ದಕ್ಷಿಣಕನ್ನಡಜಿಲ್ಲೆಯನ್ನು ಹಲವಾರು ವೈಶಿಷ್ಟ್ಯಪೂರ್ಣ ದೇವಾಲಯಗಳ ಜಿಲ್ಲೆಯೆಂದೇ ಪ್ರಸಿದ್ದಿಯನ್ನು ಪಡೆದಿದೆ. ಏಕೆಂದರೆಇಲ್ಲಿನ ಹಲವಾರು ವೈವಿಧ್ಯಮಯ ತಾಣಗಳಲ್ಲಿ ದೇವಾಲಯಗಳನ್ನು ಕಾಣಬಹುದಾಗಿದ್ದು, ಅಂತಹ ಹಲವಾರು ಪುರಾತನವಾದ ಐತಿಹಾಸಿಕ ದೇವಾಲಯಗಳ ಸಾಲಿನಲ್ಲಿ ಮಂಗಳೂರು ತಾಲೂಕಿನಬಡಗಎಕ್ಕಾರುಗ್ರಾಮದ‘ನೆಲ್ಲಿತೀರ್ಥ’ ಸೋಮನಾಥೇಶ್ವರಗುಹಾದೇವಾಲಯವುಗುಹೆಯೊಳಗೇ ನಿರ್ಮಾಣಗೊಂಡಿರುವುದರಿಂದ ವಿಭಿನ್ನ ಸ್ಥಾನದಲ್ಲಿನಿಲ್ಲುತ್ತದೆ. ಈ ದೇವಾಲಯದ ಅಸ್ತಿತ್ವವು ಕ್ರಿ.ಶ 1487ರಲ್ಲಿ ಜನ ಸಾಮಾನ್ಯರಅರಿವಿಗೆ ಬಂದಿದ್ದು, ಅದಕ್ಕಿಂತಲೂಅದೆಷ್ಟೋ ವರ್ಷಗಳ ಹಿಂದೆಯೇ ಈ ಗುಹಾಲಯದ ಅಸ್ತಿತ್ವವಿತ್ತೆಂದು ಇಲ್ಲಿನ ಸ್ಥಳ ಪುರಾಣವು ತಿಳಿಸುತ್ತದೆ.
ಮಂಗಳೂರು ತಾಲೂಕಿನಿಂದ ಸುಮಾರು 30ಕಿ.ಮೀ ದೂರದ ಹಚ್ಚ ಹಸುರಿನ ಪ್ರಕೃತಿಯ ಮಡಿಲಲ್ಲಿ ನೆಲ್ಲಿತೀರ್ಥ ಗುಹಾ ದೇವಾಲಯವಿದೆ.ಈ ನೆಲ್ಲಿತೀರ್ಥ ಗುಹಾ ದೇವಾಲಯವು ಪ್ರತೀ ವರ್ಷದತುಲಾ ಸಂಕ್ರಮಣದಂದುತೆರೆದುಕೊಂಡು ಮಳೆಗಾಲ ಪ್ರಾರಂಭವಾಗುತ್ತಿದ್ದಂತೆಅಂದರೆಮೇಷ ಸಂಕ್ರಮಣದಂದುಸಕಲ ವಿಧಿ ವಿಧಾನಗಳೊಂದಿಗೆ ಮುಚ್ಚಿಕೊಳ್ಳುತ್ತದೆ.ಈ ದೇವಾಲಯದ ಪ್ರಮುಖ ವೈಶಿಷ್ಟ್ಯವೆಂದರೆದೇವಾಲಯದ ಬಲಭಾಗದಲ್ಲಿ ಸ್ವಲ್ಪದೂರ ಕ್ರಮಿಸಿದರೆ ಇಲ್ಲಿಯೇ ಸಮೀಪದಲ್ಲಿರುವಗುಹೆಯುಅತ್ಯಂತ ಸುಂದರವಾಗಿದೆ. ಸರಿಸುಮಾರುಇನ್ನೂರರಿಂದಇನ್ನೂರೈವತ್ತುಮೀಟರ್‍ನಷ್ಟುಉದ್ದವಿರುವ ಈ ಗುಹೆಯೊಳಗೆ ‘ಜಾಬಾಲಿ ಮಹರ್ಷಿ’ಗಳು ಶ್ರೀದೇವಿಯನ್ನು ಒಲಿಸಿಕೊಳ್ಳಲು ಕಠಿಣ ತಪಸ್ಸನ್ನಾಚರಿಸಿದರು ಎಂದುಇಲ್ಲಿನಇತಿಹಾಸದಿಂದ ತಿಳಿದುಬರುತ್ತದೆ. ಈ ಗುಹಾಲಯದೊಳಗಿರುವ ಶಿವಲಿಂಗಕ್ಕೆ ಗುಹೆಯಮೇಲ್ಬಾಗದಲ್ಲಿ ಕಲ್ಲುಗಳ ಸಂದಿಯಿಂದನೆಲ್ಲಿಕಾಯಿಗಾತ್ರದಲ್ಲಿ ನಿರಂತರವಾಗಿಹನಿ ಹನಿಯಾಗಿತೊಟ್ಟಿರುವ‘ಅಂತರ್ಗಂಗೆ’ಯನ್ನುತೀರ್ಥವೆಂದು ಪರಿಗಣಿಸಿ ಈ ಕ್ಷೇತ್ರಕ್ಕೆ‘ನೆಲ್ಲಿತೀರ್ಥ’ವೆಂಬ ಹೆಸರುಬಂದಿದೆ.ಇಲ್ಲಿತಪಸ್ಸನ್ನಾಚರಿಸುತ್ತಿದ್ದಜಾಬಾಲಿ ಮುನಿಗಳ ತಪಸ್ಸಿಗೆ ಮೆಚ್ಚಿದದುರ್ಗಾ ಮಾತೆಯು ಪ್ರತ್ಯಕ್ಷಳಾಗಿ ‘ಅರುಣಾಸುರ’ನೆಂಬರಾಕ್ಷಸನನ್ನು ಸಂಹಾರ ಮಾಡುವಅಭಯವನ್ನು ನೀಡುತ್ತಾಳೆ.ಅಭಯದಂತೆದುರ್ಗಾಮಾತೆಯು‘ದುಂಬಿ’ಯರೂಪವನ್ನು ತಾಳಿ ಅಲ್ಲೇ ಸಮೀಪದಲ್ಲಿ ಹರಿಯುತ್ತಿರುವ‘ನಂದಿನಿ’ ನದಿಯತಟದಲ್ಲಿಅರುಣಾಸುರನನ್ನು ಸಂಹಾರ ಮಾಡಿಅದೇ ಸ್ಥಳದಲ್ಲಿ ದುರ್ಗೆಯು ನೆಲೆನಿಂತಿದ್ದು, ಈ ಕ್ಷೇತ್ರವೇ‘ಶ್ರೀ ಕ್ಷೇತ್ರಕಟೀಲು’ಎಂದುಪ್ರಸಿದ್ದವಾಗಿದೆ.ಈ ಕ್ಷೇತ್ರವು ನೆಲ್ಲಿತೀರ್ಥ ಗುಹಾ ದೇವಾಲಯದಿಂದಅನತಿದೂರದಲ್ಲೇಇದೆ.
ನೆಲ್ಲಿತೀರ್ಥಗುಹೆಯುಪ್ರಾಕೃತಿಕವಾಗಿ ನಿರ್ಮಾಣವಾಗಿದ್ದು, ನಿಸರ್ಗ ಪ್ರೇಮಿಗಳ ನೆಚ್ಚಿನಧಾರ್ಮಿಕ ಶ್ರದ್ಧಾ ಭಕ್ತಿಯತಾಣವಾಗಿದೆ.ಈ ಗುಹೆಯ ಒಳಭಾಗ ಸಂಪೂರ್ಣಕತ್ತಲಿನಿಂದಾವೃತವಾಗಿರುವುದರಿಂದಭಕ್ತರು ಒಳ ಪ್ರವೇಶಿಸಲು ಅನುವಾಗುವಂತೆಅಲ್ಲಲ್ಲಿತೈಲದ‘ದೊಂದಿ’ಗಳನ್ನು (ದೊಡ್ಡಗಾತ್ರದ ದೀಪ)ಹಚ್ಚಿಡುತ್ತಾರೆ.ಗುಹೆಯ ಪ್ರವೇಶದ್ವಾರವು ಬಹಳಷ್ಟು ವಿಶಾಲವಾಗಿದ್ದುಒಳಗೆ ಸಾಗುತ್ತಿದ್ದಂತೆಅತ್ಯಂತಕಿರಿದಾಗುತ್ತಾ ಸಾಗುತ್ತದೆ. ಒಳ ಸಾಗುತ್ತಿದ್ದಂತೆಅಲ್ಲಿನಗಾಢಕತ್ತಲು ಮತ್ತು ಬಾವಲಿಗಳ ಹಾರಾಟದ ಸದ್ದಿನಿಂದ ಭಕ್ತರುಒಂದೊಮ್ಮೆ ವಿಚಲಿತರಾದರೆತಪ್ಪೇನಿಲ್ಲ. ಒಳ ಸಾಗುವ ದಾರಿಯು ಮನುಷ್ಯನಜೀವನದ ಹುಟ್ಟಿನಿಂದ ಸಾವಿನವರೆಗಿನ ಸುಮಾರು‘ಹದಿನೆಂಟು ಅವಸ್ಥೆ’ಗಳನ್ನು (ಗೋಡೆಯಆಧಾರದೊಂದಿಗೆನಡೆಯುವಿಕೆ, ಬಾಗಿ ನಡೆಯುವಿಕೆ, ಮೊಣಕಾಲಿನಲ್ಲಿ ನಡೆಯುವಿಕೆ, ನೇರ ನಡೆಯುವಿಕೆ, ಹರಿದಾಡಿಕೊಂಡು ನಡೆಯುವಿಕೆ, ತೆವಳುವಿಕೆ ಇತ್ಯಾದಿ)ನೆನಪಿಸುವ ರೀತಿಯಲ್ಲಿಕೆಲವೆಡೆ ಬಾಗಿಕೊಂಡು ಸಾಗಿದರೆ, ಕೆಲವೆಡೆ ಮೊಣಕಾಲಿನಿಂದ ತೆವಳಿಕೊಂಡೇ ಸಾಗಬೇಕಾದಷ್ಟುಕಠಿಣವಾಗಿದೆಎನ್ನಬಹುದು. ಗುಹೆಯು ಸಂಪೂರ್ಣವಾಗಿತೆವದಿಂದಕೂಡಿದ್ದು, ಇಲ್ಲಿಅತ್ಯಂತತಂಪಾದ ವಾತಾವರಣವಿದೆ.ಗುಹೆಯ ಒಳ ಭಾಗದಲ್ಲಿಸುಮಾರು ಹತ್ತರಿಂದಇಪ್ಪತ್ತುಅಡಿ ವಿಸ್ತಾರದಲ್ಲಿ ವಿಶಾಲವಾದ ಪ್ರದೇಶವಿದ್ದು, ಅಲ್ಲೇಎತ್ತರದ ಪ್ರದೇಶದಲ್ಲಿ ವಿಶಿಷ್ಟವಾದ ‘ಭೂಲಿಂಗವಿದೆ’.ಭೂಲಿಂಗದದರ್ಶನಕ್ಕೆಭಕ್ತರು ನಿಲ್ಲುವಜಾಗಗುಹೆಯ ಮೇಲ್ಭಾಗದಿಂದತೊಟ್ಟಿಕ್ಕುವಹೇರಳಜಲರಾಶಿಯು ಶೇಖರಗೊಂಡಿದ್ದು, (ಅಂತರ್ಗಂಗೆ)ಈ ನೀರಿನಿಂದ ಭಕ್ತರು ಶಿವಲಿಂಗಕ್ಕೆ ಅಭಿಷೇಕವನ್ನು ಮಾಡಿ ಪುನೀತರಾಗಿಭಕ್ತಿ ಹಾಗೂ ಧನ್ಯತಾ ಭಾವದಲ್ಲಿ ಮಿಂದೇಳುತ್ತಾರೆಎಂದುಇಲ್ಲಿನ ಮೊಕ್ತೇಸರರದ ಶ್ರೀ ಸುಬ್ರಾಯ ಭಟ್ ಹೇಳುತ್ತಾರೆ.

ಇಲ್ಲಿನ ಮೃತ್ತಿಕೆಯೇ(ಮಣ್ಣು) ಔಷಧ:ಈ ಗುಹಾದೇವಾಲಯದ ಒಳಭಾಗದ ಮಣ್ಣಿನಲ್ಲಿಔಷಧೀಯಗುಣವಿದ್ದು(ಕರ್ಪೂರದ ಅಂಶ ಹೇರಳವಾಗಿದೆ) ಭಕ್ತರುಇಲ್ಲಿನ ಮಣ್ಣನ್ನೇಪ್ರಸಾದವಾಗಿ ಮೈಯೆಲ್ಲಾ ಲೇಪಿಸಿಕೊಂಡು ಹೊರಬರುತ್ತಾರೆ. ಇದರಿಂದಚರ್ಮ ಸಂಬಂಧಿತವ್ಯಾಧಿಗಳೆಲ್ಲವೂ ಇಲ್ಲಿನ ಮಣ್ಣಿನಿಂದ ನಿವಾರಣೆಯಾಗುತ್ತದೆ ಎಂಬ ನಂಬಿಕೆಯು ಭಕ್ತರಲ್ಲಿದೆ.ಈ ಗುಹೆಯನ್ನು ಪ್ರವೇಶಿಸುವ ಮೊದಲುದೇವಾಲಯದ ಸಮೀಪದಲ್ಲೇಇರುವ ನೈಸರ್ಗಿಕವಾದ‘ನಾಗಪ್ಪನಕೆರೆ’ಯಿದ್ದು ಭಕ್ತರುಇಲ್ಲಿ ಸ್ನಾನವನ್ನು ಮಾಡಿಯೇಗುಹೆಯೊಳಗೆ ಸಾಗಬೇಕೆಂಬ ನಂಬಿಕೆಯಿದೆ.ಗುಹೆಯುಇಲ್ಲಿಂದ ಮತ್ತೂ ಮುಂದಕ್ಕೆ ಸಾಗಿದ್ದು, ಆ ದಾರಿಯೂಅತ್ಯಂತ ಸಂಕೀರ್ಣವೂಅಪಾಯಕಾರಿಯೂಆಗಿರುವುದರಿಂದ ಭಕ್ತರು ಮುಂದಕ್ಕೆ ಸಾಗದಂತೆ ಆ ದಾರಿಯುಸಂಪೂರ್ಣವಾಗಿಕಲ್ಲಿನಿಂದ ಮುಚ್ಚಲಾಗಿದೆ.
ನೆಲ್ಲಿತೀರ್ಥ ಗುಹಾ ದೇವಾಲಯವು ವರ್ಷದಆರು ತಿಂಗಳುಗಳ ಕಾಲ ಸಂಪೂರ್ಣ ಮುಚ್ಚಿದ ಸ್ಥಿತಿಯಲ್ಲೇ ಇರುವುದರಿಂದ ಈ ಅವಧಿಯಲ್ಲಿಯಾವುದೇ ಪೂಜೆಗಳು ಇಲ್ಲಿನ ಶಿವಲಿಂಗಕ್ಕೆ ನಡೆಯುವುದಿಲ್ಲ. ಗುಹೆಯು ಮುಚ್ಚಿರುವಅವಧಿಯಲ್ಲಿ ಈ ಗುಹೆಯೊಳಗೆ ದೇವಾನುದೇವತೆಗಳು ಹಾಗೂ ಋಷಿಗಳು ಶಿವನ ದರ್ಶನವನ್ನು ಪಡೆಯುವಕಾರಣದಿಂದ ಈ ಅವಧಿಯಲ್ಲಿ ಭಕ್ತರ ಪ್ರವೇಶವನ್ನು ನಿಷೇದಿಸಲಾಗಿದೆ ಎಂಬ ಪ್ರತೀತಿಯಿದೆ. ಭಗವಾನ್‍ಈಶ್ವರ(ಶ್ರೀ ಸೋಮನಾಥೇಶ್ವರ) ಈ ದೇವಾಲಯದ ಮುಖ್ಯದೇವರಾಗಿದ್ದು, ಪಕ್ಕದಲ್ಲಿ‘ಮಹಾಗಣಪತಿ’ ಮತ್ತು‘ಜಾಬಾಲಿ ಮಹರ್ಷಿ’ಯ ಗುಡಿಗಳು ಇರುವುದುಇಲ್ಲಿನ ವಿಶೇಷತೆ.ಇದರಜೊತೆಯಲ್ಲಿದೇವಾಲಯದ ಪಕ್ಕದಲ್ಲೇ ಪ್ರಮುಖದೈವಗಳಾದ ಪಿಲಿಚಾಮುಂಡಿ (ಪಿಲಿ ಎಂದರೆ ಹುಲಿ), ರಕ್ತೇಶ್ವರಿ, ಧೂಮಾವತಿ ಮತ್ತುಕ್ಷೇತ್ರಪಾಲರಆಲಯವಿದ್ದು, ಈ ದೇವಾಲಯದ ಆಡಳಿತವು ತುಳುನಾಡಿನ ಪ್ರಮುಖ ಮನೆತನಗಳಲ್ಲೊಂದಾದ ‘ಚೌಟ’ ಮನೆತನದ ಸುಪದಿರ್ಇಯಲ್ಲಿದೆ.

ಈ ಪವಿತ್ರ ಸ್ಥಳವು ಬಜ್ಪೆ ವಿಮಾನ ನಿಲ್ದಾಣಕ್ಕೆಅತ್ಯಂತ ಸನಿಹದಲ್ಲಿದ್ದು ಮಂಗಳೂರಿನಿಂದ ಮೂಡಬಿದರೆರಸ್ತೆಯಲ್ಲಿ ಚಲಿಸುತ್ತಾಎಡಪದವಿನಲ್ಲಿಎಡಗಡೆತಿರುಗಿ 8 ಕಿ.ಮೀ.ಸಾಗಿ ಈ ದೇವಾಲಯವನ್ನುತಲುಪಬಹುದು. ಅದೇರೀತಿಬಜ್ಪೆಯಿಂದಕತ್ತಲ್‍ಸರ್‍ರಸ್ತೆಯ ಮೂಲಕವೂ ಇಲ್ಲಿಗೆತಲುಪಬಹುದಾಗಿದ್ದು, ಶ್ರೀ ಕ್ಷೇತ್ರಕಟೀಲಿನಿಂದಎಕ್ಕಾರುರಸ್ತೆಯ ಮೂಲಕವೂ 8 ಕಿ.ಮೀ. ಸಾಗುವ ಮೂಲಕ, ಬೆಂಗಳೂರು ಮಂಗಳೂರು ರಸ್ತೆಯ ಮೂಲಕ ಬಿಸಿ ರೋಡ್ ಎಂಬಲ್ಲಿ ಬಲ ತಿರುವನ್ನು ಪಡೆದುಕೊಂಡು ಪೊಳಲಿ ಮೂಲಕ ನೆಲ್ಲಿತೀರ್ಥಕ್ಷೇತ್ರವನ್ನುತಲುಪಬಹುದಾಗಿದೆ.ಒಟ್ಟಿನಲ್ಲಿ ಈ ಕ್ಷೇತ್ರವು ಭಕ್ತರ ಪಾಲಿಗೆ ಐತಿಹಾಸಿಕ ಹಾಗೂ ಅತ್ಯಂತಕಾರ್ಣಿಕದ (ಮಹಿಮೆಯಿರುವ) ಕ್ಷೇತ್ರವಾಗಿಯೂಜನಜನಿತವಾಗಿದೆ. ಶ್ರೀ ಕ್ಷೇತ್ರ ನೆಲ್ಲಿತೀರ್ಥ, ನೀರುಡೆ ಅಂಚೆ, ಕೊಂಪದವುಗ್ರಾಮ ಮಂಗಳೂರು ತಾಲೂಕುದ.ಕ ಜಿಲ್ಲೆ-570063, ದೂ: 0824-2299142, Email: contact@nellitheertha.com ಮೂಲಕ ಸಂಪರ್ಕಿಸಬಹುದಾಗಿದೆ.
ಲೇಖನ:
ಸಂತೋಷ್‍ರಾವ್ ಪೆರ್ಮುಡ |
