ವಿಟ್ಲ : ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ರೋಟರಿ ಕ್ಲಬ್ ಬಂಟ್ವಾಳ ಟೌನ್ ಇದರ ಸಹಯೋಗದೊಂದಿಗೆ “ಇಂಟರ್ಯಾಕ್ಟ್ ಕ್ಲಬ್” ಆರಂಭಗೊಂಡಿತು.
“ರೋಟರಿ – ಇಂಟರ್ಯಾಕ್ಟ್ ಕ್ಲಬ್‍ನಿಂದ ಅಂತರಾಷ್ಟ್ರೀಯ ಮಟ್ಟದಲ್ಲಿ ಸಂಪರ್ಕ ಸಾಧಿಸಲು ಸಾಧ್ಯ. ಜೊತೆಗೆ ಪರಸ್ಪರ ಗೌರವಿಸುವ ಮನೋಭಾವ, ಮನುಷ್ಯತ್ವದ ಬೆಳವಣಿಗೆ, ಸಮಯ ಪಾಲನೆ ಮುಂತಾದ ಗುಣಗಳನ್ನು ಬೆಳೆಸಿಕೊಳ್ಳಲು ಸಹಾಯಕ ಎಂದು ಬಂಟ್ವಾಳ ಟೌನ್, ರೋಟರಿ ಕ್ಲಬ್‍ನ ಸದಸ್ಯ ಕಿರಣ್ ಹೆಗ್ಡೆ ಹೇಳಿದರು. ಶಾಲಾ ಸಂಚಾಲಕರಾದ ಪ್ರಹ್ಲಾದ್.ಜೆ.ಶೆಟ್ಟಿಯವರು “ಇಂಟರ್ಯಾಕ್ಟ್ ಕ್ಲಬ್‍ನಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ಪಾಲ್ಗೊಂಡು, ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಿ” ಎಂದರು.

ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ , ಬಂಟ್ವಾಳ ಟೌನ್‍ನ ಕಾರ್ಯದರ್ಶಿ ಉಮೇಶ್ ನಿರ್ಮಲ್, ಸದಸ್ಯರಾದ ಜಯರಾಜ್ , ಶನ್, ಶಾಲಾ ಆಡಳಿತ ಮಂಡಳಿಯ ಕಾರ್ಯದರ್ಶಿ ಕೆ.ನಾರಾಯಣ ಶೆಟ್ಟಿ, ಆಡಳಿತಾಧಿಕಾರಿ ಸಿ. ಶ್ರೀಧರ್, ಮುಖ್ಯೋಪಾಧ್ಯಾಯಿನಿಯರಾದ ವಿಜಯಲಕ್ಷ್ಮೀ ವಿ.ಶೆಟ್ಟಿ ಮತ್ತು ಗ್ರೇಸ್ ಪಿ.ಸಲ್ಡಾನ ಉಪಸ್ಥಿತರಿದ್ದರು.

ಇಂಟರ್ಯಾಕ್ಟ್ ಕ್ಲಬ್ – ಮಾಣಿ ಇದರ ಪದಾಧಿಕಾರಿಗಳಾಗಿ ವಿದ್ಯಾರ್ಥಿಗಳಾದ ಮೊಹಮ್ಮದ್ ಆಶಿಕ್ , ವಿಂದ್ಯಾ ಕೈಂತಾಜೆ , ಜೋಲ್‍ಸ್ಟನ್ ಎಮ್.ಸೆರಾವೋ, ಸಂಜನಾ ರೈ, ಆಶ್ಲೇಷ್ ಕೆ, ಪ್ರಣಮ್ಯ ಶೆಟ್ಟಿ , ಶ್ರೀಯಾ ಆಳ್ವ , ಯಶ್ಮಿತಾ , ಶ್ರೀರಕ್ಷಾ, ವಿಜೇತ್ ಕೆ.ಎಮ್ ಆಯ್ಕೆಯಾದರು. ಸಂಯೋಜಕರಾಗಿ ದೈ.ಶಿಕ್ಷಣ ಶಿಕ್ಷಕ ದಿನಕರ್ ಪೂಜಾರಿ ಆಯ್ಕೆಯಾದರು.
ರೋಟರಿ ಕ್ಲಬ್ ಬಂಟ್ವಾಳ ಟೌನ್‍ನ ಅಧ್ಯಕ್ಷರಾದ ಚಂದ್ರಹಾಸ ಶೆಟ್ಟಿ ಸ್ವಾಗತಿಸಿ , ಕಾರ್ಯಕ್ರಮ ನಿರೂಪಿಸಿದರು.
