bhavana-1

ಸಿನೆಮಾ: ಮಲೆಯಾಳಂ ಹಾಗೂ ಕನ್ನಡ ಸಿನಿಮಾರಂಗದ ಖ್ಯಾತ ನಟಿ ಭಾವನಾ ಇಂದು ನಿರ್ಮಾಪಕ ನವೀನ್ ಜೊತೆಯಲ್ಲಿ ಸಪ್ತಪದಿ ತುಳಿದಿದ್ದಾರೆ. ಗಣೇಶ್ ಅಭಿನಯದ ರೋಮಿಯೋ ಸಿನಿಮಾದಲ್ಲಿ ಭಾವನಾ ಅಭಿನಯಿಸಿದ್ದರು. ಆ ಸಮಯದಲ್ಲಿ ನವೀನ್ ಅವರ ಪರಿಚಯವಾಗಿತ್ತು. ಸುಮಾರು ಆರು ವರ್ಷಗಳಿಂದ ಪ್ರೇಮಿಗಳಾಗಿದ್ದ ನವೀನ್ ಹಾಗೂ ಭಾವನಾ ಇಂದು ಗೃಹಸ್ಥಾಶ್ರಮಕ್ಕೆ ಕಾಲಿಟಿದ್ದಾರೆ.

ಭಾವನಾ ಕೇರಳಾ ಮೂಲದವರು ಆಗಿರುವುದರಿಂದ ತ್ರಿಶೂರ್ ನಲ್ಲಿರುವ ತಿರುವಂಬಾಡಿ ಶ್ರೀಕೃಷ್ಣ ದೇವಸ್ಥಾನದಲ್ಲಿ ಮದುವೆಯ ಮಹೂರ್ತ ನಡೆದಿದೆ. ಸರಳವಾಗಿ ವಿವಾಹವನ್ನು ಮಾಡಿಕೊಂಡಿರುವ ಈ ಜೋಡಿ ಮಲೆಯಾಳಂ ಚಿತ್ರೋದ್ಯಮದ ಸ್ನೇಹಿತರಿಗೆ ಮತ್ತು ಗಣ್ಯರಿಗಾಗಿ ಆರತಕ್ಷತೆಯನ್ನೂ ಆಯೋಜನೆ ಮಾಡಿದ್ದಾರೆ.

ಕೃಷ್ಣನ ಸನ್ನಿಧಾನದಲ್ಲಿ ವಿವಾಹ: ಕೇರಳದ ತಿರುವಂಬಾಡಿ ಶ್ರೀಕೃಷ್ಣನ ದೇವಾಲಯದಲ್ಲಿ ಭಾವನಾ ಮತ್ತು ನವೀನ್ ಮದುವೆ ನಡೆದಿದೆ. ಇಬ್ಬರು ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದು ಸರಳ ವಿವಾಹವಾಗಿ ತಮ್ಮ ಅಭಿಮಾನಿಗಳಿಗೆ ಮಾದರಿ ಆಗಿದ್ದಾರೆ.

 ಸಾಂಪ್ರದಾಯಿಕ ಮದುವೆ: ಮದುವೆಯ ಮಹೂರ್ತದಲ್ಲಿ ನಟಿ ಭಾವನಾ ರೇಷ್ಮೆ ಬಣ್ಣದ ಸೀರೆಯಲ್ಲಿ ಕಂಗೊಳಿಸಿದ್ದಾರೆ. ಕೃಷ್ಣನ ಎಂಬ್ರಾಯಿಡರಿ ಇರುವ ಸೀರಿಯಲ್ಲಿ ಭಾವನಾ ಮಿಂಚಿದ್ರೆ ನವೀನ್ ಬಿಳಿ ಪಂಚೆ ಶಲ್ಯ ಹಾಕಿ ಮದುಮಗನಾಗಿದ್ದರು.

 ಸಂಬಂಧಿಕರು ಭಾಗಿ: ಭಾವನಾ ಹಾಗೂ ನವೀನ್ ಮದುವೆಯಲ್ಲಿ ಕೇವಲ ಸಂಬಂಧಿಕರು ಮಾತ್ರ ಭಾಗಿಯಾಗಿದ್ದಾರೆ. ಸಿನಿಮಾರಂಗದಲ್ಲಿ ತುಂಬಾ ಆಪ್ತರನ್ನ ಮದುವೆ ಮಹೂರ್ತಕ್ಕೆ ಆಹ್ವಾನ ಮಾಡಲಾಗಿದೆ.

 

 

 

By suddi9

Leave a Reply

Your email address will not be published. Required fields are marked *