ಬಂಟ್ವಾಳ: ದುಷ್ರ್ಕಮಿಗಳಿಂದ ಇತ್ತೀಚೆಗೆ ಬಿ.ಸಿ.ರೋಡ್‍ನಲ್ಲಿ ಹತ್ಯೆಗೀಡಾದ ಶರತ್ ಮಡಿವಾಳರವರ ಮನೆಗೆ ಬಿಜೆಪಿ ರಾಜ್ಯ ಸಂಘಟನಾ ಕಾರ್ಯದರ್ಶಿ ಬಿ.ಪಿ ಅರುಣ್ ಕುಮಾರ್ ರವರು ಬುಧವಾರ ಭೇಟಿ ನೀಡಿದರು. ಈ ಸಂದರ್ಭದಲ್ಲಿ  ಶರತ್ ಮಡಿವಾಳರ ತಂದೆ ತನಿಯಪ್ಪ ಮಡಿವಾಳರಿಂದ ರಘಟನೆಯ ಸಂಪೂರ್ಣ ವಿವರವನ್ನು ಪಡೆದು ಮನೆಮಂದಿಗೆ ಸಾಂತ್ವಾನ ಹೇಳಿದರು. ಬಿಜೆಪಿ ದ.ಕ ಜಿಲ್ಲಾ ಅಧ್ಯಕ್ಷರಾದ ಸಂಜೀವ ಮಠಂದೂರು, ಪ್ರಧಾನಕಾರ್ಯದರ್ಶಿ ಕಿಶೋರ್ ರೈ, ಹಿಂದುಳಿದ ವರ್ಗ ಮೋರ್ಚಾ ಮಂಗಳೂರು ದಕ್ಷಿಣ ಮಂಡಲದ ಅಧ್ಯಕ್ಷ  ಸದಾನಂದ ನಾವೂರ, ಬಂಟ್ವಾಳ ಮಂಡಲದ ಅಧ್ಯಕ್ಷ ಬಿ.ದೇವದಾಸ ಶೆಟ್ಟಿ, ಬಿಜೆಪಿ ಪ್ರಮುಖರಾದ ರಾಜೇಶ್ ನಾೈಕ್ ಉಳಿಪ್ಪಾಡಿ, ಪುಷ್ಪರಾಜ್ ಚೌಟ, ನಂದರಾಮ ರೈ, ಪ್ರವೀಣ್ ಗಟ್ಟಿ, ರೂಪೇಶ್ ಆಚಾರ್ಯ ಹಾಗೂ ಸ್ಥಳೀಯ ಬಿಜೆಪಿ ಪ್ರಮುಖರು ಉಪಸ್ಥಿತರಿದ್ದರು.21314588_1458217097600572_1719981671742941300_n

By suddi9

Leave a Reply

Your email address will not be published. Required fields are marked *