ಬಂಟ್ವಾಳ: ತಾಲ್ಲೂಕಿನ ಪಿಲಾತಬೆಟ್ಟು ಗ್ರಾಮದ ಪುರ್ಬಿ ಎಂಬಲ್ಲಿನ ಗುಡ್ಡ ಪ್ರದೇಶದಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಕೋಳಿ ಅಂಕಕ್ಕೆ ಪುಂಜಾಲಕಟ್ಟೆ ಠಾಣಾಧಿಕಾರಿ ರಾಮ ನಾಯ್ಕ್ ನೇತೃತ್ವದ ಪೊಲೀಸರು ದಿಢೀರ್ ದಾಳಿ ನಡೆಸಿ ನಾಲ್ಕು ಸಜೀವ ಕೋಳಿ ಸಹಿತ ಇಲ್ಲಿನ ಎಂಟು ಮಂದಿಯನ್ನು ಬಂಧಿಸಿದ ಘಟನೆ ಮಂಗಳವಾರ ಸಂಜೆ ನಡೆದಿದೆ.

ಬಂಧಿತರನ್ನು ಸ್ಥಳೀಯ ನಿವಾಸಿಗಳಾದ ಉಮ್ಮಣ್ಣ ಪೂಜಾರಿ, ಗಿರಿಯಪ್ಪ, ರಾಮಣ್ಣ ನಾಯ್ಕ್, ರಘುರಾಮ ಶೆಟ್ಟಿ, ಬೇಬಿ ಪೂಜಾರಿ, ಕೃಷ್ಣಪ್ಪ ಪೂಜಾರಿ, ಸುದೀಪ್ ಶೆಟ್ಟಿ, ದಿವಾಕರ ಶೆಟ್ಟಿ ಎಂದು ಗುರುತಿಸಲಾಗಿದ್ದು, ಇವರು ಜೂಜಿಗೆ ಬಳಸಿದ್ದಾರೆ ಎನ್ನಲಾದ ರೂ 3,170 ಮೊತ್ತದ ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
