ಕಡಬ: ಇಲ್ಲಿನ ಸರಕಾರಿ ಪದವಿ ಪೂರ್ವ ಕಾಲೇಜಿನ ಬಿ.ಟಿ.ಆರಿಗ ಜೈನಿ ಸಂಭಾಗಣದ ಕುಲ್ಕುಂದ ಶಿವರಾಮ ವೇದಿಕೆಯಲ್ಲಿ ಆಯೋಜಿಸಿದ್ದ ಅವಿಭವಿಜಿತ ಪುತ್ತೂರು ತಾಲೂಕಿನ 17ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಶನಿವಾರ ಚಾಲನೆ ದೊರತಿದೆ.
ಈ ವೇಳೆ ಪಾದೆಕಲ್ಲು ವಿಷ್ಣುಭಟ್ ದೀಪ ಬೆಳಗಿಸುವ ಮೂಲಕ ಸಮ್ಮೇಳನವನ್ನು ಉದ್ಘಾಟಿಸಿದ್ದು, ನಾ.ಕಾರಂತ ಪೆರಾಜೆ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಶಾಸಕ ಎಸ್.ಅಂಗಾರ, ಪುತ್ತೂರು ತಾ.ಪಂ. ಅಧ್ಯಕ್ಷೆ ಭಾವನಿ ಚಿದಾನಂದ, ದ.ಕ.ಜಿಲ್ಲಾ ಕಸಾಪ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಲೂರು, ತಾಲೂಕು ಸಾಹಿತ್ ಪರಿಷತ್ ನಿಕಟಪೂರ್ವಾಧ್ಯಕ್ಷ ಪ್ರೊ.ಹರಿನಾರಾಯಣ, ಪುತ್ತೂರು ತಾ.ಪಂ. ಇಒ ಜಗದೀಶ್, ಜಿ.ಪಂ.ಸದಸ್ಯ ಪಿ.ಪಿ. ವರ್ಗೀಸ್, ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ತಾ,ಪಂ. ಸದಸ್ಯರಾದ ಫಝುಲ್, ಗಣೇಶ್, ಕಡಬ ಗ್ರಾ.ಪಂ.ಅಧದ್ಯಕ್ಷ ಬಾಬು ಮುಗೇರ, ಜಿ.ಪಂ. ಮಾಜಿ ಸದಸ್ಯ ಕೃಷ್ಣ ಶೆಟ್ಟಿ, ಸೈಂಟ್ ಜೋಕಿಮ್ಸ್ ವಿದ್ಯಾಸಂಸ್ಥೆಯ ಸಂಚಾಲಕ ರೆ.ಫಾ.ರೊನಾಲ್ಡ್ ಲೋಬೋ ಮತ್ತಿತರರು ಉಪಸ್ಥಿತರಿದ್ದರು.

