ಉಡುಪಿ: ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ್ ಹೆಗ್ಡೆಯವರ ನೇತೃತ್ವದಲ್ಲಿ ಗುಜರಾತ್ ಮತ್ತು ಹಿಮಾಚಲ ಪ್ರದೇಶ ಚುನಾವಣೆಯ ಬಿಜೆಪಿ ವಿಜಯೋತ್ಸವವನ್ನು ಪಟಾಕಿ ಸಿಡಿಸಿ ಮತ್ತು ಸಿಹಿತಿಂಡಿ ಹಂಚಿ ಆಚರಿಸಲಾಯಿತು.
ಯಶಪಾಲ್ ಸುವರ್ಣ, ಶ್ರೀಶ ನಾಯಕ್ ಪೆರ್ಣಂಕಿಲ, ಕಟಪಾಡಿ ಶಂಕರ್ ಪೂಜಾರಿ, ನಗರಾಧ್ಯಕ್ಷ ಪ್ರಭಾಕರ್ ಪೂಜಾರಿ, ಕುತ್ಯಾರು ನವೀನ ಕುಮಾರ್, ಗೀತಂಜಲಿ ಸುವರ್ಣ, ನಯನ ಗಣೇಶ್, ಕುಯಿಲಾಡಿ ಸುರೇಶ ನಾಯಕ್, ಪೂರ್ಣಿಮಾ ಸುರೇಶ, ರಶ್ಮಿತಾ ಬಾಲಕೃಷ್ಣ, ಸಂದ್ಯಾ ರಮೇಶ್, ಶಾಮಲಾ ಕುಂದರ್ಮ್, ಅಬು ಬಕರ್ ವೆನಿಲ್ಲಾ, ಅಲ್ವಿನ್ ಡಿಸೋಜ, ಸುವರ್ಧನ್, ಚಂದ್ರಶೇಖರ್ ಪ್ರಭು, ಸುಕೇಶ್ ಶೆಟ್ಟಿಗಾರ್,ಗುರುರಾಜ್,ರೋಷನ್ ಶೆಟ್ಟಿ, ಬೈಕಾಡಿ ಸುಪ್ರಸಾದ್ ಶೆಟ್ಟಿ ಮುಂತಾದ ಮುಖಂಡರು ಭಾಗವಹಿಸಿದ್ದರು.ಪಟಾಕಿ ಸಿಡಿಸಿದ ನಂತರ ಮಹಿಳಾ ಕಾರ್ಯಕರ್ತರು ರಸ್ತೆಯಲ್ಲಿನ ಪಟಾಕಿ ತ್ಯಾಜ್ಯಗಳನ್ನು ಗುಡಿಸಿ ಸ್ವಚ್ಛ ಮಾಡಿ ತೆರಳಿರುವುದು ಗಮನಾರ್ಹ.

