28745

ಸಿನೆಮಾ: ರಜನೀಕಾಂತ್ ಅವರು ಹೊಸ ಪಕ್ಷ ಸ್ಥಾಪನೆ ಮಾಡಿ ದೇಶದಲ್ಲಿ ಸಂಚಲನ ಮೂಡಿಸಿರುವುದು ಈಗ ಹಳೆ ವಿಷಯ. ಅಂದ ಹಾಗೇ ಸಿನಿಮಾ ಮಂದಿ ಹೊಸ ರಾಜಕೀಯ ಪಕ್ಷವನ್ನು ಕಟ್ಟಿ ಅಧಿಕಾರವನ್ನು ಹಿಡಿಯುವುದು ನಮ್ಮ ದೇಶದ ಇತಿಹಾಸದಲ್ಲಿ ಅತೀ ವಿರಳ.

ರಜನಿ ಕಾಂತ್ ಅವರು ತಮ್ಮ ಹೊಸಪಕ್ಷದ ಮೂಲಕ ಚುನಾವಣೆಗೆ ಮುಂದಾದರೆ 2021ರಲ್ಲಿ ನಡೆಯುವ ತಮಿಳುನಾಡಿನ ವಿಧಾನಸಭೆ ಚುನಾವಣೆಯಲ್ಲಿ ನ 30 ಸ್ಥಾನಗಳು ಲಭಿಸಲಿವೆ ಎಂದು ಸಮೀಕ್ಷೆಯೊಂದು ಹೇಳಿದೆ.

ಇಂಡಿಯಾ ಟುಡೇ-ಕಾರ್ವಿ ಈ ಸಮೀಕ್ಷೆ ನಡೆಸಿದ್ದು, ಇದರ ಫಲಿತಾಂಶ ಮಂಗಳವಾರ ಸಂಜೆ ತಮಿಳು ನಾಡಿನ ಸ್ಥಳೀಯ ಮಾಧ್ಯಮಗಳು ಪ್ರಸಾರ ಮಾಡಿದ್ದು, ಇಂದೇ ಮಧ್ಯಂತರ ಚುನಾವಣೆ ನಡೆದರೂ ಸೂಪರ್ಸ್ಟಾರ್ನ ಪಕ್ಷಕ್ಕೆ ಶೇ 16ರಷ್ಟು ಮತಗಳು ಲಭಿಸಲಿವೆ ಎಂದು ಸಮೀಕ್ಷೆ ಭವಿಷ್ಯ ನುಡಿದಿದೆ.

2011ರ ಚುನಾವಣೆಯಲ್ಲಿ ರಾಜ್ಯಾದ್ಯಂತ ತೀವ್ರ ಹಿನ್ನಡೆ ಅನುಭವಿಸಿದ್ದ ದ್ರಾವಿಡ ಪಕ್ಷ ತನ್ನ ಮಿತ್ರ ಪಕ್ಷಗಳ ಜತೆಗೂಡಿ 130 ಸ್ಥಾನಗಳನ್ನು ಗೆದ್ದು ಕೊಳ್ಳುವ ಹೆಚ್ಚಿನ ಅವಕಾಶ ಕೂಡ ಇದೆ ಅಂತ ಹೇಳಿದೆ.

ಇದರ ನಡುವೆ ತಾರಾ ಹೆಸರಿರುವ ರಜನೀಕಾಂತ್ ಪಕ್ಷ ಪಡೆಯುವ ಶೇಕಡಾವಾರುಗಳನ್ನು ಕಡಿಮೆ ಗಳಿಸಲಿದ್ದು, ಅವರಿಗಿಂತ ಶೇ.34ರಷ್ಟು ಮತಗಳನ್ನು ಡಿಎಂಕೆ ಬಾಚಿಕೊಳ್ಳಲಿದೆ ಎಂದು ಸಮೀಕ್ಷೆ ತಿಳಿಸಿದೆ.

 

By suddi9

Leave a Reply

Your email address will not be published. Required fields are marked *