ಸುದ್ದಿ9ಉಳಾಯಿಬೆಟ್ಟು:ನಶಿಸುತ್ತಿರುವ ಭತ್ತದ ಕೃಷಿಗೆ ಪೂರಕವಾಗಿ ಶ್ರೀ ಪದ್ಧತಿ ಅಳವಡಿಸುವುದರಿಂದ ಹೆಚ್ಚು ಇಳುವರಿ ಮತ್ತು ಅದಾಯ ಗಳಿಸಲು ಸಾಧ್ಯ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ರಾಘವರವರು ಅಭಿಪ್ರಾಯ ಪಟ್ಟರು. ಅವರು ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ಮಾರ್ಗದರ್ಶನದಲ್ಲಿ ಉಳಾಯಿಬೆಟ್ಟು ಶ್ರೀಮತಿ ಶಾರದಾ ದರಿಬಾಗಿಲು ಇವರ ಮನೆಯಲ್ಲಿ ಶ್ರೀ ಪದ್ಧತಿ ಭತ್ತದ ಪ್ರಾತ್ಯಕ್ಷಿಕೆಯಲ್ಲಿ ಮುಖ್ಯ ಅಥಿತಿಯಾಗಿ ಮಾತನಾಡುತ್ತಿದ್ದರು. ಸ್ಥಳಿಯ ಒಕ್ಕೂಟದವರು ಮತ್ತು ಊರಿನ ಕೃಷಿಕರು ಸೇರಿಕೊಂಡು ಶ್ರೀ ಪದ್ಧತಿ ಭತ್ತದ ನಾಟಿಯ ಪ್ರಾತ್ಯಕ್ಷಿಕೆಯನ್ನು ನಡೆಸಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಪ್ರಗತಿಪರ ಕೃಷಿಕರಾದ ಪ್ರಭಾವತಿ ಜೆ.ಪಟ್ರಕೋಡಿ ಉದ್ಘಾಟಿಸಿದರು. ಮಂಗಳೂರು ತಾಲೂಕಿನ ಕೃಷಿ ಅಧಿಕಾರಿ ಜನಾರ್ಧನ ಎಮ್ ಬೀಜದ ಆಯ್ಕೆ, ಸಸಿ ಮಾಡಿ ತಯಾರಿ, ನಾಟಿ ಪದ್ಧತಿ, ಗದ್ದೆ ತಯಾರಿ ಕಳೆ ನಿವರ್ಾಹಣೆಗೆ ಹಾಗೂ ಗೊಬ್ಬರ ಒದಗಣೆ ಬಗ್ಗೆ ಮಾಹಿತಿ ನೀಡಿದರು.
ವಲಯದ ಮೇಲ್ವಿಚಾರಕರಾದ ನಾಗೇಶ್ ಪಿ. ಪ್ರಾಸ್ತಾವಿಕ ಮಾತನಾಡಿದರು. ಒಕ್ಕೂಟದ ಅಧ್ಯಕ್ಷರಾದ ಶಾರದಾ, ಹರೀಶ್, ಉಪಸ್ಥಿತರಿದ್ದರು. ಶ್ವೇತ ಪ್ರಾಥರ್ಿಸಿ, ಸಂದ್ಯಾ ಕಾರ್ಯಕ್ರಮ ನಿರೂಪಿದರು. ಸುರೇಶ್ ಸ್ವಾಗತಿಸಿ, ತುಕರಾಮ ಧನ್ಯವಾದವಿತರು. ಒಕ್ಕೂಟದ ಪದಾಧಿಕಾರಿಗಳು, ಸೇವಾ ಪ್ರತಿನಿಧಿ ಹಾಗೂ ಸದಸ್ಯರು ಹಾಗೂ ಕೃಷಿಕರು ನಾಟಿ
ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು.

