ಮಾಣಿ : ಧಾರ್ಮಿಕ ಸಾಮಾಜಿಕ ರಾಜಕೀಯ ಶೈಕ್ಷಣಿಕ ಮುಂತಾದ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಬಾಲಕೃಷ್ಣ ಆಳ್ವ ಕೊಡಾಜೆ ಇವರು ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಮಂಗಳೂರು ಇದರ ಸದಸ್ಯರಾಗಿ ನೇಮಕಗೊಂಡಿದ್ದಾರೆ. ಸಚಿವ ಬಿ.ರಮಾನಾಥ ರೈ ರವರ ಶಿಫಾರಸಿನ ಮೇರೆಗೆ ಸರಕಾರ ಇವರ ನೇಮಕಾತಿ ಮಾಡಿದೆ. ಇವರು ಎರಡು ಅವಧಿಗಳಲ್ಲಿ ಪಂ.ಸದಸ್ಯರಾಗಿ ಹಲವು ಸಂಘಸಂಸ್ಥೆಗಳಲ್ಲಿ ತೊಡಗಿಸಿಕೊಂಡು ಮೆಸ್ಕಾಂ ನ ತಾಲೂಕು ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ. KAR_2567

By Suddi9

Leave a Reply

Your email address will not be published. Required fields are marked *