ಬಂಟ್ವಾಳ: ಕರ್ನಾಟಕ ರಾಜ್ಯ ಕರಾವಳಿ ಕುಲಾಲ ಕುಂಬಾರರ ಮಹಿಳಾ ಸಂಘದ ಬಿಸಿರೋಡು ಘಟಕದ ವತಿಯಿಂದ ಬಿಸಿರೋಡಿನ ಶ್ರೀ ಚಂಡಿಕಾಪರಮೇಶ್ವರೀ ದೇವಿ ದೇವಸ್ಥಾನದಲ್ಲಿ ಶ್ರಾವಣ ಮಾಸದ ಶುಕ್ರವಾರದಂದು ಮಹಿಳೆಯರಿಗಾಗಿ ಸಾಮೂಹಿಕ ಕುಂಕುಮಾರ್ಚನೆ ಪೂಜೆ ನಡೆಯಿತು. ಸುಮಂಗಲಿಯರಿಗೆ ವಿಶೇಷವಾಗಿ ಈ ಪೂಜೆಯನ್ನು ವ್ಯವಸ್ಥೆ ಮಾಡಲಾಗಿತ್ತು. ಸುಮಂಗಲಿಯರಿಗೆ ಸಕಲ ಸೌಲಭ್ಯವನ್ನು ನೀಡುವ, ಇಷ್ಟಾರ್ಥ ಈಡೇರಿಸುವ ಹಾಗೂ ಅವಿವಾಹಿತರಿಗೆ ಕ್ಷಿಪ್ರ ವಿವಾಹವನ್ನು ಕರುಣಿಸುವ ಸಲುವಾಗಿ ವಿಶೇಷ ಪ್ರಾರ್ಥನೆ ನಡೆಸಲಾಯಿತು. ಕರ್ನಾಟಕ ರಾಜ್ಯ ಕರಾವಳಿ ಕುಲಾಲ ಕುಂಬಾರರ ಮಹಿಳಾ ಸಂಘದ ಬಿಸಿರೋಡು ಘಟಕದ ಅಧ್ಯಕ್ಷೆ ಯಶೋದ ಮತ್ತು ಸರ್ವ ಸದಸ್ಯರು ಹಾಜರಿದ್ದರು. 
