ಬಂಟ್ವಾಳ : ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ಸುಭಾಷ್ ನಗರ ಸಜಿಪಮೂಡ ಗ್ರಾಮದಲ್ಲಿ ಸುಭಾಷ್ ಯುವಕ ಮಂಡಲ ಮತ್ತು ಶ್ರೀ ಶಾರದಾ ಪೂಜಾ ಸೇವಾ ಸಮಿತಿ ಜಂಟಿ ಆಶ್ರಯದಲ್ಲಿ 91ನೇ ವರ್ಷದ ಶಾರದಾ ಪೂಜಾ ಮಹೋತ್ಸವದ ಸಮಾರೋಪ ಸಮಾರಂಭವು ದ.ಕ.ಜಿ.ಪಂ.ಮಾಜಿ ಅಧ್ಯಕ್ಷ ಸುಭಾಷ್ ಯುವಕ ಮಂಡಲ ಸ್ಥಾಪಕಾಧ್ಯಕ್ಷ ಬಿ.ಸದಾನಂದ ಪೂಂಜ ರವರ ಅಧ್ಯಕ್ಷತೆಯಲ್ಲಿ ಜರಗಿತು. ವೇದಿಕೆಯಲ್ಲಿ ಜಯಕರ್ನಾಟಕ ಜಿಲ್ಲಾಧ್ಯಕ್ಷ ಶ್ರೀಕಾಂತ್ ಶೆಟ್ಟಿ, ಸ.ಮೂಡ ಗ್ರಾ.ಪಂ.ಸದಸ್ಯರಾಗ ಯೋಗೀಶ್ ಬೆಳ್ಚಾಡ, ಎಸ್.ಶ್ರೀನಾಥ ಶೆಟ್ಟಿ, , ಶಾರದಾ ಪೂಜಾ ಮಹೋತ್ಸವ ಸಮಿತಿ ಅಧ್ಯಕ್ಷ ಪಿ.ರಮೇಶ್ ಸುವರ್ಣ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಚೆನ್ನಪ್ಪ ಪೂಜಾರಿ, ಚಿಣ್ಣರ ಲೋಕ ಸೇವಾ ಟ್ರಸ್ಟ್ ಸಂಚಾಲಕ ಮೋಹನ್ ದಾಸ್ ಕೊಟ್ಟಾರಿ, ಧಾರ್ಮಿಕ ಮುಂದಾಳು ಎಂ.ಸುಬ್ರಹ್ಮಣ್ಯ ಭಟ್, ಸಜಿ[ಪಮೂಡ ಗ್ರಾ.ಪಂ.ಮಾಜಿ ಅಧ್ಯಕ್ಷ ದೇವಿಪ್ರಸಾದ್ ಪೂಂಜ ಉಪಸ್ಥಿತರಿದ್ದರು. ಶಾರದಾ ಪೂಜೋತ್ಸವ ದ ಅಂಗವಾಗಿ ವಿವಿಧ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ , ಸಾಂಸ್ಕøತಿಕ ಕಾರ್ಯಕ್ರಮ ಜರಗಿತು.

