ಪೊಳಲಿ: ಇತಿಹಾಸ ಪ್ರಸಿದ್ಧ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಳದ ಜೀರ್ಣೋದ್ದಾರದ ಕೆಲಸ ಕಾರ್ಯಗಳು ಭರದಿಂದ ಸಾಗುತ್ತಿದ್ದು ಇಲ್ಲಿಯ ಕೆಲಸಕಾರ್ಯಗಳಿಗೆ ಆರ್ಥಿಕ ಧನಸಹಾಯವನ್ನು ಭಕ್ತರಿಂದ ದೇಣಿಗೆ ರೂಪದಲ್ಲಿ ಪಡೆಯುತ್ತಿದ್ದು ಇಲ್ಲಿಯ ಬಡಕಬೈಲ್ ದಿ.ನರಸಿಂಗ ರೈ ಅವರ ಧರ್ಮಪತ್ನಿ ರೇವತಿ ಎನ್ ಶೆಟ್ಟಿ  ಕುಟುಂಬಿಕರ ಪರವಾಗಿ ಉದ್ಯಮಿ ಜೀವನ್ ದಾಸ್ ರೈ ಅವರು  ಪೊಳಲಿ ದೇವಳಕ್ಕೆ ಸುಮಾರು 7.50 ಲಕ್ಷ ರೂಪಾಯಿಯನ್ನು ದೇವಳದ ಆಡಳಿತ ಮೊಕ್ತೇಸರರ ಸಮ್ಮುಖದಲ್ಲಿ ದೇವಳಕ್ಕೆ ದೇಣಿಗೆ ರೂಪವಾಗಿ ನೀಡಿದರು.

23-2

23-1ಅವರಿಗೆ ದೇವಳದ ಅರ್ಚಕರಾದ  ಚಂದ್ರಶೇಖರ್ ಭಟ್  ಪ್ರಸಾದ ನೀಡಿದರು.ಈ ಸಂದರ್ಭದಲ್ಲಿ ಆಡಳಿತ ಮೊಕ್ತೇಸರ ಡಾ.ಮಂಜಯ್ಯ ಶೆಟ್ಟಿ ಅಮ್ಮುಂಜೆಗುತ್ತು, ಮೊಕ್ತೇಸರ ಹಾಗೂ ಜೀರ್ಣೋದ್ಧಾರ ಸಮಿತಿಯ ಕಾರ್ಯದರ್ಶಿ ಉಳಿಪಾಡಿಗುತ್ತು ತಾರಾನಾಥ ಆಳ್ವ ಮತ್ತು ಅಮ್ಮುಂಜೆಗುತ್ತು ಜೀವರಾಜ್ ಶೆಟ್ಟಿ ಕಟ್ಟಡ ಸಮಿತ ಸದಸ್ಯ ಗಿರಿಧರ ಶೆಟ್ಟಿ , ದೇವಳದ ಕಾರ್ಯ ನಿರ್ವಹಣಾಧಿಕಾರಿ ಪ್ರವೀಣ್  ಮತ್ತಿತರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *