ಸುದ್ದಿ9ಕೈಕಂಬ: ಕುಂದಾಪುರದ ಶಿರೂರಿನ ಪಿಯುಸಿ ವಿದ್ಯಾಥರ್ಿನಿ ರತ್ನಾ ಕೊಠಾರಿ(17) ನಿಗೂಢ ಹತ್ಯೆ ಸುಳಿವಿನ ಸುರುಳಿ ಬಿಚ್ಚಲಾರಂಭವಾಗಿದ್ದು, ಹತ್ಯೆಯ ಹಿಂದೆ ಏನಿದೆ ಎಂಬುದು ಕೆಲವೇ ದಿನಗಳಲ್ಲಿ ಗೊತ್ತಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೈಕ್ನಲ್ಲಿ ಬಂದ ಆಗಂತುಕ ಯಾರು?
ರತ್ನಾ ಕೊಠಾರಿ ನಾಪತ್ತೆಯಾದ ದಿನದಂದು ಆ ದಿನ ಸಂಜೆ ನಾಲ್ಕು ಗಂಟೆಯಿಂದ ಆರು ಗಂಟೆಯ ವೇಳೆಗೆ ಅಪರಿಚಿತ ವ್ಯಕ್ತಿಯೋರ್ವ ಮನೆಯಿಂದ ಎರಡು ಕಿ.ಮೀ ಅಂತರದಲ್ಲಿ ಓಡಾಡಿದ್ದ ಎಂಬ ಬಗ್ಗೆ ಮಾಹಿತಿ ಲಭ್ಯವಾಗಿದೆ. ಆತ ಯಾರು, ಎಲ್ಲಿಂದ ಬಂದ, ಯಾಕಾಗಿ ಬಂದ, ಎಂಬ ಹತ್ತು ಹಲವಾಋಉ ಪ್ರಶ್ನೆಗಳು ಇನ್ನೂ ಪ್ರಶ್ನೆಯಾಗಿಯೇ ಉಳಿದಿದೆ.
ಡಾ. ಬೋರಲಿಂಗಯ್ಯ ವಗರ್ಾವಣೆ:
ಪ್ರಕರಣ ತನಿಖೆಯ ಸ್ಥಿತಿಯಲ್ಲಿದೆ. ಆದರೆ ತನಿಖೆಯನ್ನು ಉತ್ಸಾಹದಿಂದ ಕೈಗೆತ್ತಿಕೊಂಡಿದ್ದ ಪೊಲೀಸ್ ವರಿಷ್ಠ ಬೋರಲಿಂಗಯ್ಯ ಅವರ ವಗರ್ಾವಣೆಗೊಂಡಿರುವುದು ಪ್ರಕರಣದ ತನಿಖೆಗೆ ಹಿನ್ನೆಡೆ ಸಿಕ್ಕಿದೆ.
ದೇಹದಲ್ಲಿ ಪತ್ತೆಯಾದ ಟ್ಯಾಬ್ಲೆಟ್ ಅಂಶ:
ಪ್ರಥಮ ಮರಣೋತ್ತರ ತನಿಖೆಯ ವರದಿಯಲ್ಲಿ ರತ್ನಾ ದೇಹದಲ್ಲಿ ಟ್ಯಾಬ್ಲೆಟ್ ಅಂಶ ಪತ್ತೆಯಾಗಿದೆ. ಇದೆಲ್ಲಾ ತನನಿಖೆಯ ಹಂತದಲ್ಲಿ ಮಹತ್ವದ ಅಂಶಗಳು.
ಬಹಿರಂಗಗೊಳ್ಳದ ವರದಿ:
ರತ್ನಾ ಕೊಠಾರಿ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾದ ನಂತರ ನಾಗರಿಕರು ಅತ್ಯಾಚಾರ ನಡೆಸಿ ಕೊಲೆ ನಡೆಸಿದ ಅನುಮಾನ ವ್ಯಕ್ತಪಡಿಸಿದ್ದು ವಿಧಿವಿಜ್ಞಾನದ ಪ್ರಯೋಗಕ್ಕೆ ಕಳಿಸಲಾಗಿತ್ತು. ಆದರೆ ಅದರಲ್ಲಿ ಅತ್ಯಾಚಾರ ನಡೆಸಿದ ಮಾಹಿತಿ ಇರಲಿಲ್ಲ. ನಾಗರಿಕರು ಮತ್ತೊಮ್ಮೆ ಮರಣೋತ್ತರ ಪರೀಕ್ಷೆ ನಡೆಸಬೇಕು ಎಂದು ಆಗ್ರಪಡಿಸಿದ ಹಿನ್ನೆಲೆಯಲ್ಲಿ ಮತ್ತೊಮ್ಮೆ ವಿಧಿವಿಜ್ಞಾನದ ಪ್ರಯೋಗ ನಡೆಸಲಾಗಿತ್ತು. ಆದರೆ ಅದರ ವರದಿ ಇನ್ನೂ ಹೊರಹಾಕದಿರುವುದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ.
ಕೆಲವರು ರತ್ನಾ ಹೆಜ್ಜೇನು ದಾಳಿ ನಡೆಸಿ ಮೃತಪಟ್ಟಿದ್ದಾಳೆ ಎಂದು ಅನುಮಾನ ವ್ಯಕ್ತಪಡಿಸಿದ್ದರು. ಆದರೆ ಆ ರೀತಿ ಆಗಿದ್ದರೆ ಹೆಜ್ಜೇನು ಕಡಿದ ನಂಜಿನ ಅಂಶಗಳು ಮೃತದೇಹದಲ್ಲಿ ಪತ್ತೆಯಾಗಿರಬೇಕಾಗಿತ್ತು.
ಸಾವಿನ ಹಿಂದೆ ನಿಗೂಢತೆ:
ರತ್ನಾ ಕೊಠಾರಿ ಸಾವಿನ ಹಿಂದೆ ಇನ್ನೂ ನಿಗೂಢತೆ ಆವರಿಸಿದೆ. ಕಾಲೇಜಿಗೆ ದುರ್ಗಮ ಹಾದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ರತ್ನಾ ಕೊಠಾರಿ ನಿಗೂಢವಾಗಿ ಮೃತಪಟ್ಟಿದ್ದು ಎರಡು ದಿನಗಳ ಬಳಿಕ ಆಕೆಯ ಶವ ಕೊಳೆತ ಸ್ಥಿತಿಯಲ್ಲಿ ಪೊದೆಯಲ್ಲಿ ಪತ್ತೆಯಾಗಿತ್ತು. ಆಕೆಯ ಸಂಬಂಧಿಯೋರ್ವನನ್ನು ವಿಚಾರಣೆಗೊಳಪಡಿಸಿ ಬಿಡಲಾಗಿತ್ತು. ಆದರೆ ಈ ಪ್ರಕರಣ ಇನ್ನೂ ನಿಗೂಢವಾಗಿದ್ದು ಮತ್ತೊಂದು ಸೌಜನ್ಯಾ ಪ್ರಕರಣ ಆಗಬುದೇ ಎಂಬ ಸಂಶಯವೂ ಆವರಿಸಿದೆ.
