ಮಂಗಳೂರು: ಹಳೆಯಂಗಡಿ ಬಸ್ ನಿಲ್ದಾಣದ ಸಮೀಪ ಅಪರಿಚಿತ ಸುಮಾರು 45 ವರ್ಷ ಪ್ರಾಯದ ಗಂಡಸಿನ ಶವ ಪತ್ತೆಯಾಗಿದೆ. ಭಿಕ್ಷುಕನ ರೀತಿಯಲ್ಲಿ ಶವ ಕಂಡುಬರುತ್ತಿದ್ದು, ಎಲ್ಲಿಂದಲೋ ಬಂದ ವ್ಯಕ್ತಿ ಬಳಲಿಕೆಯಿಂದ ಬಸ್ ನಿಲ್ದಾಣದಲ್ಲಿ ಕುಳಿತಿದ್ದಾಗ ನಿತ್ರಾಣಗೊಂಡು ಬಳಲಿಕೆಯಿಂದ ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ. ಮೃತದೇಹವನ್ನು ವೆನ್ ಲಾಕ್ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ.

