ವಿಟ್ಲ ಹಾಲು ಉತ್ಪಾದಕರ ಸಂಘದ ವಾರ್ಷಿಕ ಮಹಾ ಸಭೆಯು ಸಂಘದ ಅಧ್ಯಕ್ಷ ಮೋಹನ ಕಾಯರ್‍ಮಾರ್ ರವರ ಅಧ್ಯಕ್ಷತೆಯಲ್ಲಿ ವಿಟ್ಲ ಮಾದರಿ ಶಾಲಾ ಸಭಾ ಭವನದಲ್ಲಿ ನಡೆಯಿತು. ಸಂಘವು ವರದಿ ವರ್ಷದಲ್ಲಿ ರೂ 2,23,735.63 ಲಾಭಾಂಶ ಗಳಿಸಿದ್ದು ಶೇ 25 ಡಿವಿಡೆಂಡ್ ನೀಡಲಾಗುವುದು ಎಂದು ಅಧ್ಯಕ್ಷರು ಸಭೆಗೆ ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಸಂಘದ ಹಿರಿಯ ಸದಸ್ಯ ಹಾಗೂ ಪಶು ಸಂಗೋಪನಾ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಡಾ| ರಮಾನಂದ ಶೆಟ್ಟಿಯವರನ್ನು ಗೌರವಿಸಲಾಯಿತು. ದ ಕ ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ಪ್ರತಿಭಾ ಶೆಟ್ಟಿ ಒಕ್ಕೂಟದ ಅನುದಾನದ ಬಗ್ಗೆ ಮಾಹಿತಿ ನೀಡಿದರು.

SHV_8996
ಸಂಘದ ಕಾರ್ಯದರ್ಶಿ ಬಿ ಪುರುಷೋತ್ತಮ ಸ್ವಾಗತಿಸಿ ವರದಿ ವಾಚಿಸಿದರು ಉಪಾಧ್ಯಕ್ಷ ಕೆ ಐ ಸುಬ್ರಹ್ಮಣ್ಯ ಭಟ್ ಕಾರ್ಯಕ್ರಮ ನಿರೂಪಿಸಿದರು. ತುಳಸಿ ಪ್ರಾರ್ಥಿಸಿದರು. ನಿರ್ದೇಶಕ ಗೋಪಾಲ ಎಂ, ವಂದಿಸಿದರು. ನಿರ್ದೇಶಕರುಗಳಾದ ಕೃಷ್ಣ ಭಟ್ ಎಸ್, ಜಯರಾಮ ಬಲ್ಲಾಳ್, ಲೋಕನಾಥ, ಲಿಂಗಪ್ಪ ನಾಯ್ಕ, ಗಿರಿಜಾ ಹಾಗೂ ರೇವತಿ ವೇದಿಕೆಯಲ್ಲಿದ್ದರು.

By Suddi9

Leave a Reply

Your email address will not be published. Required fields are marked *