54784

ತುಮಕೂರು: ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧಿಗೆ ತುಮಕೂರಿನ 3ನೇ ಅಧಿಕ ಜಿಲ್ಲಾ ಪ್ರಧಾನ ಸತ್ರ ನ್ಯಾಯಾಲಯ 7 ವರ್ಷ ಕಠಿಣ ಸಜೆ ವಿಧಿಸಿ ಮಂಗಳವಾರ ಆದೇಶ ಹೊರಡಿಸಿದೆ.

ಶಿಕ್ಷೆಗೆ ಒಳಗಾದ ಅಪರಾಧಿಯನ್ನು ರಮೇಶ್ (50) ಎಂದು ಗುರುತಿಸಲಾಗಿದೆ.

ಏನಿದು ಪ್ರಕರಣ: 2016ರಲ್ಲಿ ರಮೇಶ್ ವಸತಿ ಶಾಲೆಯಿಂದ ಬಾಲಕಿಯೋರ್ವಳನ್ನು ಲಾಡ್ಜ್ ಗೆ ಕರೆದುಕೊಂಡು ಹೋಗಿ  ಅಲ್ಲಿ ಲೈಂಗಿಕ ಕಿರುಕುಳ ನೀಡಿದ್ದ. ಅಲ್ಲದೆ, ವೀಡಿಯೋವನ್ನು ಕೂಡ ಚಿತ್ತರೀಕರಿಸಿ ಬಳಿಕ ರಮೇಶ್ ಆ ಬಾಲಕಿಗೆ ಕಿರುಕುಳ ನೀಡುತ್ತಿದ್ದ. ಈ  ಬಗ್ಗೆ  ಬಾಲಕಿ ತಾಯಿಗೆ ವಿಷಯ ತಿಳಿದು 2017ರಲ್ಲಿ ತುಮಕೂರಿನ ಮಹಿಳಾ ಠಾಣೆಗೆ ದೂರು ನೀಡಿದ್ದರು. ಅದರಂತೆ ಪ್ರಕರಣ ದಾಖಲಿಸಿದ ಪೊಲೀಸರು ರಮೇಶ್‍ನನ್ನು ಬಂಧಿಸಿ ಚಾರ್ಜ್ ಶೀಟ್ ಸಲ್ಲಿಸಿದ್ದರು. ಪ್ರಕರಣ ಗಂಭೀರವಾಗಿ ಪರಿಗಣಿಸಿದ ನ್ಯಾಯಾಲಯ ಇಂದು ಅಪರಾಧಿ ರಮೇಶ್‍ನಿಗೆ 7 ವರ್ಷ ಕಠಿಣ ಶಿಕ್ಷೆ ಮತ್ತು 20 ಸಾವಿರ ರೂ. ದಂಡ ವಿಧಿಸಿ ದೇಶ ಹೊರಡಿಸಿದೆ.

 

By Suddi9

Leave a Reply

Your email address will not be published. Required fields are marked *