ಶಿಮ್ಲಾ: ಭಾರೀ ಕುತೂಹಕ್ಕೆ ಕಾರಣವಾಗಿದ್ದ ಹಿಮಾಚಲ ಪ್ರದೇಶದ ಚುನಾವಣೆಯಲ್ಲಿ ಬಿಜೆಪಿಗೆ 68 ಸೀಟುಗಳ ಪೈಕಿ 44 ಸ್ಥಾನ ಗಳಿಸುವ ಮೂಲಕ ಅಧಿಕಾರದ ಗದ್ದುಗೆ ಏರಿ ನೂತನ ಸರಕಾರ ಕಟ್ಟಲು ಭರದ ಸಿದ್ಧತೆಗೆ ಮುಂದಾಗಿದೆ.
ಇನ್ನೂ ಮತಗಟ್ಟೆಯಲ್ಲಿ ಮತ ಎಣಿಕೆ ಪ್ರಾರಂಭವಾಗುತ್ತಿದ್ದಂತೆ ಆಡಳಿತ ರೂಢ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರಲ್ಲಿ ಆಂತಕ ಸೃಷ್ಟಿ ಮಾಡಿತ್ತಾದರು, ಜನಾದೇಶ ಮೇರೆಗೆ ಬಿಜಿಪಿ ಅಧಿಕಾರದ ಚುಕ್ಕಾಣಿ ಹಿಡಿದಿದೆ.
ಬಿಜೆಪಿ 42 ಕ್ಷೇತ್ರದಲ್ಲಿ ಸ್ಪಷ್ಟ ಬಹುಮತ ಪಡೆದರೆ, ಕಾಂಗ್ರಸ್ ಗೆ 21 ಸ್ಥಾನಗಳನ್ನು ಪಡೆದು ಸೋಲುಂಡಿದೆ. ಅಲ್ಲದೆ, ಪಕ್ಷೇತರರು 3 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ.
ರಾಜ್ಯದಲ್ಲಿ ನೂತನ ಸರಕಾರ ಕಟ್ಟಲು ಪ್ರಾಧನಿ ನರೇಂದ್ರ ಮೋದಿ ನೇತೃತ್ವದ ಪೂರ್ವಭಾವಿ ಸಭೆ ಬೆಳಗ್ಗೆ ನಡೆದಿದ್ದು, ಮುಖ್ಯಮಂತ್ರಿ ಅಭ್ಯರ್ಥಿ ಯಾರೆಂದು ತಿಳಿದು ಬಂದಿಲ್ಲ.

