ಹೆಬ್ರಿ: ಜೇಸಿಐ ವಲಯ 15 ರ ವತಿಯಿಂದ ಕಾಪುವಿನಲ್ಲಿ ನಡೆದ ವ್ಯವಹಾರ ಸಮ್ಮೇಳನದಲ್ಲಿ ವಲಯಾಧಿಕಾರಿ ಮತ್ತು ಜೇಸಿಐ ಉಡುಪಿ ಸಿಟಿ ಇದರ ನಿಕಟಪೂರ್ವಅದ್ಯಕ್ಷ, ತರಬೇತುದಾರ ರಾಘವೇಂದ್ರ ಪ್ರಭು ಕರ್ವಾಲುರವರನ್ನು ವಲಯದಲ್ಲಿನ ವಿಶೇಷ ಸಾಧನೆಗಾಗಿ ವಲಯಾದ್ಯಕ್ಷ ಸಂತೋಷ್ ಜಿ ಯವರು ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ನಿಕಟಪೂರ್ವ ವಲಯಾದ್ಯಕ್ಷ ಸಂದೀಪ್‍ಕುಮಾರ್,ವ್ಯವಹಾರ ನಿರ್ದೇಶಕರತ್ನಾಕರ ಇಂದ್ರಾಳಿ,ಅನಿಲ್ ಕುಮಾರ್,ರಾಕೇಶ್‍ಕುಂಜೂರು,ಸೌಮ್ಯರಾಕೇಶ್,ಮರಿಯಪ್ಪ ವಲಯಾಧಿಕಾರಿಗಳು ಭಾಗವಹಿಸಿದ್ದರು. ಶ್ರೀಯುತರು ಹಲವಾರು ಸಂಘ ಸಂಸ್ಥೆಯಲ್ಲಿ ಸಕ್ರೀಯರಾಗಿದ್ದು ಉತ್ತಮ ಸಾಮಾಜಿಕ ಚಟುವಟಿಕೆ ನಡೆಸಿಕೊಂಡು ಬರುತ್ತಿದ್ದಾರೆ.
