ಬಂಟ್ವಾಳ ನಗರ ಠಾಣೆಯಲ್ಲಿ ಜನಸ್ನೇಹಿ ಠಾಣಾಧಿಕಾರಿಯಾಗಿ ಮಂಗಳೂರಿಗೆ ವರ್ಗಾವಣೆಗೊಂಡ ಎ.ಕೆ.ರಕ್ಷಿತ್ ಗೌಡ ಇವರನ್ನು ತಾಲ್ಲೂಕಿನ ಟೂರಿಸ್ಟ್ ಕಾರು ಮತ್ತು ವ್ಯಾನು ಚಾಲಕ ಮಾಲೀಕರ ಸಂಘದ ವತಿಯಿಂದ ಶನಿವಾರ ಸನ್ಮಾನಿಸಲಾಯಿತು.
ಸಂಘದ ಅಧ್ಯಕ್ಷ ವಿನ್ಸಂಟ್ ರೋಡ್ರಿಗಸ್, ಸಂಚಾಲಕ ಕೃಷ್ಣ ಅಲ್ಲಿಪಾದೆ, ಉಪಾಧ್ಯಕ್ಷ ನಮೇಶ್ ಶೆಟ್ಟಿ ಕುರಿಯಾಳ, ಕಾರ್ಯದರ್ಶಿ ನಾರಾಯಣ ನಾಯ್ಕ , ಪ್ರಮುಖರಾದ ರಾಜ ಚೆಂಡ್ತಿಮಾರ್, ಬಿ.ಎಂ.ಪ್ರಭಾಕರ ದೈವಗುಡ್ಡೆ , ರಾಮಚಂದ್ರ ಸುವರ್ಣ ಕಾಯರ್ಮಾರ್, ಹಸೈನಾರ್ ಪರ್ಲಿಯಾ, ಶರೀಫ್ ಪರ್ಲಿಯಾ, ತಿಮ್ಮಪ್ಪ ಪೂಜಾರಿ ಸಿದ್ಧಕಟ್ಟೆ ಮತ್ತಿತರರು ಇದ್ದರು.
