ಬಂಟ್ವಾಳ: ವ್ಯವಸ್ಥೆಯಲ್ಲಿರುವ ಲೋಪದೋಷಗಳನ್ನು ಸರಿಪಡಿಸಲು ಸಂಘಟನೆಯಿಂದ ಮಾತ್ರ ಸಾಧ್ಯ , ಕಾನೂನಿನಡಿಯಲ್ಲಿ ಸಂಘಟನಾತ್ಮಕವಾಗಿ ಹೋರಾಟ ಮಾಡಿ ಬೇಡಿಕೆಗಳನ್ನು ಪಡೆಯಿರಿ ಎಂದು ಬಿಜೆಪಿ ಮುಖಂಡ ಉಳಿಪ್ಪಾಡಿಗುತ್ತು ರಾಜೇಶ್ ನಾಯಕ್ ಹೇಳಿದರು.ಅವರು ಲಯನ್ಸ್ ಸೇವಾ ಮಂದಿರದಲ್ಲಿ ನಡೆದ ಬಂಟ್ವಾಳ ಅಟೋ ರಿಕ್ಷಾ ಚಾಲಕರ-ಮಾಲಕರ ಸಂಘ ಇದರ 29ನೇ ವಾರ್ಷಿಕ ಮಹಾ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.1 (2)

ಜವಬ್ದಾರಿಯನ್ನು ಅರಿತುಕೊಂಡು ಕೆಲಸ ನಿರ್ವಹಿಸುವುದರ ಜೊತೆಗೆ ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವ ನಿಮ್ಮ ಗುಣ ಅಭಿನಂದನೀಯ ಎಂದರು. ಎಲ್ಲಾ ವರ್ಗದ ಜನರ ಜೊತೆ ಬೆರೆಯುವುದರ ಜೊತೆಗೆ ಅವರ ಸಮಸ್ಯೆಗೆ ಸ್ಪಂದಿಸುವ ಗುಣ ರಿಕ್ಷಾ ಚಾಲಕರಲ್ಲಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿ.ಯಂ.ಎಸ್. ರಾಜ್ಯ ಅಧ್ಯಕ್ಷ ವಿಶ್ವನಾಥ ಶೆಟ್ಟಿ ವಹಿಸಿದ್ದರು. ವೇದಿಕೆಯಲ್ಲಿ ಪುರಸಭಾ ಸದಸ್ಯ ಬಂಟ್ವಾಳ ಅಟೋ ರಿಕ್ಷಾ ಚಾಲಕರ-ಮಾಲಕರ ಸಂಘದ ಗೌರವಾಧ್ಯಕ್ಷ ಗೋವಿಂದ ಪ್ರಭು, ಟ್ರಾಪಿಕ್ ಪೋಲೀಸ್ ಠಾಣೆಯ ಎ.ಎಸ್.ಐ.ಬಾಲಕೃಷ್ಣ ಗೌಡ, ಸಂಘದ ಕಾನೂನು ಸಲಹೆಗಾರ ನ್ಯಾಯವಾದಿ ಜಯರಾಮ ರೈ, ಎಸ್.ವಿಎಸ್ ಕಾಲೇಜಿನ ಪ್ರೊ. ನಾರಾಯಣ ಭಂಡಾರಿ, ಬಂಟ್ವಾಳ ಅಟೋ ರಿಕ್ಷಾ ಚಾಲಕರ-ಮಾಲಕರ ಸಂಘದ ಅಧ್ಯಕ್ಷ ವಸಂತ ನಾವೂರ, ಜಿಲ್ಲಾ ಸಂಘದ ಕಾರ್ಯದರ್ಶಿ ಬಾಲಕೃಷ್ಣ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಹಿರಿಯ ರಿಕ್ಷಾ ಚಾಲಕ ಆನಂದ ಚೆಂಡ್ತಿಮಾರ್ ಅವರನ್ನು ಸನ್ಮಾನಿಸಲಾಯಿತು. ಸಂಘದ ಸಲಹೆಗಾರ ಸದಾನಂದ ಗೌಡ ನಾವೂರ ಸ್ವಾಗತಿಸಿ ವಂದಿಸಿದರು. ಉಮಾಶಂಕರ್ ಬಡ್ಡಕಟ್ಟೆ ಕಾರ್ಯ ಕ್ರಮ ನಿರೂಪಿಸಿದರು.

By Suddi9

Leave a Reply

Your email address will not be published. Required fields are marked *