ಸುದ್ದಿ9 ಮಂಗಳೂರು ನಗರದ ಪಡೀಲ್ ಅಳಿಕೆಯ ಗುಜರಾತ್ ಹೈಸ್ಕೂಲ್ ಬಳಿ ಮದ್ಯವಯಸ್ಸಿನ ಮಹಿಳೆಯನ್ನು ಕೊಲೆಮಾಡಿರುವ ಘಟನೆ ಅಳಿಕೆಯಲ್ಲಿ ನಡೆದಿದೆ. ಕೊಲೆಯಾದ ಮಹಿಳೆಯ ಹೆಸರು ಸುಶೀಲ ಎಂದು ತಿಳಿದು ಬಂದಿದೆ. ಗುವಾರ ತಡರಾತ್ರಿ ಕೊಲೆಯಾಗಿರಬಹುದೆಂದು ಪೋಲೀಸರ ಪ್ರಾಥಮಿಕ ತನಿಖೆಯ ವೇಳೆ ತಿಳಿದು ಬಂದಿದೆ.
ಮನೆಯಲ್ಲಿ ಕಾರ್ ಶೆಡ್ನಲ್ಲಿದ್ದ ಕಾರು ಕಳವಾಗಿದ್ದು ಮೇಲ್ನೋಟಕ್ಕೆ ಕಳ್ಳರೇ ಹತ್ಯೆಗೈದಿದ್ದಾರೆ ಎಂದು ಪೋಲೀಸರು ತಿಳಿಸಿದ್ದಾರೆ. ಪೋಲೀಸರು ತನಿಖೆ ಮುಂದುವರೆಸಿದ್ದು ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ
