ಶ್ರೀ ಕೃಷ್ಣನ ಕ್ಷೇತ್ರವಾದ ಉಡುಪಿಯಿಂದ ಆಗ್ನೇಯ ದಿಕ್ಕಿನಲ್ಲಿ , ಸುಮಾರು ಆರೇಳು ಮೈಲಿ (ಹನ್ನೊಂದು ಕಿಲೋ ಮೀಟರ್) ದೂರದಲ್ಲಿರುವ `ಕುಂಜಾರು’ ಕುರ್ಕಾಲು ಗ್ರಾಮಕ್ಕೆ ಸೇರಿದ ಒಂದು ಪುಟ್ಟ ಹಳ್ಳಿ. ಕುಂಜಾರಿನ ಬೆಟ್ಟದಲ್ಲಿ ನೆಲೆಸಿರುವ ಶ್ರೀ ದುರ್ಗಾದೇವಿಯ ಸನ್ನಿಧಾನದಿಂದಾಗಿ ಆಧ್ಯಾತ್ಮಿಕ ದೃಷ್ಟಿಯಲ್ಲಿ ಅದು ಒಂದು ವಿಶಿಷ್ಟ ಸ್ಥಾನವೆನಿಸಿದೆ. ಇಲ್ಲಿರುವ ಎತ್ತರದ ಬೆಟ್ಟವು ದೂರದಿಂದ “ಕುಂಜರ” ದಂತೆ (ಆನೆಯಂತೆ) ಕಾಣುವುದರಿಂದ“ಕುಂಜರಗಿರಿ” ಅಥವಾ “ಕುಂಜಾರುಗಿರಿ” ಎಂಬ ಹೆಸರು ಬಂತೆಂದು ಐತಿಹ್ಯವಿದೆ. ಪರಶುರಾಮ ದೇವರಿಂದ ಇಲ್ಲಿ ಶ್ರೀ ದುರ್ಗೆಯು ಪ್ರತಿಷ್ಠೆಯಾದಾಗ ದೇವತೆಗಳು ವಿಮಾನವನ್ನೇರಿ ಯೋಗಮಾಯ ರೂಪ
ಪ್ರಕೃತಿಯ ತಮೋಗುಣವನ್ನು ನಿಯಂತ್ರಿಸುವ ಲಕ್ಷ್ಮೀದೇವಿಯ ರೂಪವೇ `ದುರ್ಗಾ’ ಭಗವಂತನು ದ್ವಾಪರ ಯುಗದಲ್ಲಿ ಶ್ರೀ ಕೃಷ್ಣನಾಗಿ ಅವತರಿಸಿದಾಗ ದುರ್ಗಾದೇವಿ ಭಗವಂತನ ಆದೇಶಾನುಸಾರವಾಗಿ `ಯೋಗಮಾಯಾ’ ಎಂಬ ರೂಪವನ್ನು ತಾಳಿದ್ದಳು. ದೇವಕಿಯ ಗರ್ಭದಲ್ಲಿ ಮೂರುತಿಂಗಳು ಇದ್ದ ಶೇಷನನ್ನು ರೋಹಿಣಿಯ ಗರ್ಭಕ್ಕೆ ವರ್ಗಾಯಿಸಿದ್ದ ಯೋಗ ಮಾಯೆ, ಭಗವಂತನು ದೇವಕಿಯಲ್ಲಿ ಕೃಷ್ಣನಾಗಿ ಅವತರಿಸಲು ನಂದಗೋಪನ ಪತ್ನಿ ಯಶೋದೆಯಲ್ಲಿ ದುರ್ಗಿಯಾಗಿ ತಾನೂ ಅವತರಿಸಿದ್ದಳು. ವಸುದೇವನು ಬಾಲಕೃಷ್ಣನನ್ನು ಕಾರಾಗೃಹದಿಂದ ನಂದವ್ರಜಕ್ಕೆ ಕೊಂಡೊಯ್ಯಲು ತೊಡಗಿದಾಗ ಕಂಸನ ಕಾವಲುಗಾರರೆಲ್ಲ ನಿದ್ರೆಗೊಳಗಾಗುವಂತೆ ಮಾಡಿದ್ದ ಯೋಗಮಾಯೆ ನಂದವ್ರಜದಿಂದ ದೇವಕಿಯಲ್ಲಿಗೆ ವಸುದೇವನಿಂದ ತರಲ್ಪಟ್ಟವಳಾಗಿ ಅದುವರೆಗೆ
ಪ್ರತಿಮೆಯ ಸಂಕೇತ
ಕುಂಜಾರುಗಿರಿಯ ದುರ್ಗಾಲಯದಲ್ಲಿ ವಿರಾಜಮಾನಳಾದ ಯೋಗಮಾಯಾರೂಪದ ದುರ್ಗಾದೇವಿ ನಿಂತಿರುವ ಭಂಗಿಯ ಪ್ರತಿಮೆಯಲ್ಲಿ ಸನ್ನಿಹಿತಳಾಗಿದ್ದು, ‘ಶಿಷ್ಟರಿಗೆ ತೊಂದರೆ ಕೊಡುವ ದುಷ್ಟರನ್ನು ಸಂಹರಿಸಿ, ಶಿಷ್ಟರ ಇಷ್ಟಗಳನ್ನು ಪೂರೈಸುವುದರಲ್ಲಿ ತಾನು ಸದಾ ಸಿದ್ಧಳು’- ಎಂದು ಸಾರುತ್ತಿರುವಂತೆ ಕಾಣಿಸುವಳು. ಮೇಲಿನ ಎರಡು ಕೈಗಳಲ್ಲಿ ಧರಿಸಿರುವ ಶಂಖಚಕ್ರಗಳು ಶಿಷ್ಟರ ಇಷ್ಟಗಳ ಪೂರೈಕೆಯ ಸಂಕೇತವಾಗಿದ್ದರೆ, ಕೆಳಗಿನ ಎರಡೂ ಕೈಗಳಲ್ಲಿ ಧರಿಸಿರುವ ಬಿಲ್ಲು ಹಾಗೂ ತ್ರಿಶೂಲಗಳು ದುಷ್ಟ ಸಂಹಾರದ ಸಂಕೇತವಾಗಿದೆ. ಪಾದದಡಿಯಲ್ಲಿ ಬಿದ್ದಿರುವ ಮಹಿಷಾಸುರನ ಪ್ರತಿಮೆ ಇದಕ್ಕೆ ಪುಷ್ಟಿ ನೀಡುತ್ತದೆ. ಕೊಂಬುಗಳನ್ನು ಹೊಂದಿರುವ ಮಹಿಷಾಸುರ ಅಹಂಕಾರಕ್ಕೂ ಸಂಕೇತವೆನಿಸುತ್ತಿದ್ದು, ತಮೋಗುಣದ
ಪ್ರಾಚೀನ ಸಾಹಿತ್ಯದಲ್ಲಿ ಉಲ್ಲೇಖ
ಕುಂಜಾರುಗಿರಿಯ ಹಾಗೂ ಅದರಲ್ಲಿ ನೆಲೆಸಿರುವ ದುರ್ಗಾದೇವಿಯ ಉಲ್ಲೇಖ ಶ್ರೀ ನಾರಾಯಣ ಪಂಡಿತಾಚಾರ್ಯರು ರಚಿಸಿರುವ ’ಸುಮಧ್ವವಿಜಯ’ದಲ್ಲಿಯೂ, ಶ್ರೀ ವಾದಿರಾಜ ತೀರ್ಥರು ನಿರ್ಮಿಸಿರುವ ’ತೀರ್ಥಪ್ರಬಂಧ’ ದಲ್ಲಿಯೂ ಬಂದಿದೆ. ಸುಮಧ್ವಯ ವಿಜಯದಲ್ಲಿ (೨-೧೧) ಶ್ರೀ ಮಧ್ವಾಚಾರ್ಯರ ಅವತಾರ ಭೂಮಿಯಾದ ಪಾಜಕಕ್ಷೇತ್ರದ ವೈಶಿಷ್ಟ್ಯವನ್ನು ತಿಳಿಸುತ್ತ – ’ವಿಮಾನಗಿರಿ’ ಎನಿಸುವ ದುರ್ಗಾಬೆಟ್ಟದಿಂದ ಶೋಭಿಸುತ್ತಿರುವಂತಹದ್ದು ಪಾಜಕ, ’ವಿಮಾನಗಿರಿ’ಯಾದರೂ ಶ್ರೀ ಕೃಷ್ಣನ ತಂಗಿಯಾದ ದುರ್ಗೆ ಎಂಬ ಶಿರೋನಾಮೆಯಿಂದ ವಿರಾಜಿಸುತ್ತಿದೆ. ಶ್ರೀ ಪರಶುರಾಮನೇ ದುರ್ಗೆಯನ್ನು ದುರ್ಗಾಬೆಟ್ಟದಲ್ಲಿ ಪ್ರತಿಷ್ಠಾಪಿಸಿರುವನು ಎಂಬುದಾಗಿ ನಿರೂಪಿಸಲಾಗಿದೆ. ತೀರ್ಥ ಪ್ರಬಂಧದಲ್ಲಿ (ಪಶ್ಚಿಮ ಪ್ರಬಂಧ -೧೭..೨೦) ದುರ್ಗಾಬೆಟ್ಟದ
ಪರಶುರಾಮನಿಂದ ಪ್ರತಿಷ್ಠೆ
ಸಾಮಾನ್ಯವಾಗಿ ವ್ಯಕ್ತಿಗಳು ತಮಗಿಂತ ಶ್ರೇಷ್ಠರಾದ ದೇವತೆಗಳ ಪ್ರತಿಷ್ಠೆಯನ್ನು ಮಾಡುವರು. ಈ ಸಾಮಾನ್ಯ ನಿಯಮಕ್ಕೆ ಅಪವಾದವಾಗಿ ಕುಂಜಾರು ದುರ್ಗೆ ಅವಳಿಗಿಂತ ಅನಂತಪಟ್ಟು ಶ್ರೇಷ್ಠರಾದ ಪರಶುರಾಮನಿಂದ ಪ್ರತಿಷ್ಠಿತಳಾಗಿರುವಳು. ಭಗವಂತನ ಸಾಕ್ಷಾದವತಾರ ಪರಶುರಾಮನ ಅಮೃತ ಹಸ್ತದಿಂದ ಪ್ರತಿಷ್ಠೆ ನಡೆದಿದೆ ಎಂದರೆ ಆ ಪ್ರತಿಮೆಯಲ್ಲಿ ಸದಾ ಸನ್ನಿದಾನ- ಎಂಬುದು ಸ್ಪಷ್ಟ.
ಜಗನ್ನಾಥ ಜಗದ್ಗುರುಗಳ ಸಾಮೀಪ್ಯ
ಕುಂಜಾರಿನ ದುರ್ಗಾಲಯದ ಪಶ್ಚಿಮದ ಮಗ್ಗುಲಲ್ಲಿ ಶ್ರೀ ಪರಶುರಾಮನಿಂದ ಅಧಿಷ್ಠಿತವಾದ ಪರಶುರಾಮ ಬೆಟ್ಟ ವಿರಾಜಿಸುತ್ತಿದ್ದರೆ, ಪೂರ್ವದಿಕ್ಕಿನಲ್ಲಿ ಜಗದ್ಗುರು ಶ್ರೀ ಮಧ್ವಾಚಾರ್ಯರು ಅವತರಿಸಿರುವ ಹಾಗೂ ತಮ್ಮ ಬಾಲ್ಯವನ್ನು ಕಳೆದಿರುವ `ಪಾಜಕ’ ಮೆರೆಯುತ್ತಿದೆ. ಪರಶುರಾಮಬೆಟ್ಟ ಕುಂಜಾರುಗಿರಿಯ ದೇವಿಗೆ ಜಗನ್ನಾಥನಾದ ಶ್ರೀ ಪರಶುರಾಮನ ಅನುಗ್ರಹವನ್ನೂ, ಪಾಜಕ ಜಗದ್ಗುರು ಶ್ರೀ ಮಧ್ವಾಚಾರ್ಯರ ಕುರಿತಾಗಿ ಇರುವ ಕುಂಜಾರು ಗಿರಿಯ ದೇವಿಯ ಆದರಾತಿಶಯವನ್ನೂ ಅನುಗ್ರಹಾತಿಶಯವನ್ನೂ ಮೌನವಾಗಿ ಸಾರುತ್ತಿದೆ.
ಬಾಣತೀರ್ಥ, ಗದಾತೀರ್ಥ ಹಾಗೂ ಪರಶುರಾಮ ಗುಹೆ
ದುರ್ಗಾಬೆಟ್ಟದ ಪೂರ್ವದಿಕ್ಕಿನಲ್ಲಿ ಪರಶುರಾಮ ನಿರ್ಮಿತವಾದ ಬಾಣತೀರ್ಥ ಇದ್ದರೆ, ಪಶ್ಚಿಮ ದಿಕ್ಕಿನಲ್ಲಿ ಗದಾತೀರ್ಥ ಇದೆ. ಪೂರ್ವಬದಿಯಲ್ಲಿಯೇ ಸ್ವಲ್ಪ ಕೆಳಗೆ ಇರುವ ಪರಶುರಾಮಗುಹೆ,ಬಾಣ ತೀರ್ಥ, ಗದಾತೀರ್ಥಗಳೊಂದಿಗೆ ದುರ್ಗಾಬೆಟ್ಟಕ್ಕೆ ಪರಶುರಾಮನ ಸಂಪರ್ಕವನ್ನು ದೃಡೀಕರಿಸುತ್ತಿದೆ. ಪರಶುರಾಮ ಗುಹೆಯಲ್ಲಿ ಇಂದಿಗೂ ಶ್ರೀ ಪರಶುರಾಮ ಸನ್ನಿಹಿತನಾಗಿರುವನೆಂಬ ನಂಬಿಕೆ ಇದೆ.
ಎತ್ತರದ ಸ್ಥಾನ
ದುರ್ಗಾ ಎಂದು ಅನ್ವರ್ಥಕವಾಗಿ ಕರೆಸಿಕೊಳ್ಳಲ್ಪಡುವ ತಾನು ಸಾಕಷ್ಟು ಪರಿಶ್ರಮಪಟ್ಟವರಿಗಷ್ಟೇ ರಮ್ಯಳಾಗಿರುವವಳೆಂದು ಸೂಚಿಸಿಕೊಡುವುದಕ್ಕಾಗಿಯೋ ಎಂಬಂತೆ ಕುಂಜಾರಿನ ದುರ್ಗಾದೇವಿ ೨೫೭ ಮೆಟ್ಟಿಲುಗಳನ್ನು ಹೊಂದಿರುವಷ್ಟು ಎತ್ತರದ ಕುಂಜಾರುಬೆಟ್ಟದ ಮೇಲೆ ನೆಲೆಸಿರುವಳು. ಬೆಟ್ಟದ ನಾಲ್ಕು ಮಗ್ಗಲುಗಳಲ್ಲಿಯೂ ಮೇಲೆ ಏರಲು ದಾರಿಗಳಿವೆಯಾದರೂ ದಕ್ಷಿಣ , ಪಶ್ಚಿಮ ಬದಿಯಲ್ಲಿ ಕಾಲ್ನಡಿಗೆಯಿಂದ ಮೇಲೇರಲು ಅನುಕೂಲವಾಗುವಂತೆ ಮೆಟ್ಟಿಲುಗಳಿವೆ. ಪಶ್ಚಿಮ ದಿಕ್ಕಿನಲ್ಲಿ ವಾಹನ ಸಂಚಾರಕ್ಕೆ ಅನುಕೂಲವಾದ ದಾರಿ ಇದೆ.
ಪ್ರಶಾಂತ ವಾತವರಣ
ದುರ್ಗಾಬೆಟ್ಟದ ಸುತ್ತಲೂ ಹಬ್ಬಿ ನಿಂತಿರುವ ಹಸಿರಾದ ಕಾನನ. ಅದರ ಮಧ್ಯದ ದೇವಾಲಯದಲ್ಲಿ ಶೋಭಾಯಮಾನಳಾಗಿ ನಿಂತಿರುವ ದುರ್ಗೆ ‘ವನದುರ್ಗೆ’ – ಎಂದೆನಿಸುವಂತೆ ಮಾಡಿದೆ. ಹಿಂದೆ ಹುಲಿಗಳು ನೆಲೆಯಾಗಿದ್ದ ದಟ್ಟ ವನ ಈಗ ನವಿಲು, ನರಿ, ಕೋತಿಗಳಿಗಷ್ಟೇ ಆಶ್ರಯ ನೀಡುವಷ್ಟು ಸೊರಗಿ ಹೋಗಿದೆಯಾದರೂ ಪ್ರಶಾಂತ ವಾತಾವರಣವನ್ನು ಸೃಷ್ಟಿಸಿದೆ. ಸುತ್ತ ಬೆಳೆದ ಗಿಡಮರಗಳ ಹಚ್ಚಹಸುರು ಕಣ್ಣುಗಳಿಗೆ ಮುದವನ್ನೀಡುತ್ತಿದ್ದರೆ, ಆಗಾಗ್ಯೆ ಬೀಸುವ ತಂಗಾಳಿ ಮೈಮನಗಳಿಗೆ ತಂಪನ್ನೀಡುತ್ತದೆ. ಇದರಿಂದಾಗಿ ಅಂತಃಕರಣ ಪ್ರಶಾಂತವಾಗಿ ಒಳಮುಖವಾಗುತ್ತಿರುತ್ತದೆ. ಭೂಮಟ್ಟಕ್ಕಿಂತ ಸುಮಾರು ೧೦೦ ಅಡಿಗಳಿಗಿಂತಲೂ ಎತ್ತರದಲ್ಲಿರುವ ಈ ದುರ್ಗಾಲಯದ ಹೊರಾಂಗಣ
ಹೊರಾಂಗಣದಲ್ಲೇ ದೇವಿಯ ದರ್ಶನ
ದುರ್ಗಾಲಯದ ಹೊರಾಂಗಣಕ್ಕಿಂತ ಸುಮಾರು ಮೂರು ಅಡಿಗಳಷ್ಟು ಎತ್ತರ ಒಳಾಂಗಣ ಇದ್ದರೆ, ಒಳಾಂಗಣದಲ್ಲಿಯೂ ಸುಮಾರು ಮೂರು ಅಡಿಗಳಷ್ಟು ಎತ್ತರದಲ್ಲಿ ದೇವಿಯ ಪ್ರತಿಮೆ ಪ್ರತಿಷ್ಠಪಿಸಲ್ಪಟ್ಟಿರುವುದರಿಂದ ಹೊರಾಂಗಣದಲ್ಲಿದ್ದುಕೊಂಡೇ ದೇವಿಯ ದರ್ಶನ ಪಡೆಯಬಹುದಾದ ವೈಶಿಷ್ಟ್ಯ ಇಲ್ಲಿಯ ವಾಸ್ತುವಿಗೆ ಇದೆ.
ನಿರ್ಮಾಲ್ಯ ದೇವತೆಯ ವಿಗ್ರಹ
ದೇವಾಲಯಗಳಲ್ಲಿ ಆಯಾ ದೇವಾಲಯಕ್ಕೆ ಸಂಬಂಧಪಡುವ ’ನಿರ್ಮಾಲ್ಯದೇವತೆ’ ಯ ವಿಗ್ರಹ ಒಂದು ಬೋಳು ಕಲ್ಲಿನ ರೂಪದಲ್ಲಿದ್ದರೆ, ಈ ದುರ್ಗಾಲಯದ ನಿರ್ಮಾಲ್ಯ ದೇವತೆಯಾದ ‘ಮುಂಡಿನಿ’ ದೇವಿಯ ಎಡಮಗ್ಗುಲಲ್ಲಿ, ಒಳಾಂಗಣದಲ್ಲಿ ಒಂದು ಕಾಲನ್ನು ಮಡಚಿ ಕುಳಿತಿರುವ ವಿಗ್ರಹ ರೂಪದಲ್ಲಿದೆ. ಈ ದೃಶ್ಯ ಬಹಳ ವಿರಳ.
ಕೆಳಗಿನಿಂದ ನೀರು ಹೊರುವಿಕೆ
ಕುಂಜಾರುಬೆಟ್ಟದ ದುರ್ಗಾಲಯದ ವಠಾರದಲ್ಲಿ ಬಾವಿ ಇಲ್ಲ. ಈಗ ನಳ್ಳಿಯ ವ್ಯವಸ್ಥೆಯನ್ನು ಕಲ್ಪಿಸಲಾಗಿದೆಯಾದರೂ ದೇವಿಯ ಪೂಜೆ, ನೈವೇದ್ಯಾದಿಗಳಿಗೆ ನಲ್ಲಿ ನೀರನ್ನು ಬಳಸುವಂತಿಲ್ಲ. ಆದುದರಿಂದ ಕೆಳಗಿನ ಬಾಣತೀರ್ಥ ಹಾಗೂ ಗದಾತೀರ್ಥದಿಂದ ದುರ್ಗಾಲಯಕ್ಕೆ ನೀರನ್ನು ಹೊತ್ತು ತರಬೇಕು. ಸಾಮಾನ್ಯಕೊಡಕ್ಕಿಂತ ಸುಮಾರು ಎರಡೂವರೆಪಟ್ಟಿನಷ್ಟು ದೊಡ್ಡದಾದ ಕೊಡದಲ್ಲಿ ನಿರ್ಮಾಲ್ಯವಿಸರ್ಜನೆಗಾಗಿ ಒಂದು ಕೊಡ ನೀರು, ಅಭಿಷೇಕಕ್ಕಾಗಿ ನಾಲ್ಕುಕೊಡ ನೀರು, ನೈವೇದ್ಯಕ್ಕಾಗಿ ಒಂದುಕೊಡ ನೀರು – ಹೀಗೆ ಒಟ್ಟು ಆರು ಕೊಡ ನೀರು ಪ್ರತ್ತಿನಿತ್ಯದ ಪೂಜೆಗೆ ಅತ್ಯಾವಶಕ. ದೊಡ್ಡ ಗಾತ್ರದ ಕೊಡವನ್ನು ತಲೆಯಲ್ಲಿ ಹೊತ್ತುಕೊಂಡು ಮೇಲೇರಲಾಗುವುದು. ರೂಢಿಯಾದ ವ್ಯಕ್ತಿಗೆ
ಆಡಳಿತ ಮತ್ತು ಪೂಜೆ
ಕುಂಜಿತ್ತಾಯ ವಂಶದ ಎರಡು ಕುಟುಂಬಗಳಿಗೆ ಸೇರಿದ ಅರ್ಚಕರು ಇಲ್ಲಿಯ ಪೂಜೆಯಯನ್ನು ನೆಡೆಸಿಕೊಂಡುತ್ತಿರುವರು. ಸಂಕ್ರಮಣವನ್ನೇ ಗಡುವಾಗಿಟ್ಟುಕೊಂಡು ಹದಿನೈದು ದಿನಗಳ ಅವಧಿಗೊಮ್ಮೆ ಒಂದೊಂದು ಕುಟುಂಬದವರು ಇಲ್ಲಿಯ ಪೂಜೆಯನ್ನು ನಿರ್ವಹಿಸುತ್ತಿರುತ್ತಾರೆ. ಪೂಜೆಯ ಹದಿನೈದು ದಿನಗಳ ರಾತ್ರಿ ಅವರು ದೇವಾಲಯದಲ್ಲಿಯೇ ತಂಗಿರಬೇಕು. ಬ್ರಹ್ಮಚರ್ಯದಲ್ಲಿದ್ದುಕೊಂಡು ದೇವಿಯ ಪೂಜೆಯನ್ನು ನಡೆಸಬೇಕೆಂಬುದು ಈ ವ್ಯವಸ್ಥೆಯ ಆಂತರ್ಯ. ಆಡಳಿತವನ್ನು ನಡೆಸುವ ಉಡುಪಿ ಶ್ರೀ ಅದಮಾರು ಮಠಕ್ಕೂ, ಈ ದುರ್ಗಾಲಯಕ್ಕೂ ಇರುವ ಆಧ್ಯಾತ್ಮಿಕ ನಂಟನ್ನು ಸಾರುವ ಒಂದು ಸ್ವಾರಸ್ಯಕರವಾದ ಆಚರಣೆಯನ್ನು ’ಶರನ್ನವರಾತ್ರಿ’ ಯ ಅವಧಿಯಲ್ಲಿ ನಡೆಸಲಾಗುವುದು. ಅದಮಾರು ಮಠದ ಉಪಾಸ್ಯಮೂರ್ತಿ
ದೈನಂದಿನ ಪೂಜೆಗಳು
ಕುಂಜಾರುಗಿರಿಯ ದುರ್ಗೆಗೆ ಪ್ರತಿನಿತ್ಯ ಬೆಳಗ್ಗೆ ಐದುಗಂಟೆಯಿಂದ ರಾತ್ರಿ ಎಂಟುಗಂಟೆಯವರೆಗೆ ಐದು ಪೂಜೆಗಳು ಸಲ್ಲುವವು. ಬೆಳಗ್ಗೆ ಐದುವರೆಗಂಟೆಗೆ ಸರಿಯಾಗಿ ನಿರ್ಮಾಲ್ಯ ವಿಸರ್ಜನಾ ಪೂಜೆ, ಉಷಃಕಾಲದಪೂಜೆ, ಅಲಂಕಾರ ಪೂಜೆ, ಬೆಳಗ್ಗೆ ಒಂಬತ್ತು ಗಂಟೆಗೆ ಸರಿಯಾಗಿ ಮಹಾಪೂಜೆ ಹಾಗೂ ರಾತ್ರಿ ಏಳುವರೆ ಗಂಟೆಗೆ ಸರಿಯಾಗಿ ರಾತ್ರಿಪೂಜೆ ನಡೆಯುವುದು. ಉಷಃಕಾಲದ ಪೂಜೆಗೆ ಒಂದು ಸೇರಿನ ನೈವೇದ್ಯ, ಅಲಂಕಾರ ಪೂಜೆಗೆ ಒಂದು ಸೇರಿನ ನೈವೇದ್ಯ, ಮಹಾಪೂಜೆಗೆ ಎರಡು ಸೇರಿನ ನೈವೇದ್ಯ ಅಲ್ಲದೇ ಒಂದು ಪಾವು ಅಕ್ಕಿಯ ಪಾಯಸ – ಹೀಗೆ ದೇವಿಗೆ ನೈವೇದ್ಯವನ್ನು ನಿವೇದಿಸಲಾಗುವುದು.
ವಾರ್ಷಿಕ ಸಮಾರಂಭಗಳು
‘ಶರನ್ನವರಾತ್ರಿ’ಯಲ್ಲಿ ನವದುರ್ಗೆಯರಿಗೆ ಕಲ್ಪೋಕ್ತಪೂಜೆಯನ್ನು ಸಲ್ಲಿಸಲಾಗುವುದು. ಕನ್ನಿಕಾ ಪೂಜೆಯನ್ನು ನಡೆಸಲಾಗುವುದು. ಕೆಲವೊಮ್ಮೆ ’ಸೇವೆ’ ಯಾಗಿ ಬರುವ ಐವತ್ತು, ಅರವತ್ತು ಕನ್ನಿಕಾ ಪೂಜೆಗಳನ್ನು ನಡೆಸಬೇಕಾಗಿ ಬರುವುದು. ಸಿಂಹಮಾಸದ ನಾಲ್ಕೈದು ಶುಕ್ರವಾರಗಳಂದು ಐವತ್ತು ಅರವತ್ತು ಸಾವಿರಗಳಷ್ಟೂ ಭಾವುಕರು ಬಂದು ದೇವಿಯ ದರ್ಶನ ಪಡೆಯುವರು. ಸೇವೆಯನ್ನು ಸಲ್ಲಿಸುವರು. ’ಕುಂಕುಮಾರ್ಚನೆ’ ’ಕಾರ್ತಿಕಪೂಜೆ’ ’ಕರ್ಪೂರ ಮಂಗಳಾರತಿ’ ಹಾಗೂ ’ಪಂಚಕಜ್ಜಾಯ ಸಮರ್ಪಣೆ’ – ಇವು ಹೆಚ್ಚಾಗಿ ಸಲ್ಲುವ ಸೇವೆಗಳು. ಹೂವಿನ ಪೂಜೆ, ದುರ್ಗಾಪೂಜೆ, ಚಂಡಿಕಾಹೋಮ – ಇವು ಆಗಾಗ್ಯೆ ಇಲ್ಲಿ ನಡೆಯುತ್ತಿರುವ ವಿಶಿಷ್ಟ ಸೇವೆಗಳು. ಮಾಘ ಶುದ್ಧ
ದುರ್ಗಾಲಯದ ವ್ಯಾಪ್ತಿ
ಕುಂಜರುಗಿರಿಯ ದುರ್ಗಾಲಯ ’ಬಳಿಸಾಗರ ಮಾಗಣೆ’ಯ ದೇವಸ್ಥಾನ ಎನಿಸಿದ್ದು, ಹನ್ನೆರಡು ಮಾಗಣೆಗಳ ಭಕ್ತರನ್ನು ಹೊಂದಿರುವಷ್ಟು ವ್ಯಾಪಕವೆನಿಸಿದೆ. ಕನ್ನರಾಡಿ, ಉಂಡಾರು, ಇನ್ನಂಜೆ, ಕಲ್ಮಂಜೆ, ಪಳ್ಳಿ, ಬೆಳ್ಳೆ, ಬಿಳ್ಯಾರು, ಪಾಜೈ – ಮುಂತಾದ ಊರುಗಳಿಂದೆಲ್ಲ ಭಕ್ತರು ಈ ದುರ್ಗಾಲಯಕ್ಕೆ ಬರುತ್ತಿರುತ್ತಾರೆ. ಪರಶುರಾಮನಿಂದ ಪ್ರತಿಷ್ಠಿತಳಾಗಿರುವ ಇಲ್ಲಿಯ ದೇವಿ ಪರಶುರಾಮನ ತಂದೆ ಜಮದಗ್ನಿ ಋಷಿ ಸಂಬಂಧಿಸಿದ ಗೋತ್ರದವರಿಗೆಲ್ಲ ಕುಲದೇವತೆಯಾಗಿರುವಳು. ಕುಂದಾಪುರದ ಐತಾಳರು, ಅಡಿಗರು, ಶಾಸ್ತ್ರಿಗಳು, ಸೋಮಯಾಜಿಗಳು ಕುಂಜಾರಿನ ದುರ್ಗೆಯನ್ನೇ ಕುಲದೇವತೆಯನ್ನಾಗಿ ಹೊಂದಿದ ಮತ್ತೆ ಕೆಲವರು. ಉಡುಪಿಗೂ ಕುಂಜಾರಿಗೂ ವಿಶಿಷ್ಠವಾದ ನಂಟು.
* ರಾಘವೇಂದ್ರ ಪ್ರಭು ಕರ್ವಾರ್
