india-115ಬೆಂಗಳೂರು: ಮಹಾದಾಯಿ ಯೋಜನೆ ಜಾರಿಗೆ ಒತ್ತಾಯಿಸಿ  ಕನ್ನಡ ಪರಸಂಘಟನೆಗಳು ಗುರುವಾರ ನೀಡಿದ್ದ ಕರ್ನಾಟಕ ಬಂದ್ ಗೆ ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಭಾಗದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಬಿಎಂಟಿಸಿ, ಕೆಎಸ್ಸಾರ್ಟಿಸಿ. ಸೇರಿದಂತೆ ಹಲವು ಸಾರಿಗೆ ವಾಹನಗಳು ರಸ್ತೆಗೆ ಇಳಿಯಲಿಲ್ಲ. ಒಂದೆರಡು ಅಹಿತಕರ ಘಟನೆ ಹೊರತುಪಡಿಸಿ ಬಂದ್ ಶಾಂತಿಯುತವಾಗಿ ನಡೆದಿದೆ.

ಹೆಚ್ಚಿನ ಭಾಗದಲ್ಲಿ ಸಂಜೆಯವರೆಗೂ ಸಿನಿಮಾ ಮಂದಿರ, ಅಂಗಡಿ ಮುಂಗಟ್ಟುಗಳು, ವಾಣಿಜ್ಯ ವಹಿವಾಟು, ಕಂಪನಿ, ಹೋಟೆಲ್, ಸಾರಿಗೆ ಮೊದಲಾದವು ಸ್ಥಗಿತವಾಗಿದ್ದವು. ಕರ್ನಾಟಕ ಬಂದ್ ನಿಂದಾಗಿ ರಾಜ್ಯ ಸರಕಾರಕ್ಕೆ ಸುಮಾರು 24,000 ಕೋಟಿ ರೂ. ನಷ್ಟವಾಗಿದೆ ಎಂದು ಹೇಳಲಾಗಿದೆ.

By Suddi9

Leave a Reply

Your email address will not be published. Required fields are marked *