ಮಂಗಳೂರು: ಅಮಾಯಕ ದೀಪಕ್ ರಾವ್ ಹತ್ಯೆಗೆ ಪ್ರತೀಕಾರವಾಗಿ ನಡೆದಿದ್ದ ಬಶೀರ್ ಹತ್ಯೆಯನ್ನು ಬಲವಾಗಿ ಸಮರ್ಥಿಸಿ ಮಾತನಾಡಿದ್ದ ವಿಹಿಂಪ ದ.ಕ. ಜಿಲ್ಲಾಧ್ಯಕ್ಷ ಜಗದೀಶ್ ಶೇಣವ ವಿರುದ್ಧ ಪಿಎಸ್‌ಐ ಅಧಿಕಾರೊಯೋರ್ವರು ಸ್ವಯಂ ಪ್ರೇರಿತವಾಗಿ ಮಂಗಳವಾರ ದೂರು ದಾಖಲಿಸಿಕೊಂಡಿದ್ದಾರೆ.
ಪಿಎಸ್‌ಐ ಅನಂತ ಮುರ್ಡೇಶ್ವರ ಅವರು ಭಾರತೀಯ ದಂಡ ಸಂಹಿತೆ 153 (ಎ), 116 ಸೆಕ್ಷನ್ ಅಡಿಯಲ್ಲಿ ಶೇವಣ ವಿರುದ್ಧ ಬಂದರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

