“ಗಡ್ಡಪ್ಪ”..”ಕಬಾಲಿ”..ಅಂದಾಕ್ಷಣ ಕರ್ನಾಟಕ ಜನತೆಯ ಚಿತ್ತ ವಾಲುವುದು ಮುತ್ತುರಾಜ್ ಅವರತ್ತ.. ಕಾಮಿಡಿ ಕಿಲಾಡಿ ಖ್ಯಾತಿಯ ಮುತ್ತುರಾಜ್ ಈಗ ಸಿನಿಮಾಲೋಕಕ್ಕೆ ಕಾಲಿಟ್ಟಿದ್ದಾರೆ.ಝೀ ಕನ್ನಡ ವಾಹಿನಿಯ ಜನಪ್ರಿಯ “ಕಾಮಿಡಿ ಕಿಲಾಡಿಗಳು” ಕಾರ್ಯಕ್ರಮದಲ್ಲಿ ಅಂತಿಮ ಘಟ್ಟದವರೆಗೂ ತಲುಪಿ, ಜನರ ಮನದಲ್ಲಿ ಅಚ್ಚಳಿಯಾಗಿ ಉಳಿದಿದ್ದ ಮುತ್ತುರಾಜ್ ಇದೀಗ ಸಿನಿಮಾರಂಗದಲ್ಲಿ ಬ್ಯುಸಿಯಾಗಿದ್ದಾರೆ.
ಇವರು ಲೋಕೇಶ್ ಗೌಡ ರಾಮನಗರ( ಪೌರಾಣಿಕ ಚಿತ್ರಗಳ ಅನುಭವಿ) ನಿರ್ದೇಶನದ “ಕಿತ್ತೋದ್ ನನ್ ಮಕ್ಳು “ ಚಿತ್ರದಲ್ಲಿ ಹೀರೋ ಗೆಟಪ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ” ಹಳ್ಳಿಯ ಸೊಗಡಿನ ಜೊತೆಗೆ ಅಲ್ಲಿ ನಡೆಯುವ ಪ್ರೇಮ ಕಥೆಯನ್ನು ಹಾಸ್ಯ ಮಿಶ್ರಿತವಾಗಿ ಮನೋರಂಜಿಸುವ ಮೂಲಕ ಉತ್ತಮ ಸಂದೇಶವನ್ನು ಒಳಗೊಂಡಿರುವ ಸಿನೆಮಾ”. ಅಕ್ಟೋಬರ್ ಮೊದಲ ವಾರದಲ್ಲಿ ಮುಹೂರ್ತ ಹಾಗೂ ಚಿತ್ರೀಕರಣ ಪ್ರಾರಂಭವಾಗಲಿದೆ. ಇದಲ್ಲದೇ ಚೇರ್ ಮ್ಯಾನ್ ಚಿತ್ರದಲ್ಲಿ ಟಿಪ್ಪು, ಬದ್ರಿ v/ssss ಮಧುಮತಿ, ಬಿ.ಎಮ್.ಡಬ್ಲ್ಯು, ಶಿರಾಡಿಘಾಟ್ ಈ ಸಿನೇಮಾಗಳಲ್ಲಿ ಮುಖ್ಯಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇವರು ಲಕ್ಷಣ್ ಗೌಡ & ಹೇಮ ದಂಪತಿಗಳ ಪುತ್ರ. ಮಹಾಲಕ್ಷ್ಮೀ ಇವರ ತಂಗಿ.
ಇವರು ಮಾಚಗೋನಹಳ್ಳಿ ಬೂಕನಕೆರೆ ಹೋಬಳಿ ಕೆ.ಆರ್ ಪೇಟೆ ತಾಲೂಕು ಮಂಡ್ಯಜಿಲ್ಲೆಯಲ್ಲಿ ಜನಿಸಿದ್ದು, ಇವರು ಪ್ರಾಥಮಿಕ, ಪ್ರೌಢ, ಪದವಿಪೂರ್ವ ಶಿಕ್ಷಣವನ್ನು ಕನ್ನಡ ಮಾಧ್ಯಮ ಹಾಗೂ ಸರಕಾರಿ ಶಾಲೆಗಳಲ್ಲ್ಲಿ ಪಡೆದು, ಇವರು ಜೀವನದ ಬಹುಪಾಲು ತನ್ನ ಅಜ್ಜಿಮನೆಯಾದ ಅಲ್ಪಹಳ್ಳಿಯಲ್ಲಿ ಕಳೆದಿದ್ದು ಶಿಕ್ಷಣವನ್ನೂ ಅಲ್ಲಿಯೇ ಪಡೆದಿದ್ದಾರೆ.
ಕಲಾ ಜಗತ್ತಿನಲ್ಲಿ ಕಲಾವಿದನಾಗಿ ಕಲಾಸೇವೆ ಮಾಡಬೇಕು ಅನ್ನುವ ಉದ್ದೇಶದಿಂದ ಬೆಂಗಳೂರಿಗೆ ಬಂದು ಸೇರುತ್ತಾರೆ. ಮೊದಲು ಹೊಟೇಲ್ ನಲ್ಲಿ ಕ್ಲಿನರ್ ಆಗಿ ಕೆಲಸಕ್ಕೆ ಸೇರಿ, ಬಾರ್ ನಲ್ಲಿ ಸಪ್ಲೈಯರ್ , ರಸಮಂಜರಿ, ಗೃಹಕೆಲಸ, ಕಾಫಿ ಡೇ ಕ್ಲೀನರ್, ರಂಗೋಲಿ ಮಾರಾಟ, ವ್ಯಾಪಾರ ಮಳಿಗೆ, ಗಾರ್ನಮೆಂಟ್ಸ್, ಕಾಲ್ ಸೆಂಟರ್ ಏಜೆಂಟ್, ಭಾರತ್ ಮ್ಯಾಟ್ರಿಮೋನಿಯಲ್.ಕಾಂ, ಮುಂತಾದೆಡೆ ಕೆಲಸದ ಅನುಭವವನ್ನು ಪಡೆದಿದ್ದಾರೆ. ಜೀವನದ ಮುಖ್ಯ ಗುರಿ ಸೇರಲು ಕಲಾಕ್ಷೇತ್ರಕ್ಕೆ ಕಾಲಿಟ್ಟರು.
* ಕಲಾ ಸಾಧನೆಯ ಬಗ್ಗೆ ಒಲವು:
ಜನರಿಗೋಸ್ಕರ ಏನಾದ್ರೂ ಸೇವೆ ಮಾಡ್ಬೇಕು ಅನ್ನೋ ಉದ್ದೇಶ ಇರೋದ್ರಿಂದ ಕನಸು ಜಾಸ್ತಿ ಆಯ್ತು. ಪರಿಸರ, ಧರ್ಮ, ದೇವರು, ಇದರ ಬಗ್ಗೆ ಆಲೋಚನೆ ಜಾಸ್ತಿ ಆಯ್ತು. ಇದ್ರಿಂದ ಕಲಾಜಗತ್ತಿನಲ್ಲಿ ಸಾಧನೆ ಮಾಡಲು ನೆರೆಯಾಯ್ತು ಅನ್ನುವುದು ಮುತ್ತುರಾಜ್ ಇವರ ಮನದಾಳದ ಮಾತು.
ಮೊದಲನೆಯದಾಗಿ ಗೆಜ್ಜೆಹೆಜ್ಜೆ, ರಂಗವಿನೋದ, ರಂಗಮಂದಾರ, ಪ್ರಕಾಶ್ ಬೆಳುವಾಡಿ ಹಾಗೂ ಎಮ್.ಡಿ.ಪಲ್ಲವಿ ಜತೆ “ರಾಜು ಮೆಡಲ್”ಎಂಬ “ಕಲಾತ್ಮಕ ಚಿತ್ರ”ದಲ್ಲಿ ಅಭಿನಯಿಸಿದ್ದಾರೆ. ನಂತರ ಕಿರುತೆರೆಯಲ್ಲಿ ಸುವರ್ಣ ಚಾನೆಲ್ ನಲ್ಲಿ ಪ್ರಸಾರವಾಗಿದ್ದ “ಗುಂಡ್ಯಾನ ಹೆಂಡ್ತಿ” ಧಾರವಾಹಿಯಲ್ಲಿ ಹಾಗೂ ಉದಯ ಚಾನೆಲ್ ನಲ್ಲಿ ಪ್ರಸಾರವಾಗುವ “ಮಹಾಭಾರತ” ಸೀರಿಯಲ್ನಲ್ಲಿ, ಝೀ ಕನ್ನಡದಲ್ಲಿ ಪ್ರಸಾರವಾಗಿದ್ದ “ಮಿಸ್ಟರ್ &.ಮಿಸ್ಸಸ್ ರಂಗೇಗೌಡ” ಧಾರಾವಾಹಿಗಳಲ್ಲಿ ಮುಖ್ಯಪಾತ್ರದಲ್ಲಿ ಅಭಿನಯಿಸಿದ್ದು, ಜೂನಿಯರ್ ಆರ್ಟಿಸ್ಟ್ ಆಗಿ “ಅಂಬರೀಶ”, “ಬಹದ್ದೂರ್”, “ಬೆಂಗಳೂರು 26”, “ಮಿಸ್ಟರ್ &.ಮಿಸ್ಸಸ್ ರಾಮಾಚಾರಿ” ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಬಿಡುವಿನ ವೇಳೆ ಆಡಿಶನ್ಗೆ ಹಾಜಾರಾಗುತ್ತಿದ್ದ ಇವರು 2016 ನಲ್ಲಿ ಝೀ ಕನ್ನಡ ಚಾನೆಲ್ನ “ಕಾಮಿಡಿ ಕಿಲಾಡಿ” ಗೆ ಆಯ್ಕೆ ಆಗಿ ಫೈನಲ್ ತನಕ ಇದ್ದು “ಗಡ್ಡಪ್ಪ ಮುತ್ತುರಾಜ” ಎಂದು ಅಭಿಮಾನಿಗಳ ಹೃದಯದಲ್ಲಿ ಅಚ್ಚಾಗಿ ಉಳಿದಿದ್ದಾರೆ. ಈಗ ಪ್ರಸಾರವಾಗುತ್ತಿರುವ “ಕಿಲಾಡಿ ಕುಟುಂಬ”ದಲ್ಲಿ ಇವರ ಅದ್ಭುತ ಪ್ರತಿಭೆಯನ್ನು ನಾವೂ ಈಗಲೂ ಕಾಣಬಹುದು. ಇದು ಇವರ ಕಲಾ ಬದುಕಿಗೆ ಹೊಸ ತಿರುವು ಕೊಟ್ಟಿತು.
ಜೀವನದಲ್ಲಿ ಏನಾದರೂ ಬೇಜಾರಾದಾಗ ಸ್ವಾಮಿವಿವೇಕಾನಂದರ ಆದರ್ಶ ತತ್ವಗಳನ್ನು ಅನುಸರಿಸುತ್ತಿದ್ದರು . ವಿಷ್ಣುವರ್ಧನ್ ಅವರ ನಟನೆ ಹಾಗೂ ಅವರ ವಯಕ್ತಿಕ ಗುಣ ಇವರಿಗೆ ತುಂಬಾ ಇಷ್ಟ. ಇವರನ್ನು ಕಾಣಲು ಊರಿನಿಂದ ಬೆಂಗಳೂರಿಗೆ ತಪ್ಪಿ ಬಂದದ್ದು ಇದೆ. ರಾಜ್ ಕುಮಾರ್, ಶಂಕರ್ನಾಗ್, ಉಪೇಂದ್ರ ಇವರ ವ್ಯಕ್ತಿತ್ವ ಹಾಗೂ ನಟನೆ ಇವರಿಗೆ ಸ್ಪೂರ್ತಿದಾಯಕವಾಗಿವೆ.
ಇವರು ನಾಟಕಗಳಾದ ಸೋಮಾರಿ ಸ್ವಾಮಿ , ಕಿಟ್ಟಿಲೈನ್, ಭಂಡಜೀವನ, ಹಾಗೂ ಹಲವು ಕಥೆ, 40 ಕವನಗಳನ್ನು ಬರೆದಿದ್ದಾರೆ.
ಸಿನಿಮಾ ಪಾತ್ರಗಳಾದ ಪೋಷಕ, ಸೈಲೆಂಟ್, ವಿಲನ್, ಹಾಸ್ಯ ಹೀಗೆ ಯಾವ ವಿಭಿನ್ನ ಪಾತ್ರಕ್ಕೂ ಸೈ, ಆ ಪಾತ್ರಕ್ಕೆ ಜೀವ ತುಂಬುತ್ತೇನೆ ಅನ್ನುತಾರೆ ಮುತ್ತುರಾಜ್.
ಲೇಖನ : ನೀತು ಶೆಟ್ಟಿ.
