ಮನಿಲಾ: ಕ್ರಿಸ್‌ಮಸ್ ಸಾಮೂಹಿಕ ಪ್ರಾರ್ಥನಾ ಸಭೆಯಲ್ಲಿ ಪಾಲ್ಗೊಳ್ಳಲು ತೆರಲುತ್ತಿದ್ದ ಯಾತ್ರಿಕರ ಬಸ್ ಗಳ ನಡುವೆ ಮುಖಾಮುಖಿ ಢಿಕ್ಕಿ ಹೊಡೆದ ಪರಿಣಾಮ 20 ಮಂದಿ ಮೃತಪಟ್ಟರೆ, 24 ಮಂದಿ ಗಾಯಗಳಾದ ಘಟನೆ ಇಲ್ಲಿನ ಉತ್ತರ ಫಿಲಿಪ್ಪೀನ್ಸ್‌ನಲ್ಲಿ ಸೋಮವಾರ ನಡೆದಿದೆ.
ಮನಿಲಾದಿಂದ ಉತ್ತರಕ್ಕೆ 200 ಕಿ.ಮೀ. ದೂರದಲ್ಲಿರುವ ಆ್ಯಗೂ ಪಟ್ಟಣಕ್ಕೆ ಕ್ರಿಸ್‌ಮಸ್ ಪ್ರಾರ್ಥನೆಗೆ ಒಯ್ಯುತ್ತಿದ್ದ ಸಣ್ಣ ಬಸ್ ಎದುರುಗಡೆಯಿಂದ ಬರುತ್ತಿದ್ದ ದೊಡ್ಡ ಬಸ್ ಗೆ ಢಿಕ್ಕಿ ಹೊಡೆದಿದ್ದು, ಪರಿಣಾಮ ಸಣ್ಣ ಬಸ್ಸಿನಲ್ಲಿದ್ದವರ ಪೈಕಿ 20 ಮಂದಿ ಮೃತಪಟ್ಟರೆ ಇತರೆ 9 ಮಂದಿ ಗಾಯಗಳಾಗಿವೆ. ಇನ್ನೂ ದೊಡ್ಡ ಬಸ್ಸಿನಲ್ಲಿದ್ದ 15 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸ್ ಮುಖ್ಯಸ್ಥ ರಾಯ್ ವಿಲಾನುಯೇವ ಮಾಹಿತಿ ನೀಡಿದ್ದಾರೆ.

