ದಿಲ್ಲಿ: ಪ್ರಧಾನಿ ಮೋದಿ ಅವರು ದಿಲ್ಲಿ ಮೆಟ್ರೋವಿನ ನೂತನ ಮಜೆಂಟಾ ಲೈನ್ ರೈಲಿಗೆ ಸೋಮವಾರ ಚಾಲನೆ ನೀಡಿದರು.
ಬಳಿಕ ಪ್ರಧಾನಿ ಮೋದಿಯವರು ಗಣ್ಯರೊಂದಿಗೆ ಸ್ವತಃ ರೈಲಿನಲ್ಲಿ ಪ್ರಾಯಾಣಿಸಿದರು.
ಈ ಸಂದರ್ಭದಲ್ಲಿ ಉತ್ತರ ಪ್ರದೇಶದ ಸಿಎಂ ಆದಿತ್ಯ ನಾಥ್, ದಿಲ್ಲಿ ರಾಜ್ಯಪಾಲ ರಾಮ್ ನಾಯ್ಕ್ ಹಾಗೂ ಮತ್ತಿತರರು ಭಾಗವಹಿಸಿದ್ದರು.
ದಿಲ್ಲಿ ಸಿಎಂಗೆ ಆಹ್ವಾನಿಸಿಲ್ಲ: ಈ ಉದ್ಘಾಟನಾ ಕ್ರಾರ್ಯಕ್ರಮಕ್ಕೆ ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರಿಗೆ ಆಹ್ವಾನಿಸಿಲ್ಲ ಎಂದು ಹೇಳಲಾಗುತ್ತಿದ್ದು, ಈ ಕಾರಣದಿಂದ ಅವರು ಪಾಲ್ಗೊಂಡಿಲ್ಲ ಎಂದು ತಿಳಿದು ಬಂದಿದೆ.

