್ತೇಜನ ಕಾರ್ಯಕ್ರಮ ದಡಿ ರೈತರಿಗೆ ತರಬೇತಿ ಶನಿವಾರ ಪುರಸಭೆ ಸಭಾಭವನದಲ್ಲಿ ನಡೆಯಿತು ಕಾರ್ಯಕ್ರಮಕ್ಕೆ ಅಗಮಿಸಿದ ಉಸ್ತವಾರಿ ಸಚಿವ ಬಿ.ರಮನಾಥ ರೈ ಅವರು ಟೆರೆಸಿ ನಲ್ಲಿ ಕ್ರಷಿ ಮಾಡುವ ಸುಮಾರು ಐವತ್ತು ಮಂದಿ ಫಲಾನುಭವಿಗಳಿಗೆ ಟೆರೆಸಿ ಕಿಟ್ ವಿತರಿಸಿದರು .
ಬಳಿಕ ಮಾತನಾಡಿ ದ ಅವರು ಜಮೀನಿನ ಲಭ್ಯತೆ ಕಡಿಮೆ ಇರುವ ವರಿಗೆ ಟೆರೆಸ್ ಮೇಲೆ ತರಕಾರಿ ಕ್ರಷಿ ಮಾಡಲು ಉತ್ತೇಜನ ನೀಡುವ ಕೆಲಸವನ್ನು ಯೋಟಗಾರಿಕೆ ಇಲಾಖೆ ಮಾಡಿದೆ. ವರ್ತಮಾನ ಕಾಲದಲ್ಲಿ ವಿಷರಹಿತ ಸಾವಯುವ ಕೃಷಿ ಯನ್ನು ಮಾಡಿ ಆರೋಗ್ಯ ವ್ರದ್ದಿಸಲು ಇದು ಸಹಕಾರಿಯಾಗುತ್ತದೆ ಎಂದು ಹೇಳಿದರು.
ಪುರಸಭಾ ಅದ್ಯಕ್ಷ ರಾಮಕೃಷ್ಣ ಆಳ್ವ, ಉಪಾಧ್ಯಕ್ಷ ಮಹಮ್ಮದ್ ನಂದರಬೆಟ್ಟು, ಬೂಡಾ ಅದ್ಯಕ್ಷ ಸದಾಶಿವ ಬಂಗೇರ, ತಾ.ಪಂ.ಉಪಾಧ್ಯಕ್ಷ ಅಬ್ಬಾಸ್ ಆಲಿ, ಜಿ.ಪಂ.ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ಪುರಸಭಾ ಸ್ಥಾಯಿ ಅದ್ಯಕ್ಷ ವಾಸು ಪೂಜಾರಿ, ಸಮುದಾಯ ಸಂಘಟನಾಧಿಕಾರಿ ಮತ್ತಾಡಿ ಸಹಾಯಕತೋಟಕಾರಿಕಾ ಅಧಿಕಾರಿ ದಿನೇಶ್ ನಾಮನಿರ್ದೇಶನ ಸದಸ್ಯ ಸಿದ್ದೀಕ್ ನಂದರಬೆಟ್ಟು, ಪುರಸಭಾ ಸದಸ್ಯರಾದ ಪ್ರವೀಣ್ ಬಿ. ಜಗದೀಶ್ ಕುಂದರ್, ವಸಂತಿ ಚಂದಪ್ಪ, ಜೆಸಿಂತಾ , ಪುರಸಭಾ ಮುಖ್ಯಾಧಿಕಾರಿ ರೇಖಾ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು

