ಬಂಟ್ವಾಳ, : ಬಂಟ್ವಾಳದ ಶ್ರೀ ವೆಂಕಟರಮಣ ಸ್ವಾಮೀ ಪದವಿ ಪೂರ್ವ ಕಾಲೇಜಿನ ಆಶ್ರಯದಲ್ಲಿ ನಡೆದ ತಾಲೂಕು ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಹುಡುಗರ ವಿಭಾಗದಲ್ಲಿ ಎಸ್.ವಿ.ಎಸ್ ಪದವಿ ಪೂರ್ವ ಕಾಲೇಜು ಮತ್ತು ವಿಟ್ಲದ ವಿಠಲ ಪದವಿ ಪೂರ್ವ ಕಾಲೇಜು ಇವುಗಳು ಸಮಾನ ಅಂಕಗಳೊಂದಿಗೆ ಪ್ರಥಮ ಸ್ಥಾನ ಪಡೆದುಕೊಂಡವು.
ಹುಡುಗಿಯರ ವಿಭಾಗದ ಪಂದ್ಯಾಟದಲ್ಲಿ ಪೆರ್ನೆ ಶ್ರೀರಾಮಚಂದ್ರ ಪದವಿಪೂರ್ವ ಕಾಲೇಜಿನ ತಂಡ ವಿನ್ನರ್ಸ್ ಆಫ್ ಮತ್ತು ಕಕ್ಯಪದವು ಎಲ್.ಸಿ.ಆರ್ ಇಂಡಿಯನ್ ಪದವಿಪೂರ್ವ ಕಾಲೇಜಿನ ತಂಡವು ರನ್ನರ್ಸ್ ಆಫ್ ಸ್ಥಾನವನ್ನು ಪಡೆದುಕೊಂಡಿತು. ಪೆರ್ನೆ ಶ್ರೀರಾಮಚಂದ್ರ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಕು. ನವ್ಯಶ್ರೀ ಇವರು ಬೆಸ್ಟ್À ರೈಡರ್ ಮತ್ತು ಕಕ್ಯಪದವು ಎಲ್.ಸಿ.ಆರ್ ಇಂಡಿಯನ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಕು. ಸವಿತಾ ಇವರು ಬೆಸ್ಟ್ ಡಿಫೆನ್ಸ್ ಹಾಗೂ ಪೆರ್ನೆ ಶ್ರೀರಾಮಚಂದ್ರ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಕು. ಶ್ರೇಯಾ ಇವರು ಬೆಸ್ಟ್ ಆಲ್ ರೌಂಡರ್ ಪ್ರಶಸ್ತಿಯನ್ನು ಪಡೆದುಕೊಂಡರು.

ತಾಲೂಕು ಮಟ್ಟದ ಈ ಕಬಡ್ಡಿ ಪಂದ್ಯಾಟದಲ್ಲಿ ಹುಡುಗರ 20 ಹಾಗೂ ಹುಡುಗಿಯರ 4 ತಂಡಗಳು ಭಾಗವಹಿಸಿದ್ದವು. ಕಾಲೇಜಿನ ಸಂಚಾಲಕರಾದ ಶ್ರೀ ಕೂಡಿಗೆ ಪ್ರಕಾಶ್ ಶೆಣೈಯವರ ಮುಂದಾಳತ್ವದಲ್ಲಿ ಈ ಪಂದ್ಯಾಟವು ಯಶಸ್ವಿಯಾಗಿ ನಡೆಯಿತು. ಪ್ರಥಮ ಬಹುಮಾನ ಗಳಿಸಿದ ಎಸ್.ವಿ.ಎಸ್. ಪದವಿ ಪೂರ್ವ ಕಾಲೇಜಿನ ತಂಡಕ್ಕೆ ಕಾಲೇಜಿನ ಕ್ರೀಡಾ ಸಹಾಯಕರಾದ ಶ್ರೀ ತಾರಾನಾಥ ಜಿ.ಎಸ್. ಇವರು ಕೋಚ್ ಆಗಿದ್ದರು.
ಎಸ್.ವಿ.ಎಸ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಪಾಂಡುರಂಗ ನಾಯಕ್ ವಿಜೇತರಿಗೆ ಬಹುಮಾನ ವಿತರಿಸಿದರು. ಬಂಟ್ವಾಳ ಅಮೆಚೂರು ಕಬಡ್ಡಿ ಅಸೋಸಿಯೇಶನ್‍ನ ಅಧ್ಯಕ್ಷರಾದ ಕೃಷ್ಣಪ್ಪ ಬಂಗೇರ ಇವರು ಉಪಸ್ಥಿತರಿದ್ದರು. ದೈಹಿಕ ಶಿಕ್ಷಣ ನಿರ್ದೇಶಕ ಮತ್ತು ಕಬಡ್ಡಿ ಪಂದ್ಯಾಟದ ಸಂಯೋಜಕ ಲೆಪ್ಟಿನೆಂಟ್ ಸುಂದರ್ ಇವರು ಸ್ವಾಗತಿಸಿ, ವಂದನೆಗೈದರು.
