ಬಂಟ್ವಾಳ:ತಾ.ಪಂ.ಸದಸ್ಯರ ರೂ.2.83ಲಕ್ಷ ಅನುದಾನದಲ್ಲಿ ಕಾರಾಜೆ ರಸ್ತೆ ಅಭಿವೃದ್ಧಿ ಕಾಮಗಾರಿಯ ಶಿಲಾನ್ಯಾಸವನ್ನು ಅರಣ್ಯ ಪರಿಸರ ಜೈವಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ನೆರವೇರಿಸಿದರು.
ಈ ಸಂದರ್ಭದಲ್ಲಿ ಜಿ.ಪಂ.ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ತಾ.ಪಂ.ಸದಸ್ಯ ಕೆ.ಸಂಜೀವ ಪೂಜಾರಿ, ಸಜಿಪಮೂಡ ಪಂ.ಅಧ್ಯಕ್ಷ ಗಣಪತಿ ಭಟ್, ಗ್ರಾ ಪಂ.ಸದಸ್ಯರಾದ ರಮೇಶ್ ಪಣೋಲಿಬೈಲು, ವಿಶ್ವನಾಥ ಬೆಳ್ಚಾಡ, ರಮೇಶ್ ಎಂ., ಅಬ್ದುಲ್ ಕುಂಙ, ಅಬ್ದುಲ್ ಅಜೀಜ್, ದ.ಕ.ಜಿಲ್ಲಾ ಅಲ್ಪಸಂಖ್ಯಾಕ ಘಟಕ ಉಪಾಧ್ಯಕ್ಷ ರೈಮಂಡ್ ಅಂದ್ರಾದೆ, ಪಾಣೆಮಂಗಳೂರು ಬ್ಲಾಕ್ ಅಲ್ಪಸಂಖ್ಯಾತ ಘಟಕ ಉಪಾಧ್ಯಕ್ಷ ಶೇಖಬ್ಬ ಹಾಜಿ., ಬೂತ್ ಅಧ್ಯಕ್ಷರಾದ ನವೀನ್ ಪೂಜಾರಿ, ಗಂಗಾಧರ ,ಅಬುಬಕ್ಕರ್, ಜಿ.ಪಂ.ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ ನರೇಂದ್ರಬಾಬು, ಇಂಜಿನಿಯರ್ ಗಳಾದ ಅಜಿತ್ ಕುಮಾರ್, ಅಶೋಕ್, ಗುತ್ತಿಗೆದಾರ ಇಕ್ಬಾಲ್, ಪ್ರಮುಖರಾದ ಗಂಗಾಧರ ಗಟ್ಟಿ, ಸತೀಶ್ ಎಸ್.ಎಲ್.ಕಾರಾಜೆ, ಅಬ್ಬಾಸ್ ಕಂಚಿಲ, ಚರಣ್ ಕಾರಾಜೆ, ಬಿ.ಎಸ್.ರಝಾಕ್, ಕೆರೀಂ ಕಾರಾಜೆ, ಕೆ.ಎಚ್.ಇಬ್ರಾಹಿಂ, ಸಾಹಿಬ್ ಕಾರಾಜೆ, ಜಯಶಂಕರ ಕಾನ್ಸಾಲೆ, ಇಕ್ಬಾಲ್ ನಂದಾವರ ಮತ್ತಿತರರು ಉಪಸ್ಥಿತರಿದ್ದರು.

