ಮಧ್ಯಪ್ರದೇಶ: ವಿವಿಧ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಯೋರ್ವ ಮಹಿಳೆಯ ಮೇಲೆ ಅತ್ಯಾಚಾರ ನೆಡಸಲು ಯತ್ನಿಸಿದ್ದಲ್ಲದೆ, ಆಕೆ ಮೇಲೆ ಮನ ಬಂದಂತೆ ಕೊಡಲಿನಿಂದ ಹಲ್ಲೆ ಗೈದ ಅಮಾನವೀಯ ಘಟನೆ ಇಲ್ಲಿನ ಭೋಪಾಲ್ ಜಿಲ್ಲೆಯ ಗುಪ್ತೇಶ್ವರ್ ದೇವಸ್ಥಾನ ಪ್ರದೇಶದಲ್ಲಿನ ಅಮ್ರಾವತಿ ಹೆದ್ದಾರಿಯ ಬಳಿ ಬುಧವಾರ ನಡೆದಿದೆ.
ಆರೋಪಿಯನ್ನು ರಮ್ಜಾನ್ ಎಂದು ಗುರುತಿಸಲಾಗಿದೆ.
ಆರೋಪಿ ರಮ್ಜಾನ್ ಸಂತ್ರಸ್ತೆ ಮೇಲೆ ಅತ್ಯಾಚಾರ ನಡೆಸಲು ಮುಂದಾದಾಗ, ಇದಕ್ಕೆ ಒಪ್ಪದ ಮಹಿಳೆಯನ್ನು ನಗ್ನಗೊಳಿಸಿ ಮನ ಬಂದಂತೆ ಕೊಡಲಿನಿಂದ 20 ನಿಮಿಷಗಳ ಕಾಲ ಹಲ್ಲೆ ಮಾಡಿದ್ದಾನೆ. ಬಳಿಕ ಸಂತ್ರಸ್ತೆ ಈತನಿಂದ ತಪ್ಪಿಸಿ ಸಹಾಯಕ್ಕಾಗಿ ಸುಮಾರು ಅರ್ಧ ಕಿ.ಮೀ. ದೂರ ಓಡಿ ಬಂದಿದ್ದಾರೆ ಎಂದು ತಿಳಿದು ಬಂದಿದೆ.
ಬಳಿಕ ಸಂತ್ರಸ್ತೆಯನ್ನು ಕಂಡ ಸ್ಥಳೀಯ ಮಹಿಳೆಯರು ಬಟ್ಟೆ ಹೊದಿಸಿ, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
ಆರೋಪಿ ರಮ್ಜಾನ್ ಈ ಹಿಂದೆ ಅನೇಕ ಬಾರಿ ನನ್ನ ಮೇಲೆ ಅತ್ಯಾಚಾರ ಮಾಡಿದ್ದಾನೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು, ಪೊಲೀಸರು ಈತನ ಮೇಲೆ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಿದ್ದಾರೆ ಎಂದು ಸಂತ್ರಸ್ತೆ ತನ್ನ ಅಳಲು ತೋಡಿಕೊಂಡಿದ್ದಾರೆ.
ಗಂಭೀರ ಗಾಯವಾಗಿದ್ದ ಸಂತ್ರಸ್ತೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಇಂದೋರ್ ನ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿದೆ.
ಈ ಬಗ್ಗೆ ಸ್ಥಳೀಯ ಪೊಲೀಸರು ಆರೋಪಿ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.


