ಸುದಿ9ಮುಲ್ಕಿ: ಪೊಲೀಸ್ ಠಾಣಾ ವ್ಯಾಪ್ತಿಯ ಏಳಿಂಜೆ ಜಂಕ್ಷನ್ ಸಮೀಪ ಇಂದು ಸಂಜೆ 4 ಗಂಟೆಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದರೆ ಇಬ್ಬರು ಗಂಭೀರ ಗಾಯಗೊಂಡಿದ್ದಾರೆ. ಸ್ನೇಹಿತರ

ಮೃತನನ್ನು ಮೂಲ್ಕಿ-ಲಿಂಗಪ್ಪಯ್ಯಕಾಡು ನಿವಾಸಿ ಮಹಾಂತೇಶ್ ಎಂದು ಹೆಸರಿಸಲಾಗಿದೆ. ಈತ ತನ್ನ ಇನ್ನೂ ರಿಜಿಸ್ಟ್ರೇಷನ್ ಆಗಿರದ ಹೊಂಡಾ ಶೈನ್ ಬೈಕ್;ನಲ್ಲಿ  ಸ್ನೇಹಿತನ   ಜೊತೆ ಜಾರಿಗೆಕಟ್ಟೆ ಕಡೆಯಿಂದ ಕಿನ್ನಿಗೋಳಿಗೆ ಬರುತ್ತಿದ್ದಾಗ ಅತೀವೇಗ ಹಾಗೂ ಅಜಾಗರೂಕತೆಯ ಚಾಲನೆಯಿಂದ ನಿಯಂತ್ರಣ ಕಳೆದುಕೊಂಡ ಬೈಕ್ ರಸ್ತೆಯ ಬದಿಯಲ್ಲಿದ್ದ ಮೈಲುಗಲ್ಲಿಗೆ ಡಿಕ್ಕಿ ಹೊಡೆಯಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಡಿಕ್ಕಿ ಹೊಡೆದ ರಭಸಕ್ಕೆ ಮಹಾಂತೇಶ್ ತಲೆ ಒಡೆದು ಸ್ಥಳದಲ್ಲೇ ಸಾವನ್ನಪ್ಪಿದರೆ ಹಿಂಬದಿಯಲ್ಲಿದ್ದ ಬಸವರಜ್  ಗಂಭೀರ ಗಾಯಗೊಂಡಿದ್ದಾನೆ.  ಆತನನ್ನು ಎ.ಜೆ. ಆಸ್ಪತ್ರೆಯಲ್ಲಿ ದಾಖಲು ಮಾಡಿದ್ದರೆ

ಬೈಕ್ ಡಿಕ್ಕಿ ಹೊಡೆಸಿದ ವೇಗ ಎಷ್ಟಿತ್ತೆಂದರೆ ಮೈಲುಗಲ್ಲು ತುಂಡಾಗಿ 10 ಅಡಿಗಳಷ್ಟು ದೂರ ಹಾರಿ ಬಿದ್ದಿದ್ದರೆ ಅಲ್ಲಿದ್ದ ತಂತಿಕಂಬಕ್ಕೆ ಮಹಾಂತೇಶ್ ತಲೆ ಬಡಿದಿದೆ. ತಲೆಯೊಡೆದು ಮೆದುಳು ರಸ್ತೆಯಲ್ಲಿ ಚೆಲ್ಲಲ್ಪಟ್ಟ ದೃಶ್ಯ ಭೀಕರವಾಗಿತ್ತು. ಮಹಾಂತೇಶ್ ತಂತಿಕಂಬಕ್ಕೆ ಬಡಿದು ಸಾವನ್ನಪ್ಪಿದರೆ ಉಳಿದವರು ರಸ್ತೆಗೆಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದಾರೆ.

ಘಟನೆಯ ಸಂದರ್ಭ ಮಹಾಂತೇಶ್ ಅತೀವೇಗವಾಗಿ ಬೈಕ್ ಚಲಾಯಿಸುತ್ತಿದ್ದು ಆತ ಗಾಂಜಾ ನಶೆಯಲ್ಲಿದ್ದ ಎನ್ನಲಾಗುತ್ತಿದೆ. ನಶೆಯಲ್ಲಿ ಬೈಕನ್ನು ಅತೀವೇಗವಾಗಿ ಚಲಾಯಿಸಿ ನಿಯಂತ್ರಣ ಕಳೆದುಕೊಂಡು ರಸ್ತೆಬದಿಯಲ್ಲಿದ್ದ ಮೈಲುಗಲ್ಲಿಗೆ ಡಿಕ್ಕಿ ಹೊಡೆದು ಬಳಿಕ ತಂತಿಕಂಬಕ್ಕೆ ಗುದ್ದಿದ್ದಾನೆ. ಹೊಸ ಬೈಕ್ ಸಂಪೂರ್ಣ ನಜ್ಜುಗುಜ್ಜಾಗಿದೆ. ಈ ಭಾಗದಲ್ಲಿ ಗಾಂಜಾ ಅಡ್ಡೆಗಳು ಕಾರ್ಯಾಚರಿಸುತ್ತಿದ್ದು ಯುವಕರು ಗಾಂಜಾ ದಾಸರಗುತ್ತಿದ್ದಾರೆ. ಆದಿತ್ಯವಾರ ಯುವಕರು ಮದ್ಯ, ಗಾಂಜಾ ಮತ್ತಿತರ ಮಾದಕ ವಸ್ತುಗಳ ನಶೆ ತಲೆಗೇರಿಸಿಕೊಂಡು ದುರ್ಘಟನೆಗೆ ಈಡಾಗುತ್ತಿರುವ ಘಟನೆಗಳೂ ಹೆಚ್ಚುತ್ತಿವೆ.

6

1

2--

3

4

5

 

By suddi9

Leave a Reply

Your email address will not be published. Required fields are marked *