ಸುದ್ದಿ9ಬೆಳ್ತಂಗಡಿ: ಕಳೆದೆರಡು ವಾರಗಳಿಂದ ಸುರಿಯುತ್ತಿರುವ ಭಾರೀ ಗಾಳಿ-ಮಳೆಯ ಹಿನ್ನೆಲೆಯಲ್ಲಿ ತಾಲೂಕಿನ ಮೊಗ್ರು ಎಂಬಲ್ಲಿ ಹೆಂಚಿನ ಮನೆಯೊಂದು ಸಂಪೂರ್ಣ ಕುಸಿದು ಬಿದ್ದು ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದ ಘಟನೆ ಗುರುವಾರ ರಾತ್ರಿ ಸಂಭವಿಸಿದೆ.ಮೊಗ್ರು ಗ್ರಾಮದ ಸವರ್ೇ ನಂ.21-21/3 ಸುದೆಪಿಲ ದೇವಸ್ಥಾನದ ಸಮೀಪವಿರುವ ಭುವನೇಶ್ವರಿ ಎಂಬವರಿಗೆ ಸೇರಿದ ಮನೆ ಗುರುವಾರ ಸುರಿದ ಭಾರೀ ಗಾಳಿ-ಮಳೆಗೆ ಬಿದ್ದು ಸಂಪೂರ್ಣ ಹಾನಿಯಾಗಿದೆ. ಇದರಿಂದ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದ್ದು ವಾಸಿಸಲು ಸಾಧ್ಯವಿಲ್ಲದ ಪರಿಸ್ಥಿತಿ ನಿಮರ್ಾಣವಾಗಿದೆ. ಸದ್ರಿ ಮನೆಯಲ್ಲಿ ತಾಯಿ ಮತ್ತು ಇಬ್ಬರು ಹೆಣ್ಣುಮಕ್ಕಳು ವಾಸಿಸುತ್ತಿದ್ದಾರೆ. ಆರು ತಿಂಗಳ ಹಿಂದೆ ಭುವನೇಶ್ವರಿ ಅವರ ಪತಿ ಅನಾರೋಗ್ಯದಿಂದಾಗಿ ಸಾವನ್ನಪ್ಪಿದ್ದಾರೆ. ಇವರ ಸಾವಿನ ಬಳಿಕ ಕುಟುಂಬದ ಆಧಾರಸ್ಥಂಭ ಕಳಚಿದಂತಾಗಿದೆ. ತಾಯಿ-ಮಕ್ಕಳು ಕಷ್ಟದಲ್ಲೇ ಜೀವನ ನಿರ್ವಹಣೆ ಮಾಡುತ್ತಿದ್ದು ಇದೀಗ ಮನೆಯೂ ಕುಸಿದು ಬಿದ್ದಿರುವುದರಿಂದ ಕುಟುಂಬಕ್ಕೆ ದಿಕ್ಕು ತೋಚದಂತಾಗಿದೆ. ಬೇರೆ ಮನೆ ನಿಮರ್ಿಸಲು ಅಶಕ್ತರಾಗಿರುವ ಇವರಿಗೆ ಸರಕಾರದ ಪರಿಹಾರ ಧನದ ಭರವಸೆಯೂ ಈವರೆಗೆ ಸಿಕ್ಕಿರುವುದಿಲ್ಲ. ಈ ಬಗ್ಗೆ ಸ್ಥಳೀಯ ಗ್ರಾಮ ಪಂಚಾಯತ್ ಅಧಿಕಾರಿಗಳು, ಶಾಸಕರು ತುತರ್ು ಗಮನಿಸಬೇಕಾದ
ಅಗತ್ಯವೂ ಇದೆ.


