ಮುಂಬೈ: ಇಲ್ಲಿನ ಕಾಂದಿವಲಿಯಲ್ಲಿ ಡಿ. 16ರಂದು ಬಿಲ್ಲವರ ಎಸೋಸಿಯೇಶನ್ ಮುಂಬಯಿ ಇದರ ನೂತನ ಕಚೇರಿ ಉದ್ಘಾಟನೆ ಹಾಗೂ ಡಿ.17ರಂದು ‘ಡಾನ್ಸ್ ಬಿಲ್ಲವಾಸ್ ಡಾನ್ಸ್ ನೃತ್ಯ ಸ್ಪರ್ಧೆ’ ನಡೆಯಲಿದೆ.
ಡಿ.16ರ ಬೆಳಗ್ಗೆ 11:16ಕ್ಕೆ ನಡೆಯುವ ನೂತನ ಕಚೇರಿ ಉದ್ಘಾಟನೆಯನ್ನು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಾಗೂ ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಅಧ್ಯಕ್ಷ ಜಯ ಸಿ. ಸುವರ್ಣ ನೇರವೇರಿಸಲಿದ್ದಾರೆ. ಬಳಿಕ ನಡೆಯುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿಲ್ಲವರ ಎಸೋಸಿಯೇಶನ್ ಮುಂಬಯಿನ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್ ವಹಿಸಲಿದ್ದು, ಅಥಿತಿಗಳಾಗಿ ಮಹಾರಾಷ್ಟ್ರ ಸರಕಾರದ ಮಾಜಿ ಮಂತ್ರಿ ಹಾಗೂ ಎಮ್ಎಲ್ಸಿ ವಿಜಯಭಾಯ್ ಗಿರ್ ಕರ್, ಚಾರ್ ಕೋಪ್ ಕೋಪ್ ವಿಧಾನಸಭಾ ಎಮ್ಎಲ್ಎ ಯೋಗೇಶ್ ಸಾಗರ್, ಬಿಲ್ಲವರ ಎಸೋಸಿಯೇಶನ್ ಮುಂಬಯಿನ ನಿಕಟಪೂರ್ವ ಅಧ್ಯಕ್ಷ ಎಲ್.ವಿ ಅಮೀನ್, ಬಿಲ್ಲವ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ ಕಾರ್ಯಾಧ್ಯಕ್ಷ ಎನ್.ಟಿ.ಪೂಜಾರಿ, ಮುಂಬಯಿನ ಭಾರತ್ ಕೋ-ಆಪ್ ಬ್ಯಾಂಕ್ ಮಾಜಿ ನಿರ್ದೇಶಕ ಹಾಗೂ ಬಿಲ್ಲವರ ಎಸೋಸಿಯೇಶನ್ ಮುಂಬಯಿ ಗೌ.ಪ್ರ.ಕೋಶಾಧಿಕಾರಿ ಎನ್.ಎಂ.ಸನಿಲ್, ಕಾಂದಿವಲಿ ಸ್ಥಳೀಯ ಕಚೇರಿಯ ಮಾಜಿ ಕಾರ್ಯಾಧ್ಯಕ್ಷ ಹಾಗೂ ಭಾರತ್ ಕೋ-ಆಪ್ ಬ್ಯಾಂಕ್ ಮುಂಬಯಿ ನಿರ್ದೇಶಕ ಗಂಗಾಧರ ಜಿ.ಪೂಜಾರಿ, ಭಾರತ್ ಕೋ-ಆಪ್ ಬ್ಯಾಂಕ್ ಮುಂಬಯಿ ನಿರ್ದೇಶಕ ಆರ್.ಡಿ.ಪೂಜಾರಿ ಅವರು ಭಾಗವಹಿಸಲಿದ್ದಾರೆ.
ಗೌರವ ಉಪಸ್ಥಿತಿಯಾಗಿ ಬಾಲಾಜಿ ಆಟೋ ಮಾಲಕ ಶಿವರಾಮ.ಸಿ.ಪೂಜಾರಿ, ಹೊಟೇಲ್ ತುಲಸಿ ವಿಹಾರ್ ನ ಕೇಶವ ಸಾಲ್ಯಾನ್, ಕ್ಯಾಪ್ಟನ್ ಇಲೆಕ್ಟ್ರಿಕಲ್ ಇಂಡಸ್ಟ್ರೀಸ್ ನ ಗೋಪಾಲ.ಎಂ.ಪೂಜಾರಿ ಪಾಲ್ಗೊಳ್ಲಲಿದ್ದಾರೆ.
ಡಿ.17ರಂದು ಮಧ್ಯಾಹ್ನ1ರಿಂದ ನಡೆಯುವ ‘ಡಾನ್ಸ್ ಬಿಲ್ಲವಾಸ್ ಡಾನ್ಸ್ ನೃತ್ಯ ಸ್ಪರ್ಧಾ’ ಕಾರ್ಯಕ್ರಮಕ್ಕೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಾಗೂ ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಅಧ್ಯಕ್ಷ ಜಯ.ಸಿ. ಸುವರ್ಣ ಚಾಲನೆ ನೀಡಲಿದ್ದಾರೆ.
ಬಳಿಕ ಸಂಜೆ 5ಕ್ಕೆ ನಡೆಯಲಿರುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಬಿಲ್ಲವರ ಎಸೋಸಿಯೇಶನ್ ಮುಂಬಯಿನ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್ ವಹಿಸಲಿದ್ದು, ಮುಖ್ಯ ಅಥಿತಿಗಳಾಗಿ ಮುಂಬಯಿ ನಗರದ ಮಹಾಪೌರ ಪ್ರೊ. ವಿಶ್ವನಾಥ ಮಹಾದೇಶ್ವರ ಭಾಗವಹಿಸಲಿದ್ದಾರೆ. ಮುಂಬಯಿ ಬಂಟರ ಸಂಘ ಅಧ್ಯಕ್ಷ ಪದ್ಮನಾಭ.ಎಸ್.ಪಯ್ಯಡೆ, ಮುಂಬಯಿ ಭಾರತ್ ಕೋ-ಆಪ್ ಬ್ಯಾಂಕ್ ಮಾಜಿ ನಿರ್ದೇಶಕ ವಾಸುದೇವ್. ಆರ್. ಕೋಟ್ಯಾನ್, ಬಿಲ್ಲವರ ಎಸೋಸಿಯೇಶನ್ ಮುಂಬಯಿನ ನಿಕಟಪೂರ್ವ ಅಧ್ಯಕ್ಷ ಎಲ್.ವಿ ಅಮೀನ್, ಬಿಲ್ಲವ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ ಕಾರ್ಯಾಧ್ಯಕ್ಷ ಎನ್.ಟಿ.ಪೂಜಾರಿ, ಗುಜರಾತ್ ಬಿಲ್ಲವ ಸಂಘದ ಅದ್ಯಕ್ಷ ಮೋಹನ್.ಸಿ ಪೂಜಾರಿ, ಹೊಟೇಲ್ ಉದ್ಯಮಿ ಹರೀಶ್.ಜಿ.ಅಮೀನ್, ಸಮಾಜ ಸೇವಕ ಹಾಗೂ ಉದ್ಯಮಿ ಶಾರದ. ಎಸ್. ಕರ್ಕೇರ, ಪುರೋಹಿತ ಎಂ.ಜಿ. ಪ್ರವೀಣ್ ಭಟ್, ಕಾಂದಿವಲಿ ಸ್ಥಳೀಯ ಕಚೇರಿಯ ಮಾಜಿ ಕಾರ್ಯಾಧ್ಯಕ್ಷ ಹಾಗೂ ಭಾರತ್ ಕೋ-ಆಪ್ ಬ್ಯಾಂಕ್ ಮುಂಬಯಿ ನಿರ್ದೇಶಕ ಗಂಗಾಧರ ಪೂಜಾರಿ ಭಾಗವಹಿಸಲಿದ್ದಾರೆ.
ಇದೇ ವೇಳೆ ಮುಂಬಯಿ ಸಂಸದ ಗೋಪಾಲ.ಸಿ.ಶೆಟ್ಟಿ ‘ಸ್ಮರಣ ಸಂಚಿಕೆ’ಯನ್ನು ಬಿಡುಗಡೆಗೊಳಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

