ಸುದ್ದಿ9ಅ.2ಮತ್ತು 3 ಆದಿತ್ಯವಾರ ಪೊಳಲಿಯಲ್ಲಿ ನಡೆದ 19ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸಾಂಸ್ಕ್ರತಿಕ ಕಾರ್ಯಕ್ರಮದಲ್ಲಿ ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತ ಶ್ರೀ ಆ.ನ.ಭ. ಪೊಳಲಿ ಇವರಿಂದ ಸಿಂಹನೃತ್ಯ ಕಾರ್ಯಕ್ರಮ ನಡೆಯಿತು. ಇವರು ಸುಮಾರು 800ಕ್ಕೂ ಮಿಕ್ಕಿ ಸಿಂಹನೃತ್ಯ, ಪ್ರೇತ ನೃತ್ಯ ಕಾರ್ಯಕ್ರಮವನ್ನು ದಕ್ಷಿಣಕನ್ನಡ,ಉಡುಪಿ ಜಿಲ್ಲೆ, ಕೇರಳ,ಬೆಂಗಳೂರು, ಮಹಾರಾಷ್ಟ್ರಗಳಲ್ಲಿ ಪ್ರದಶರ್ೀಸಿದವರು. ಹಲವು ಸಂಘ ಸಂಸ್ಥೆಗಳಿಂದ ಪುರಸ್ಕ್ರತರಾದ ಅ.ನ.ಭ.ರವರು ಶ್ರೀ ದೇವಿ ಬಗೆಗಿನ ಹಲವು ಗೀತೆಗಳನ್ನು ರಚಿಸಿದ್ದು ಅವುಗಳಲ್ಲಿ ಹಲವಾರು ಧ್ವನಿಸುರುಳಿ ಬಿಡುಗಡೆಗೊಂಡಿವೆ. ವರ್ತಮಾನ ಪತ್ರಿಕೆಗಳಿಗೆ ಹಲವು ಲೇಖನಗಳನ್ನಿತ್ತ ಇವರು ಉತ್ತಮ ಬರಹಗಾರರು. ಶ್ರೀ ರಾಮಕೃಷ್ಣ ತಪೋವನ ಪೊಳಲಿಯ ವಿವೇಕಚೈತನ್ಯಾನಂದ ಸ್ವಾಮೀಜಿಯವರ ಆಶಯದಂತೆ ಶ್ರೀ ರಾಮಕೃಷ್ಣ ವಚನವೇದ ಭಾಗ-1 ಭಾಗ-2 ನ್ನು ತುಳುವಿಗೆ ಅನುವಾದಿಸಿದ್ದು ಮುದ್ರಣ ಹಂತದಲ್ಲಿದೆ








