ಸಿದ್ಧಕಟ್ಟೆ: ವಿದ್ಯಾರ್ಥಿಗಳಿಗೆ ಶಿಸ್ತುಬದ್ಧ ಮತ್ತು ಕೌಶಲ್ಯಯುತ ಶಿಕ್ಷಣದಿಂದ ಉತ್ತಮ ಭವಿಷ್ಯ ನಿರ್ಮಾಣವಾಗುತ್ತದೆ. ಉತ್ತಮ ವ್ಯಕ್ತಿತ್ವದಿಂದ ಸಮಾಜದಲ್ಲಿ ಉನ್ನತ ಶ್ರೇಣಿಯನ್ನು ಪಡೆಯಲು ಸಾಧ್ಯ. ಇಂತಹ ಶಿಕ್ಷಣ ಎನ್‍ಎಸ್‍ಎಸ್ ಶಿಬಿರದ ಮೂಲಕ ದೊರೆಯುತ್ತದೆ ಎಂದು ತಾ.ಪಂ. ಸದಸ್ಯ ಪ್ರಭಾಕರ ಪ್ರಭು ಹೇಳಿದರು.ಸಿದ್ಧಕಟ್ಟೆ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಬಂಟ್ವಾಳ ಶ್ರೀ ವೆಂಕಟರಮಣ ಸ್ವಾಮಿ ಮಹಾವಿದ್ಯಾಲಯದ ಎನ್‍ಎಸ್‍ಎಸ್ ಘಟಕದ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಬಂಟ್ವಾಳ ಶ್ರೀ ವೆಂಕಟರಮಣ ಸ್ವಾಮಿ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಪಾಂಡುರಂಗ ನಾಯಕ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಉಪಪ್ರಾಂಶುಪಾಲ ಪ್ರೊ.ತುಕಾರಾಂ ಪೂಜಾರಿ, ಸಿದ್ಧಕಟ್ಟೆ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಶ್ರೀನಿವಾಸ್ ನಾಯ್ಕ್, ಸಿದ್ಧಕಟ್ಟೆ ಸರಕಾರಿ ಪ್ರೌಢಶಾಲೆಯ ಉಪಪ್ರಾಂಶುಪಾಲ ರಮಾನಂದ, ತಾ.ಪಂ. ಮಾಜಿ ಸದಸ್ಯ ಅರ್ಕಕೀರ್ತಿ ಇಂದ್ರ, ಪ್ರಗತಿಪರ ಕೃಷಿಕ ಪ್ರಫುಲ್ಲ ರೈಮಾತನಾಡಿದರು.
ಇದೇ ಸಂದರ್ಭದಲ್ಲಿ ಬಂಟ್ವಾಳ ಶ್ರೀ ವೆಂಕಟರಮಣ ಸ್ವಾಮಿ ಮಹಾವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ನಾರಾಯಣ ಭಂಡಾರಿ ಅವರನ್ನು ಸನ್ಮಾನಿಸಲಾಯಿತು.ಸಂಗಬೆಟ್ಟು ಗ್ರಾ.ಪಂ. ಉಪಾಧ್ಯಕ್ಷ ಸತೀಶ್ ಪೂಜಾರಿ, ನಿವೃತ್ತ ಉಪಅರಣ್ಯ ಸಂರಕ್ಷಣಾಧಿಕಾರಿ ದಾಮೋದರ ಶೆಟ್ಟಿಗಾರ್, ಸಿದ್ಧಕಟ್ಟೆ ಸರಕಾರಿ ಪ್ರೌಢಶಾಲೆಯ ಎಸ್‍ಡಿಎಂಸಿ ಉಪಾಧ್ಯಕ್ಷ ಸೀತಾರಾಮ ಶಾಂತಿ ಕೆ., ಎನ್‍ಎಸ್‍ಎಸ್ ಘಟಕದ ನಾಯಕರುಗಳಾದ ಸುಮಂತ್ ಎಸ್.ಕೆ., ಪ್ರತೀಕ್ಷಾ, ಕೀರ್ತನ್, ಪಂಚಶ್ರೀ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಗ್ರಾ.ಪಂ.ಸದಸ್ಯ ಮಾಧವ ಶೆಟ್ಟಿಗಾರ್,ಪಿಡಿಓ ಸಿಲ್ವಿಯಾ ಫೆರ್ನಾಂಡಿಸ್, ಸಿದ್ಧಕಟ್ಟೆ ಸರಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಶೀನಪ್ಪ ಎನ್., ಬಂಟ್ವಾಳ ಶ್ರೀ ವೆಂಕಟರಮಣ ಸ್ವಾಮಿ ಮಹಾವಿದ್ಯಾಲಯದ ಕಛೇರಿ ಮೇಲ್ವಿಚಾರಕ ರಾಧೇಶ್ ಕುಮಾರ್,ಸ್ಥಳೀಯ ಪ್ರಮುಖರಾದ ನೋಣಯ್ಯ ಶೆಟ್ಟಿಗಾರ್, ಕವಿತಾ ವಿ. ಶೆಟ್ಟಿಗಾರ್, ಪ್ರಶಾಂತ್ ಹೆನ್ನೂರುಪದವು, ಸಹಶಿಬಿರಾಧಿಕಾರಿಗಳಾದ ಪ್ರದೀಪ್ ಪೂಜಾರಿ,ಉಲ್ಲೇಖ ಜೈನ್,ಅನಿಲ್, ಸಂಗೀತಾ ಶಾನ್‍ಬೋಗ್,ಸುಷ್ಮ ಇದ್ದರು.ಎನ್‍ಎಸ್‍ಎಸ್ 2ನೇ ಘಟಕದ ಯೋಜನಾಧಿಕಾರಿ ಕಿಟ್ಟುರಾಮ ಕುಂಜ ಸ್ವಾಗತಿಸಿದರು. ಎನ್‍ಎಸ್‍ಎಸ್ 1ನೇ ಘಟಕದ ಯೋಜನಾಧಿಕಾರಿ ಡಾ.ಮಂಜುನಾಥ ಉಡುಪ ಕೆ. ವಂದಿಸಿದರು. ಶಿಬಿರಾರ್ಥಿ ಸುದರ್ಶನ್ ಡಿ.ಸುವರ್ಣ ಕಾರ್ಯಕ್ರಮ ನಿರೂಪಿಸಿದರು.
