ಬಂಟ್ವಾಳ:ಮನವಿ,ಪ್ರತಿಭಟನೆ,ಸಾರ್ವಜನಿಕರ ಟೀಕೆ,ಮಾಧ್ಯಮಗಳಿಗೂ ನಿತ್ಯ ಆಹಾರವಾಗಿದ್ದ   ಹದಗೆಟ್ಟು ಸಂಚಾರಕ್ಕೆ ಆಯೋಗ್ಯವಾದ ಬಿ.ಸಿ.ರೋಡಿನ ಸರ್ವಿಸ್ ರಸ್ತೆಯನ್ನು ಕಾಂಕ್ರೀಟಿಕರಣ ಕಾಮಗಾರಿಯನ್ನು ರಾ.ಹೆ.ಪ್ರಾ. ಮಂಗಳವಾರ ಕೈಗತ್ತಿಗೊಂಡಿದ್ದು,ಕೊನೆಗೂ ಸಮಸ್ಯೆಯ ಮುಕ್ತಿಗೆ ಮನಸ್ಸು ಮಾಡಿದೆ. ಆರ್.ಸಿ.ಪಿ.ಸಂಸ್ಥೆ ಈ ಸರ್ವಿಸ್ ರಸ್ತೆಯ ಕಾಂಕ್ರೀಟಿಕರಣ ಕಾಮಗಾರಿಯ ಗುತ್ತಿಗೆಯನ್ನು ವಹಿಸಿದೆ.ಸದ್ಯಕ್ಕೆ ಟ್ರಾಫಿಕ್ ಸಮಸ್ಯೆ ಎದುರಾಗುವ ಹಿನ್ನಲೆಯಲ್ಲಿ   ಮೇಲ್ಸತುವೆಯ  ಮಂಗಳೂರು ಕಡೆಗೆ ಎಂಟ್ರಿಯಾಗುವಲ್ಲಿಂದ 180 ಮೀ.ನಷ್ಟು ಉದ್ದಕ್ಕೆ  ಮೊದಲ ಹಂತದಲ್ಲಿ ಕಾಮಗಾರಿ ನಡೆಸಲಿದೆ.1

ಈ ಕಾಂಕ್ರೀಟಿಕರಣ ಕಾಮಗಾರಿ ಒಂದು ತಿಂಗಳಲ್ಲಿ ಪೂರ್ಣಗೊಳಿಸಿ,ಉಳಿದ ಭಾಗವನ್ನು ಬಳಿಕ ಆರಂಭಿಸಲಾಗುವುದು ಎಂದು ಗುತ್ತಿಗೆದಾರ ಸಂಸ್ಥೆಯ ಮೂಲಗಳು ತಿಳಿಸಿವೆ. ಬಿ.ಸಿ.ರೋಡ್ ಸರ್ವಿಸ್ ರಸ್ತೆ ಕಾಂಕ್ರೀಟಿಕರಣ ಸೇರಿದಂತೆ ಮೂರು ಕಡೆಗಳಲ್ಲಿ ರಸ್ತೆ ದುರಸ್ಥಿಗೆ ೧೯ ಕೋ.ರೂ.ಮಂಜೂರುಗೊಂಡಿದ್ದು, ಶೀಘ್ರದಲ್ಲೆ ಕಾಮಗಾರಿ ಆರಂಭಗೊಳ್ಳುವ ಕುರಿತು ಸಂಸದ ನಳಿನ್ ಕುಮಾರ್ ಕಟೀಲ್ ಸುದ್ದಿಗಾರರಿಗೆ ಮಾಹಿತಿ ನೀಡಿದ್ದರು.ಇದೀಗ ಸಂಸದ ನಳಿನ್ ಕುಮಾರ್ ಕಟೀಲ್ ನಿರ್ದೇಶನದ ಮೇರೆಗೆ ಕಾಂಕ್ರೀಟಿಕರಣ ಕಾಮಗಾರಿ ಕೈ ಗೆತ್ತಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.ಈ ನಡುವೆ ಸರ್ವಿಸ್ ರಸ್ತೆ ಬದಿ ಕಾಂಕ್ರೇಟ್ ಚರಂಡಿಯನ್ನು ನಿರ್ಮಿಸಲಾಗಿದ್ದು,ಅದರ ಸಮಾನಂತರ ಎತ್ತರದಲ್ಲಿ ಪ್ರಸ್ತುತ ಕಾಂಕ್ರೀಟ್ ರಸ್ತೆ ನಿರ್ಮಾಣವಾಗಲಿದೆ ಎಂದು ತಿಳಿದು ಬಂದಿದೆ. ಈ ಸರ್ವಿಸ್ ರಸ್ತೆಯಲ್ಲಿ ಕಳೆದೊಂದು ವರ್ಷದಲ್ಲಿ ಹೊಂಡಗುಂಡಿಗಳು ಬಿದ್ದು  ವಾಹನಗಳ ಸುಗಮ ಸಂಚಾರಕ್ಕೆಆಡಚಣೆಯಾಗುತ್ತಿತ್ತು.ಮಳೆಗಾಲದಲ್ಲಂತೂ ಹೊಂಡದ ಗಾತ್ರಗಳು ಕೆರೆಯಾಂತಾಗಿ ಮಾರ್ಪಟ್ಟಿತ್ತು.ವಾಹನಗಳು ಬಿಡಿ ಪಾದಚಾರಿಗಳಿಗೂ ಸಂಚಾರಕ್ಕೆ ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿತ್ತು ಈ ಸರ್ವಿಸ್ ರಸ್ತೆ,. ಇದರ ದುರಸ್ಥಿಗೆ ಒತ್ತಾಯಿಸಿ  ವಾಹನ ಚಾಲಕ ಸಮುದಾಯ ಪ್ರತಿಭಟನೆ ನಡೆಸಿತ್ತು.

2

ಇದಕ್ಕೆ ಇಲಾಖೆ ಕಿವಿಗೊಡದಿದ್ದರಿಂದ ರೋಸಿ ಹೋದ ವಾಹನ ಚಾಲಕರೇ ಬಿಕ್ಷೆ ಎತ್ತಿ ಗುಂಡಿ ಮುಚ್ಚಿಸಿ ರಾ.ಹೆ.ಪ್ರಾ.ದ ಇಲಾಖೆಯ ಕಣ್ತೆರೆಯಲು ಯತ್ನಿಸಿದರೂ ಇಲಾಖೆ ಮಾತ್ರ ಜಪ್ಪಯ್ಯ ಅನ್ನಲಿಲ್ಲ,ಈನಡುವೆ ಸಾರ್ವಜನಿಕರ ಟೀಕೆಯ ಹಿನ್ನಲೆಯಲ್ಲಿ  ಪುರಸಭೆ ಒಂದೆರಡು ಬಾರಿ ಗುಂಡಿ ಮುಚ್ಚುವ ನಾಟಕವಾಡಿತ್ತು ಅದೆಲ್ಲವೂ ಮಳೆಗೆ ಕೊಚ್ಚಿ ಹೋಗಿ ಮತ್ತೆ  ರಸ್ತೆಯಲ್ಲಿ ಯಥಾವಥಾಗಿ ಗುಂಡಿ ಕಾಣಿಸಲಾರಂಭಿಸಿತು.ಹಾಗೆಯೇ  ಮಳೆ ನೀರು ಹರಿಯಲಾಗದೆ ಈಜುಕೊಳವು ನಿರ್ಮಾಣವಾಗಿತ್ತು.ಈ ರಸ್ತೆ ಹದಗೆಟ್ಟ ಹಿನ್ನಲೆಯಲ್ಲಿ  ರಾಜಕೀಯ ನಾಯಕರಿಗೂ ಪರಸ್ಪರ ಕೆಸರೆಚಾಟಕ್ಕೂ ನಾಂದಿಹಾಡಿದ್ದರೆ,ಸ್ಥಳೀಯವಾಗಿ  ಮಾಧ್ಯಮಗಳಿಗೂ ಆಹಾರವಾಗಿತ್ತು.

ಈ ಸರ್ವೀಸ್ ರಸ್ತೆಯುಅಗಲೀಕರಣಗೊಳ್ಳುವ ನಿಟ್ಟಿ ನಲ್ಲಿ ರಸ್ತೆಯಲ್ಲಿರುವ ವಿದ್ಯುತ್ ಕಂಬವನ್ನು ಸ್ಥಳಾಂತರಿಸಬೇಕಾಗಿದೆ ಅಲ್ಲದೆ ಇಲ್ಲಿರುವ ಕೆಲ ಕಟ್ಟಡಗಳಿಗೆ ಪರಿಹಾರವನ್ನು ನೀಡಲಾಗಿದೆಯೆನ್ನಲಾಗಿದ್ದರೂ ಅದರ ತೆರವು ಪೂರ್ಣವಾಗಿ ನಡೆಯದಿರುವುದು ಕಾಮಗಾರಿಗೆ ಅಡ್ಡಿಯಾಗಿದೆ ಎಂದು ಹೇಳಲಾಗುತ್ತಿದೆ.ಅಂತು ಸರ್ವಿಸ್ ರಸ್ತೆಯ ಗುಂಡಿಗೊಂದು ಮುಕ್ತಿ ಸಿಕ್ಕಿರುವ ನಿಟ್ಟಿಸಿರು ವಾಹನ,ಸಾರ್ವಜನಿಕರು ಬಿಡುವಂತಾಗಿದೆ

By suddi9

Leave a Reply

Your email address will not be published. Required fields are marked *