ಬಂಟ್ವಾಳ:ತಾಲ್ಲೂಕಿನ ರಾಯಿ ಸಮೀಪದ ದೈಲ ನಿವಾಸಿ ಕ್ಷೌರಿಕ ದಿವಂಗತ ಬಾಬು ಭಂಡಾರಿ ಎಂಬವರ ಪತ್ನಿ ಗೋಪಿ ಭಂಡಾರಿ ಮನೆಗೆ ಆಧಾರಸ್ತಂಭವಾಗಿದ್ದ ಇವರ ಹಿರಿಯ ಪುತ್ರಿ ಪುಷ್ಪ ಭಂಡಾರಿ ಈಚೆಗಷ್ಟೇ ಅಸೌಖ್ಯದಿಂದ ಸಾವನ್ನಪ್ಪಿದ್ದಾರೆ. ಈ ಹಿಂದೆ ರಾಯಿ ಪೇಟೆಯಲ್ಲಿ ಕ್ಷೌರಿಕ ವೃತ್ತಿ ನಡೆಸುತ್ತಿದ್ದ ಇವರ ಪತಿ ದಿವಂಗತ ಬಾಬು ಭಂಡಾರಿ ಮತ್ತು ಪುತ್ರ ಪದ್ಮನಾಭ ಭಂಡಾರಿ ಕೂಡಾ ಅಸೌಖ್ಯದಿಂದ ಸಾವನ್ನಪ್ಪಿದ್ದರು.
ಇದೀಗ ಅವಿವಾಹಿತ ಪುತ್ರಿಯೊಂದಿಗೆ ನಿರ್ಗತಿಕರಾಗಿದ್ದ ವಯೋವೃದ್ಧ ಗೋಪಿ ಭಂಡಾರಿ ಮನೆಗೆ ಬಂಟ್ವಾಳ ಮತ್ತು ಮಂಗಳೂರು ತಾಲ್ಲೂಕಿನ ವಿವಿಧ ಸಂಘ ಸಂಸ್ಥೆಗಳು ಭಾನುವಾರ ಧಾವಿಸಿ ಬಂದು ರೂ 25ಸಾವಿರ ಮೊತ್ತದ ಸಹಾಯಧನ ಚೆಕ್ ವಿತರಿಸುವ ಮೂಲಕ ಮಾನವೀಯತೆ ಮೆರೆದಿದೆ.ಮಂಗಳೂರಿನ ಸುರತ್ಕಲ್ ಮಂಜಣ್ಣ ಸೇವಾ ಬ್ರಿಗೇಡ್ ಅಧ್ಯಕ್ಷ ಮನೋಜ್ ಕೋಡಿಕೆರೆ ಮಾತನಾಡಿ, ಪ್ರತೀ ತಿಂಗಳು ಇಂತಹ ನಿರ್ಗತಿಕ ಕುಟುಂಬಗಳಿಗೆ ನೆರವು ನೀಡಲು ನಮ್ಮ ವಿವಿಧ ಸಂಘಟನೆ ಸದಸ್ಯರು ದುಡಿದ ಹಣದಲ್ಲಿ ಒಂದಷ್ಟು ಮೊತ್ತ ಸಂಗ್ರಹಿಸಿಡುತ್ತಿದ್ದಾರೆ. ಇದರಿಂದಾಗಿ ಮಂಗಳೂರಿನ ತೋಕೂರು ಎಂಬಲ್ಲಿ ಈಚೆಗಷ್ಟೇ ಅಪಘಾತಕ್ಕೀಡಾಗಿ ಸಾವನ್ನಪ್ಪಿದ 17ರ ಹರೆಯದ ನವಜೀತ್ ಪೂಜಾರಿ ಮನೆಗೆ ಭೇಟಿ ನೀಡಿ ಆಥರ್ಿಕ ನೆರವು ನೀಡಲಾಗಿದೆ. ಇನ್ನೊಂದೆಡೆ ಮಂಗಳೂರಿನ ಕುಳಾಯಿ ಕಾವಿನಕಲ್ಲು ಎಂಬಲ್ಲಿ ತೀರಾ ಬಡತನದಿಂದ ಕಾಲೇಜು ಶುಲ್ಕ ಭರಿಸಲಾಗದೆ ಸಂಕಷ್ಟಕ್ಕೀಡಾಗಿದ್ದ ದ್ವಿತೀಯ ಪಿಯೂಸಿ ವಿದ್ಯಾಥರ್ಿ ಮೋಹಿತ್ ಸನಿಲ್ ಇವರಿಗೆ ಸಹಾಯ ಹಸ್ತ ನೀಡಿದೆ ಎಂದು ಅವರು ತಿಳಿಸಿದರು.
ಬಂಟ್ವಾಳ ತುಳುನಾಡ ಪೊಲರ್ು ಸೇವಾ ಟ್ರಸ್ಟಿನ ಅಧ್ಯಕ್ಷ ನವೀನ ಮಿಜಾರು, ಮಂಗಳೂರು ಮಹಿಳಾ ಮತ್ತು ಮಕ್ಕಳ ಹಕ್ಕು ಫೌಂಡೇಶನ್ ಇದರ ಸಮಾಜ ಸೇವಕಿ ಚಂದನಾ ಶೆಟ್ಟಿ, ರಾಯಿ ಶ್ರೀ ಮಹಾಲಿಂಗೇಶ್ವರ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ, ಉಪನ್ಯಾಸಕ ಪ್ರೊ.ನಾರಾಯಣ ಭಂಡಾರಿ, ಪ್ರಮುಖರಾದ ಕಿಶೋರ್ ಭಂಡಾರಿ ಸೋಣರ್ಾಡು, ಸತೀಶ ಕುಮಾರ್ ಕೊಯಿಲ, ನಾಗರಾಜ ಕೋಡಿಕೆರೆ, ವಸಂತ ಹೊಸಬೆಟ್ಟು, ರಮೇಶ ಸಿದ್ಧಕಟ್ಟೆ, ಭುವಿತ್ ಶೆಟ್ಟಿ ಬಿ.ಸಿ.ರೋಡ್, ನಾಗೇಶ ತೋಕೂರು, ರವಿ ಪಾವಂಜೆ, ಚೇತನ್ ಪಡೀಲ್, ಸುನಿಲ್ ಮರೋಳಿ ಮತ್ತಿತರರು ಇದ್ದರು.
