ಗುರುಪುರ : ಕೈಕಂಬ ಕಂದಾವರ ಗ್ರಾಮದ ಮೂಡುಕರೆ ಎಂಬಲ್ಲಿನ ನಿವಾಸಿ ಪ್ರಶಾಂತ್(35) ಎಂಬವರು ನಿನ್ನೆ ಗುರುಪುರ ಫಲ್ಗುಣಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ನ. 24ರಂದು ಶವ ಪತ್ತೆಯಾಗಿದೆ. ಕೆಲವು ಸಮಯದ ಹಿಂದೆ ಇಲ್ಲಿ ಜಾಗ ಖರೀದಿಸಿ ಮನೆ ಮಾಡಿಕೊಂಡಿದ್ದ ಪ್ರಶಾಂತ್ಗೆ ಇಬ್ಬರು ಮಕ್ಕಳಿದ್ದಾರೆ. ಶ್ರೀಧರ ಆಚಾರ್ಯರ ಪುತ್ರರಾಗಿರುವ ಇವರು ನಿನ್ನೆ ಗುರುಪುರ ಸೇತುವೆಯಿಂದ ನದಿಗೆ ಜಿಗಿದಿರಬೇಕೆಂದು ಶಂಕಿಸಲಾಗಿದೆ. ಆತ್ಮಹತ್ಯೆಗೆ ಆರ್ಥಿಕ ಬಿಕ್ಕಟ್ಟು ಕಾರಣ ಎನ್ನಲಾಗುತ್ತಿದ್ದರೂ, ನಿಖರವಾದ ಕಾರಣಗಳು ಇನ್ನಷ್ಟೇ ಗೊತ್ತಾಗಬೇಕಿದೆ. ಬಜಪೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
