ಮಂಗಳೂರು:ಕೆ.ಸಿ.ರೋಡ್ನಲ್ಲಿರುವ ಕೋಟೆಕಾರು ಕೋ- ಆಪರೇಟಿವ್ ಸೊಸೈಟಿಯಲ್ಲಿ ಕೊಠಡಿಯೊಳಗೆ ಜನರೇಟರ್ನಿಂದ ವಿಷಾನಿಲ ಹೊರಸೂಸಿದ ಪರಿಣಾಮವಾಗಿ ಸೊಸೈಟಿಯ ಮೂವರು ಖಾಸಗಿ ಭದ್ರತಾ ಸಿಬ್ಬಂದಿ ಮೃತಪಟ್ಟಿದ್ದಾರೆ.
ಸಿಡಿಲು ಬಡಿದು ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆಗಿ ಮೃತಪಟ್ಟಿದ್ದಾರೆ ಎಂದು ಹೇಳಲಾಗಿತ್ತು ಕೊಠಡಿ ಒಳಗಡೆ ಇದ್ದ ಜನರೇಟರ್ನಿಂದ ಹೊರಸೂಸಿದ ವಿಷಾನಿಲ ಕಾರಣ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಸ್ಥಳೀಯ ನಿವಾಸಿಗಳಾದ ಉಮೇಶ್, ಸಂತೋಷ್, ಸೋಮನಾಥ ಸೊಸೈಟಿ ಕೊಠಡಿ ಒಳಗಡೆ ಮಲಗಿದ್ದ ಸ್ಥಿತಿಯಲ್ಲೇ ಮೃತಪಟ್ಟಿದ್ದರು. ಮಂಗಳವಾರ ಬೆಳಗ್ಗೆ ಕಚೇರಿ ಸಿಬ್ಬಂದಿ ಬಾಗಿಲು ತೆರೆಯಲು ಆಗಮಿಸಿದ ಸಂದರ್ಭದಲ್ಲಿ ಈ ಘಟನೆ ಬೆಳಕಿಗೆ ಬಂದಿತ್ತು.
