ಬಂಟ್ವಾಳ: ಸಮಾಜದಲ್ಲಿ ಭಕ್ತರ ನೋವು ಮತ್ತು ಅವರ ಕಷ್ಟ -ಕಾರ್ಪಣ್ಯಗಳನ್ನು ಅಗಲವಾದ ಕಿವಿಗಳಿಂದ ಆಲಿಸಿ, ಅವೆಲ್ಲವನ್ನೂ ತನ್ನ ದೊಡ್ಡ ಹೊಟ್ಟೆಗೆ ಬರಮಾಡಿಕೊಂಡು ಪುಟ್ಟ ಕಣ್ಣಿನಿಂದ ಸೂಕ್ಷ್ಮವಾಗಿ ಗ್ರಹಿಸಿ ಬಳಿಕ ಪುಟ್ಟ ಇಲಿ ವಾಹನದಲ್ಲಿ ಸಂಚರಿಸುತ್ತಾ ಉದ್ದದ ಸೊಂಡಿನಿಂದ ದುಷ್ಟರನ್ನು ಶಿಕ್ಷಿಸಿ ಶಿಷ್ಟರ ರಕ್ಷಣೆಗೆ ನಿಂತಿರುವ ಬುದ್ಧಿಶಾಲಿ ಗಣಪತಿ ದೇವರ ಆರಾಧನೆಯಿಂದ ಸದೃಢ ಮತ್ತು ಸುಸಂಸ್ಕೃತ ನಿರ್ಮಾಣ ಸಾಧ್ಯವಾಗುತ್ತದೆ ಎಂದು ಧರ್ಮಸ್ಥಳದ ಧಮರ್ಾಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.

26btl-Hegde
ತಾಲ್ಲೂಕಿನ ಸಿದ್ಧಕಟ್ಟೆ ಹಿಂದೂ ಹಿತರಕ್ಷಣಾ ವಿಶ್ವಸ್ಥ ಮಂಡಳಿ ಮತ್ತು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ ಸಿದ್ಧಕಟ್ಟೆ ಕೇಂದ್ರ ಮೈದಾನದಲ್ಲಿ 30ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಪ್ರಯುಕ್ತ ಶನಿವಾರ ಏರ್ಪಡಿಸಿದ್ದ ಧಾರ್ಮಿಕ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಸರ್ಕಾರದ ವಿವಿಧ ಯೋಜನೆಗಳ ಜೊತೆಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಗ್ರಾಮೀಣ ಪ್ರದೇಶ ಅಭಿವೃದ್ಧಿ ಮತ್ತು ಮಹಿಳಾ ಸಬಲೀಕರಣ ಸಾಧ್ಯವಾಗಿದೆ ಎಂದರು.ಮಾಣಿಲ ಶ್ರೀಧಾಮ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಿದರು. ಭಜನೆ ಮತ್ತು ಶಿಸ್ತಿನ ಆರಾದನೆಗೆ ದೇವರು ಬೇಗನೆ ಒಲಿಯುತ್ತಾರೆ. ಇದಕ್ಕಾಗಿ ಧಾರ್ಮಿ ಕ ಆಚರಣೆಯಲ್ಲಿ ಉತ್ತಮ ಸಂಸ್ಕಾರ ಇರಬೇಕು ಎಂದರು.

ಪತ್ರಕರ್ತ ಶ್ರೀಕಾಂತ ಶೆಟ್ಟಿ ಕಾರ್ಕಳ ದಿಕ್ಸೂಚಿ ಭಾಷಣ ಮಾಡಿದರು. ಯುವಜನತೆ ಅತಿಯಾದ ಆಧುನಿಕತೆಗೆ ಬದಲಾಗಿ ವೇದ-ಉಪನಿಷತ್ತಿನ ಅಧ್ಯಯನ ನಡೆಸುವ ಮೂಲಕ ದೇಶಭಕ್ತಿ ಜೊತೆಗೆ ಸಂಸ್ಕಾರಯುತ ಮತ್ತು ಮಾನವೀಯ ಮೌಲ್ಯ ಬೆಳೆಸಿಕೊಳ್ಳಬೇಕು ಎಂದರು. ಮಂಗಳೂರು ಬಂಟರ ಮಾತೃಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಆನಂದ ಶೆಟ್ಟಿ, ಸಿ.ಎ. ಬಾಲಕೃಷ್ಣ ಭಟ್ ಪುತ್ತಿಗೆ, ಮಾವಿನಕಟ್ಟೆ ‘ಯಜಮಾನ’ ಸಂಸ್ಥೆ ಮುಖ್ಯಸ್ಥ ಟಿ.ವರದರಾಜ ಪೈ ಮತ್ತಿತರರು ಶುಭ ಹಾರೈಸಿದರು.ಇದೇ ವೇಳೆ ಶಿಲ್ಪಿ ಸದಾಶಿವ ಶೆಣೈ ಬಂಟ್ವಾಳ ಇವರನ್ನು ಸನ್ಮಾನಿಸಲಾಯಿತು.

ಸಮಿತಿ ಅಧ್ಯಕ್ಷ ಹೇಮಚಂದ್ರ ಗೌಡ, ಟ್ರಸ್ಟಿನ ಅಧ್ಯಕ್ಷ ವಿಶ್ವನಾಥ ಶೆಟ್ಟಿಗಾರ್, ಗೌರವಾಧ್ಯಕ್ಷ ಲೋಕಯ್ಯ ಗಾಡಿಪಲ್ಕೆ, ಮಹಿಳಾ ಸಮಿತಿ ಅಧ್ಯಕ್ಷೆ ಉಷಾಕಿರಣ್ ಮತ್ತಿತರರು ಇದ್ದರು.
ಸಮಿತಿ ಮಾಜಿ ಅಧ್ಯಕ್ಷ ಅಚ್ಚುತ ಆಚಾರ್ಯ ಸ್ವಾಗತಿಸಿದರು. ಕೆ.ನೋಣಯ ಮೂಲ್ಯ ವರದಿ ವಾಚಿಸಿದರು.
ವಸಂತ ಕುದ್ಕೋಳಿಬೈಲು ವಂದಿಸಿದರು. ಸಂತೋಷ್ ಸಿದ್ಧಕಟ್ಟೆ ಕಾರ್ಯಕ್ರಮ ನಿರೂಪಿಸಿದರು.

By Suddi9

Leave a Reply

Your email address will not be published. Required fields are marked *