ಬಂಟ್ವಾಳ:ಅಮ್ಟಾಡಿ ಗ್ರಾಮದ ಕಾಯರ್ ಮಾರ್ ನಿವಾಸಿ ರವಿ (41) ಎಂಬವರ ಮೃತದೇಹ ಬಂಟ್ವಾಳ-ಧರ್ಮಸ್ಥಳ ಹೆದ್ದಾರಿಯ ಅಮ್ಟಾಡಿ ಗ್ರಾಮದ ಅಜೆಕಲ ಬೈಪಾಸ್ ಎಂಬಲ್ಲಿ ಅನುಮಾನಸ್ಪದವಾಗಿ ಪತ್ತೆಯಾಗಿದೆ. 

ಮೃತದೇಹದಲ್ಲಿ ಗಾಯದ ಗುರುತುಗಳಿದ್ದು, ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆಒಳಪಡಿಸಲಾಗಿದೆ.ನಗರ ಠಾಣಾಧಿಕಾರಿ ಸಮೇತ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿದ್ದು, ತನಿಖೆ ಕೈಗೆತ್ತಿಕೊಂಡಿದ್ದಾರೆ.
ಚಿತ್ರ.ಎಸ್ ಆರ್
